Site icon Vistara News

Mahua Moitra: ಉದ್ಯಮಿಗೆ ಸಂಸತ್‌ ಐಡಿ, ಪಾಸ್‌ವರ್ಡ್‌ ಕೊಟ್ಟಿದ್ದು ನಿಜ ಎಂದ ಮಹುವಾ ಮೊಯಿತ್ರಾ!

Supreme Court issue notice to lok sabha secretary about Mahua Moitra expulsion

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅದಾನಿ ಗ್ರೂಪ್ಅನ್ನು (Adani Group) ಗುರಿಯಾಗಿಸಿಕೊಂಡು ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರು ಉದ್ಯಮಿ ದರ್ಶನ್ ಹಿರಾನಂದನಿ (Darshan Hiranandani) ಅವರಿಂದ ಲಂಚ (Cash For Question Row) ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆರೋಪ ಪ್ರಕರಣಕ್ಕೆ ದೇಶಾದ್ಯಂತ ಸುದ್ದಿಯಾಗಿದೆ. ಅಲ್ಲದೆ, ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್‌ ಹಿರಾನಂದನಿ ಅವರಿಗೆ ಸಂಸತ್‌ ಐಡಿ ಹಾಗೂ ಪಾಸ್‌ವರ್ಡ್‌ ಕೊಟ್ಟಿದ್ದು ನಿಜ ಎಂದು ಇಂಡಿಯಾ ಟುಡೇ ಜತೆ ಮಾತನಾಡುವಾಗ ಒಪ್ಪಿಕೊಂಡಿದ್ದಾರೆ.

“ಉದ್ಯಮಿ ದರ್ಶನ್‌ ಹಿರಾನಂದನಿ ಅವರಿಗೆ ಸಂಸತ್‌ ಐಡಿ ಹಾಗೂ ಪಾಸ್‌ವರ್ಡ್‌ ಕೊಟ್ಟಿದ್ದು ನಿಜ. ಆದರೆ, ಹಣ ಪಡೆದು ಪ್ರಶ್ನೆ ಕೇಳುವ ದಿಸೆಯಲ್ಲಿ ಐಡಿ, ಪಾಸ್‌ವರ್ಡ್‌ ಕೊಟ್ಟಿಲ್ಲ. ಸಂಸತ್ತಿನಲ್ಲಿ ನಾನು ಕೇಳುವ ಪ್ರಶ್ನೆಗಳನ್ನು ಟೈಪ್‌ ಮಾಡಲು ಅವರಿಗೆ ಐಡಿ ಹಾಗೂ ಪಾಸ್‌ವರ್ಡ್‌ ಕೊಟ್ಟಿದ್ದೇನೆ. ನಾನು ಸಂಸತ್‌ ವೆಬ್‌ಸೈಟ್‌ಗೆ ಕೊಡುವ ಪ್ರಶ್ನೆಗಳನ್ನು ಹಿರಾನಂದನಿ ಕಚೇರಿಯಲ್ಲಿರುವವರು ಟೈಪ್‌ ಮಾಡಿದ್ದಾರೆ. ಇದಕ್ಕಾಗಿ ನಾನು ಐಡಿ, ಪಾಸ್‌ವರ್ಡ್‌ ಕೊಟ್ಟಿದ್ದೇನೆಯೇ ಹೊರತು ಹಣಕ್ಕಾಗಿ ಅಲ್ಲ” ಎಂದಿದ್ದಾರೆ.

Cash for Query, Lok Sabha Panel summons mahua moitra on oct 31

“ನಾನು ಯಾವಾಗಲೂ ನನ್ನ ಕ್ಷೇತ್ರದಲ್ಲಿ ಬ್ಯುಸಿಯಾಗಿರುತ್ತೇನೆ. ಹಾಗಾಗಿ, ಪ್ರಶ್ನೆಗಳನ್ನು ಟೈಪ್‌ ಮಾಡಲು ಆಗುವುದಿಲ್ಲ. ಸಂಸತ್‌ ವೆಬ್‌ಸೈಟ್‌ಗೆ ಕೊಟ್ಟ ಪ್ರಶ್ನೆಗಳನ್ನು ಹಿರಾನಂದನಿ ಕಚೇರಿಯಲ್ಲಿರುವವರು ಟೈಪ್‌ ಮಾಡುತ್ತಿದ್ದರು. ಟೈಪ್‌ ಮಾಡಿದ ಬಳಿಕ ಅವರು ನನಗೆ ಕರೆ ಮಾಡಿ ಹೇಳುತ್ತಿದ್ದರು. ಆಗ ನನ್ನ ಮೊಬೈಲ್‌ಗೆ ಒಟಿಪಿ (One Time Password) ಬರುತ್ತಿತ್ತು. ಅಷ್ಟಕ್ಕೂ, ನಾವು ಯಾರಿಗೂ ಲಾಗಿನ್‌ ಐಡಿ ಹಾಗೂ ಪಾಸ್‌ವರ್ಡ್‌ ಕೊಡಬಾರದು ಎಂಬ ನಿಯಮವಿಲ್ಲ. ಬಿಜೆಪಿಯು ಸುಖಾಸುಮ್ಮನೆ ಇದನ್ನು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ವಿಷಯ ಎಂಬಂತೆ ಬಿಂಬಿಸುತ್ತಿದೆ” ಎಂದು ತಿರುಗೇಟು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ನೈತಿಕ ಸಮಿತಿ ವಿಚಾರಣೆಗೆ ಹಾಜರಾಗಲು ಮಹುವಾ ಮೊಯಿತ್ರಾ ಅವರು ಹೆಚ್ಚಿನ ಸಮಯ ಕೇಳಿದ್ದಾರೆ. ಅವರು ಅಕ್ಟೋಬರ್‌ 31ರಂದು ಹಾಜರಾಗಬೇಕಿತ್ತು.

ದರ್ಶನ್‌ ಅಫಿಡವಿಟ್‌ನಲ್ಲಿ ಏನಿತ್ತು?

ಸಂಸತ್ತಿನ ನೈತಿಕ ಸಮಿತಿಗೆ ದರ್ಶನ್‌ ಹಿರಾನಂದನಿ ಅವರು ಅಫಿಡವಿಟ್‌ ಸಲ್ಲಿಸಿದ್ದು, “ಮಹುವಾ ಮೊಯಿತ್ರಾ ಅವರು ನನಗೆ ಸಂಸತ್ತಿನ ಐಡಿ ಹಾಗೂ ಪಾಸ್‌ವರ್ಡ್‌ ಕೊಟ್ಟಿದ್ದರು. ಮಹುವಾ ಮೊಯಿತ್ರಾ ಅವರು ಕೇಳುವ ಪ್ರಶ್ನೆಗಳನ್ನು ನಾನು ಪೋಸ್ಟ್‌ ಮಾಡಲು ಐಡಿ-ಪಾಸ್‌ವರ್ಡ್‌ ಕೊಟ್ಟಿದ್ದರು” ಎಂಬುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. “ಮಹುವಾ ಮೊಯಿತ್ರಾ ಅವರು ಕ್ಷಿಪ್ರವಾಗಿ ರಾಷ್ಟ್ರ ರಾಜಕಾರಣದಲ್ಲಿ ಮಿಂಚಲು ಬಯಸಿದ್ದರು. ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ನಿಂದಿಸುವ ಮೂಲಕ ವೇಗವಾಗಿ ಜನಪ್ರಿಯತೆ ಗಳಿಸಲು ಗೆಳೆಯರಿಂದ ಸಲಹೆ ಪಡೆದಿದ್ದರು” ಎಂಬುದಾಗಿಯೂ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Cash For Question Row: ಸಂಸದೆ ಮಹುವಾ ಎಂಪಿ ಲಾಗಿನ್ ಬೇರೆಯವರು ಬಳಸಿದ್ದರೆ ಮಹಾಪರಾಧ!

ದುಬೆ ಆರೋಪ ಏನು?

ಇಂಧನ ಮತ್ತು ಮೂಲಸೌಕರ್ಯಗಳ ಒಪ್ಪಂದವನ್ನು ಅದಾನಿ ಗ್ರೂಪ್ ಎದುರು ಪಡೆಯಲು ಹಿರಾನಂದನಿ ಗ್ರೂಪ್‌ ಪಡೆಯಲು ವಿಫಲವಾಗಿತ್ತು. ಹಾಗಾಗಿ, ಹಿರಾನಂದನಿ ವ್ಯಾಪಾರಿ ಹಿತಾಸಕ್ತಿಗೆ ಅನುಗುಣವಾಗಿ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ದುಬೆ ಅವರು ಆರೋಪಿಸಿದ್ದಾರೆ. ಅಲ್ಲದೇ, ಐಫೋನ್‌ನಂಥ ದುಬಾರಿ ಗಿಫ್ಟ್ ಮಾತ್ರವಲ್ಲದೇ, 2 ಕೋಟಿ ರೂಪಾಯಿ ಹಣವನ್ನು ಕಂಪನಿಯಿಂದ ಮಹುವಾ ಮೋಯಿತ್ರಾ ಪಡೆದುಕೊಂಡಿದ್ದಾರೆ. ಅಲ್ಲದೇ, ಚುನಾವಣೆಗೆ ಸ್ಪರ್ಧಿಸಲು ಹಿರಾನಂದಿನಿ ಕಂಪನಿ ಮೋಯಿತ್ರಾಗೆ 75 ಲಕ್ಷ ರೂಪಾಯಿ ನೀಡಿದೆ ಎಂದು ಆರೋಪಿಸಲಾಗಿದೆ. ಇದಕ್ಕೂ ಮೊದಲು ದುಬೆ ಆರೋಪವನ್ನು ದರ್ಶನ್‌ ಹಿರಾನಂದನಿ ಅಲ್ಲಗಳೆದಿದ್ದರು.

Exit mobile version