Site icon Vistara News

Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

Narendra Modi

I Miss A Strong Opposition, It Pains My Heart: Says PM Narendra Modi

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಾಲು ಸಾಲು ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇದೇ ರೀತಿ, ನ್ಯೂಸ್‌ 18ಗೆ ಸಂದರ್ಶನ ನೀಡಿದ ಮೋದಿ, “ಕಳೆದ 10 ವರ್ಷಗಳಲ್ಲಿ ಬಲಿಷ್ಠ ಪ್ರತಿಪಕ್ಷವೇ ಇರಲಿಲ್ಲ. ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಸವಾಲು ಒಡ್ಡಲಿಲ್ಲ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಕೂಡ ಆಳುವ ಸರ್ಕಾರಕ್ಕೆ ಸವಾಲು ಹಾಕಲಿಲ್ಲ. ಇದು ನನಗೆ ಅಪಾರ ನೋವು ತಂದಿದೆ” ಎಂಬುದಾಗಿ ಹೇಳಿದ್ದಾರೆ.

“ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ಪ್ರತಿಪಕ್ಷ ಇರುವುದು ಅತ್ಯವಶ್ಯಕ. ಪ್ರಬಲ ಪ್ರತಿಪಕ್ಷ ಇದರೆ ಸರ್ಕಾರವು ಎಚ್ಚರದಿಂದ, ಪ್ರತಿಪಕ್ಷಗಳ ತೂಗುಗತ್ತಿಯ ಭೀತಿಯಲ್ಲಿ ಸರಿಯಾದ ರೀತಿ ಕೆಲಸ ಮಾಡುತ್ತದೆ. ಹಾಗಂತ, ದೇಶದಲ್ಲಿ ಪ್ರಬಲ ಪ್ರತಿಪಕ್ಷ ನಾಯಕರಾಗುವ ಅರ್ಹತೆ ಇಲ್ಲ ಎಂದಲ್ಲ. ತುಂಬ ನಾಯಕರು ಅದಕ್ಕೆ ಅರ್ಹರಾಗಿದ್ದಾರೆ. 2014ರಿಂದ 2024ರ ಅವಧಿಯಲ್ಲಿ ನಮಗೆ ಬಲಿಷ್ಠ ಪ್ರತಿಪಕ್ಷ ಸಿಗಬೇಕಿತ್ತು. ಆದರೆ, ನನಗೆ ಅಂತಹ ಪ್ರತಿಪಕ್ಷ ಸಿಗಲಿಲ್ಲ. ಸರ್ಕಾರಕ್ಕೆ ಸವಾಲು ಒಡ್ಡಲಿಲ್ಲ ಎಂಬುದೇ ನನಗೆ ನೋವು ತಂದಿದೆ” ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸಹಕಾರ ನೀಡಲಿಲ್ಲ

“10 ವರ್ಷಗಳ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. ಅವರು 60 ವರ್ಷ ದೇಶವನ್ನು ಆಳಿದ್ದರು. ನಾನು ಅವರ ಸಲಹೆ-ಸೂಚನೆಗಳನ್ನು ಕೇಳಲು ಬಯಸಿದ್ದೆ. ಪ್ರಣಬ್‌ ಮುಖರ್ಜಿ ಅವರು ಇರುವವರೆಗೆ ನನಗೆ ಅವರ ಅನುಭವದ ಉಪಯೋಗ ಆಯಿತು. ಆದರೆ, ಬೇರೆ ನಾಯಕರಿಂದ ನಮ್ಮ ಆಡಳಿತಕ್ಕೆ ಸಲಹೆ-ಸೂಚನೆ ಸಿಗಲಿಲ್ಲ. ನಾನು ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗಿನ ಅನುಭವ ಹಾಗೂ ನನ್ನ ಪಕ್ಷದ ನಾಯಕರಿಂದ ಮಾತ್ರ ಸಲಹೆ ಸಿಕ್ಕಿತು” ಎಂದು ತಿಳಿಸಿದರು.

ಇದಕ್ಕೂ ಮೊದಲು ಎನ್‌ಡಿಟಿವಿಗೆ ನೀಡಿದ ಸಂದರ್ಶನದ ವೇಳೆ ಮಮತಾ ಬ್ಯಾನರ್ಜಿ ಹೇಳಿಕೆ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದ್ದರು. “ಮಮತಾ ಬ್ಯಾನರ್ಜಿ ಅವರು ಹೇಳಿದ್ದು ನಿಜ. ಜೂನ್‌ 4ರಂದು ಲೋಕಸಭೆ ಅವಧಿ ಮುಗಿಯಲಿದೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಹೊಸ ಸರ್ಕಾರ ರಚಿಸಲಿದೆ. ನಾನು ಕಾಶಿಯವ (ಅವರ ಲೋಕಸಭೆ ಕ್ಷೇತ್ರ), ನಾನು ಅವಿನಾಶಿ. ಕಾಶಿಯನ್ನು ಹೇಗೆ ನಾಶಪಡಿಸಲು ಆಗುವುದಿಲ್ಲವೋ, ಹಾಗೆಯೇ, ನನ್ನನ್ನು ಕೂಡ ಯಾರಿಂದಲೂ ನಾಶಪಡಿಸಲು ಆಗುವುದಿಲ್ಲ” ಎಂಬುದಾಗಿ ಹೇಳಿದ್ದರು.

ಇದನ್ನೂ ಓದಿ: PM Narendra Modi: ಇಂಡಿಯಾ ಮೈತ್ರಿಕೂಟ ಮತ ಬ್ಯಾಂಕ್‌ಗಾಗಿ ಅಶ್ಲೀಲ ಡ್ಯಾನ್ಸ್‌ ಮಾಡುತ್ತಿದೆ: ಮೋದಿ

Exit mobile version