ನವದೆಹಲಿ: ಹೋಳಿಯಲ್ಲಿ (Holi) ಜಪಾನಿ ಮಹಿಳೆ (Japanese Woman) ಲೈಂಗಿಕ ಕಿರುಕುಳ ಮಾಡಿದ ಸುದ್ದಿ ಭಾರೀ ಸದ್ದು ಮಾಡಿತ್ತು. ದಿಲ್ಲಿಯ ಪಹರಗಂಜ್ ಪ್ರದೇಶದಲ್ಲಿ ಜಪಾನಿ ಮಹಿಳೆಗೆ ಹೋಳಿ ವೇಳೆ ಬಣ್ಣ ಎರಚುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿತ್ತು. ಲೈಂಗಿಕ ದೌರ್ಜನ್ಯ ವಿಡಿಯೋವನ್ನು ಅವರು ಆನ್‌ಲೈನ್ ಷೇರ್ ಮಾಡಿದ್ದರು. ಈ ದುಷ್ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ದೊರೆತಿತ್ತು. ಜಪಾನಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ದೇಶಕ್ಕೆ ಅವಮಾನ ಮಾಡಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹ ಕೇಳಿ ಬಂತು. ಇಷ್ಟೆಲ್ಲ ಆದಮೇಲೂ ಜಪಾನಿ ಮಹಿಳೆ ತಾನು ಈಗಲೂ ಭಾರತವನ್ನುಪ್ರೀತಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಷೇರ್ ಮಾಡಲಾಗಿದ್ದ ವಿಡಿಯೋಗೆ ಭಾರೀ ಪ್ರತಿಕ್ರಿಯೆ ದೊರೆತಿತ್ತು. ಹೋಳಿಯಲ್ಲಿ ಭಾಗವಹಿಸಿದಾಗ ಮಹಿಳೆಯರಿಗೆ ಎದುರಾಗುವ ಅಪಾಯ ಗೊತ್ತಿದೆ ಎಂದು ಹೇಳಿಕೊಂಡಿದ್ದರು. ಮತ್ತು ತಮ್ಮ 35 ಸ್ನೇಹಿತರ ಜತೆ ಅವರು ಹೋಳಿಯಾಡುತ್ತಿದ್ದರು. ಹೋಳಿ ಇದ್ದಾಗ ಡೇ ಟೈಮ್‌ನಲ್ಲಿ ಹೊರಗೆ ಹೋಗುವುದು ಬಹಳ ಅಪಾಯಕಾರಿ ಎಂದು ಕೇಳಿದ್ದೆ. ಹಾಗಾಗಿ, ಸ್ನೇಹಿತರ ಜತೆ ಹೊರೆಗೆ ಹೋಗಿದ್ದೆ ಎಂದು ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Paharganj Holi Case: ಹೋಳಿ ಹಬ್ಬದ ದಿನ ಬಣ್ಣ ಹಚ್ಚುವ ನೆಪದಲ್ಲಿ ಜಪಾನ್ ಮಹಿಳೆಗೆ ಕಿರುಕುಳ, ನಾಲ್ವರ ಬಂಧನ
ಮತ್ತೆ ಈ ಬಗ್ಗೆ ಟ್ವೀಟ್ ಮಾಡಿರುವ ಜಪಾನಿ ಮಹಿಳೆ, ಕಹಿ ಅನುಭವದ ಹೊರತಾಗಿಯೂ ತಾನು ಭಾರತವನ್ನು ಪ್ರೀತಿಸುತ್ತೇನೆ. ನಾನು ಭಾರತದ ಬಗೆಗಿನ ಎಲ್ಲವನ್ನೂ ಇಷ್ಟಪಡುತ್ತೇನೆ. ಇದೊಂದು ಫ್ಯಾಸಿನೇಟಿಂಗ್ ದೇಶವಾಗಿದೆ. ನಾನು ಇಲ್ಲಿಗೆ ಬಹಳಷ್ಟು ಬಾರಿ ಬಂದಿದ್ದೇನೆ. ಭಾರತ ಮತ್ತು ಜಪಾನ್ ಎಂದಿಗೂ ಸ್ನೇಹಿತ ರಾಷ್ಟ್ರಗಳು ಎಂದು ಹೇಳಿಕೊಂಡಿದ್ದಾರೆ. ದಿಲ್ಲಿಯಲ್ಲಿದ್ದ ಈ ಯುವತಿ ಈಗ ಬಾಂಗ್ಲಾದೇಶಕ್ಕೆ ಹೋಗಿದ್ದಾರೆ.