Site icon Vistara News

Baba Ramdev: ನಾನು ಟೀಕಿಸಿದ್ದು ಓವೈಸಿಯನ್ನು, ಒಬಿಸಿಗಳನ್ನಲ್ಲ ಎಂದ ಬಾಬಾ ರಾಮದೇವ್

I said owaisi, not obc says baba ramdev

ನವದೆಹಲಿ: ಆಗಾಗ ತಮ್ಮ ಮಾತುಗಳಿಂದಲೇ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಯೋಗ ಗುರು ಬಾಬಾ ರಾಮದೇವ್ (Yog Guru Baba Ramdev) ಅವರು, ಹಿಂದುಳಿದ ವರ್ಗಗಳ(OBC) ಜನರ ಕುರಿತು ಹಗುರವಾಗಿ ಮಾತನಾಡಿ ಭಾರೀ ಚರ್ಚೆಗೆ ಕಾರಣವಾಗಿದ್ದರು. ಈಗ ಸ್ಪಷ್ಟನೆ ನೀಡಿರುವ ಬಾಬಾ ರಾಮದೇವ್ ನಾನು ಓವೈಸಿ (Owaisi) ಬಗ್ಗೆ ಹೇಳಿದ್ದೇನೆ ಹೊರತು ಒಬಿಸಿಗಳ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ. ಹಿಂದುಳಿದ ವರ್ಗಗಳ ಜನರನ್ನು ಹೀಯಾಳಿಸಿದ್ದಾರೆ ಎಂದು ಹೇಳಲಾಗುವ ವಿಡಿಯೋ ವೈರಲ್ ಆಗುತ್ತಿದ್ದಂತೆ(Viral Video), ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಪತಂಜಲಿ (boycott patanjali) ಅಭಿಯಾನ ಜೋರಾಗಿತ್ತು.

ತಾವು ಎಐಎಂಐಎ ನಾಯಕ ಅಸಾದುದ್ದೀನ್ ಓವೈಸಿ ಅವರನ್ನು ಉದ್ದೇಶಿಸಿ ಮಾತನಾಡಿದ್ದೇನೆ ಹೊರತು ಒಬಿಸಿ ಸಮುದಾಯವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಮ್‌ದೇವ್ ಅವರು ತಮ್ಮ ಬ್ರಾಹ್ಮಣ ಗುರುತನ್ನು ಪ್ರತಿಪಾದಿಸುವ ಮೂಲಕ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಹೇಳಲಾಗುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದು ಒಬಿಸಿ ಸಮುದಾಯದ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಮ್‌ದೇವ್, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ತಪ್ಪಾಗಿ ಕೇಳಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ನಾನು ಓವೈಸಿ ಎಂದು ಹೇಳಿದ್ದೇನೆ ಹೊರತು ಒಬಿಸಿ. ಆತನ(ಒವೈಸಿ) ಪೂರ್ವಿಕರು ರಾಷ್ಟ್ರ ವಿರೋಧಿಗಳಾಗಿದ್ದರು. ನಾನು ಆತನನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಯೋಗಗುರು ಬಾಬಾ ರಾಮದೇವ್ ಅವರು ಹೇಳಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಏನಿದೆ?

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರು, ತಾವು ಬ್ರಾಹ್ಮಣ ಎಂದು ಹೇಳಿಕೊಳ್ಳುವುದನ್ನು ಕೇಳಿಸಿಕೊಳ್ಳಬಹುದು. ಬಾಬಾ ರಾಮದೇವ್ ಅವರು ತಾವು ಅಗ್ನಿಹೋತ್ರಿ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತಾರೆ. “ನನ್ನ ಮೂಲ ಗೋತ್ರ ಬ್ರಹ್ಮ ಗೋತ್ರ. ನಾನು ಅಗ್ನಿಹೋತ್ರಿ ಬ್ರಾಹ್ಮಣ. ಜನರು ಬಾಬಾಜಿ ಒಬಿಸಿ ಎಂದು ಹೇಳುತ್ತಾರೆ … ನಾನು ವೇದಿ ಬ್ರಾಹ್ಮಣ, ದ್ವಿವೇದಿ ಬ್ರಾಹ್ಮಣ, ತ್ರಿವೇದಿ ಬ್ರಾಹ್ಮಣ, ಚತುರ್ವೇದಿ ಬ್ರಾಹ್ಮಣ, ಯಾಕೆಂದರೆ ನಾನು ನಾಲ್ಕೂ ವೇದಗಳನ್ನು ಓದಿದ್ದೇನೆ” ಎಂದು ಹೇಳುತ್ತಾರೆ.

ಈ ಸುದ್ದಿಯನ್ನೂ ಓದಿ: Baba Ramdev in Goa: ಅಂಬಾನಿ, ಅದಾನಿಗಿಂತಲೂ ನನ್ನ ಸಮಯದ ಮೌಲ್ಯ ಹೆಚ್ಚು ಎಂದ ಬಾಬಾ ರಾಮದೇವ್

Exit mobile version