Site icon Vistara News

RJD Leader | ವಿದೇಶದಲ್ಲೇ ನೆಲೆಸಲು ನನ್ನ ಮಕ್ಕಳಿಗೆ ಹೇಳಿದ್ದೇನೆ: ಆರ್‌ಜೆಡಿ ನಾಯಕ ಹೀಗೇಕೆ ಹೇಳಿದ್ರು?

Abdul Bari Siddiqui @ RJD Leader

ನವದೆಹಲಿ: ಭಾರತದಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿರುವ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (RJD Leader) ಅಬ್ದುಲ್ ಬಾರಿ ಸಿದ್ದಿಕ್ಕಿ(Abdul Bari Siddiqui), ತಮ್ಮ ಮಕ್ಕಳು ಸಾಧ್ಯವಾದರೆ ವಿದೇಶದಲ್ಲಿ ನೆಲೆಸಲಿ ಎಂದು ಸಲಹೆ ಮಾಡಿದ್ದಾರೆ. ಅವರು ಈ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಆರ್‌ಜೆಡಿ ನಾಯಕನ ಮಾತುಗಳು ದೇಶ ವಿರೋಧಿಯಾಗಿದ್ದು, ಬಹುಶಃ ಅವರು ಪಾಕಿಸ್ತಾನಕ್ಕೆ ಸ್ಥಳಾಂತರವಾಗುವ ಬಗ್ಗೆ ಮಾತನಾಡುತ್ತಿರುಬಹುದು ಎಂದು ಬಿಜೆಪಿ ಟೀಕಿಸಿದೆ.

ಈಗ ದೇಶದಲ್ಲಿರುವ ಪರಿಸ್ಥಿತಿಯನ್ನು ತಿಳಿಸಲು ನನ್ನದೇ ಉದಾಹರಣೆ ಕೊಡಬಹುದು. ನನಗೆ ಹಾರ್ವರ್ಡ್‌ನಲ್ಲಿ ಓದುತ್ತಿರುವ ಒಬ್ಬ ಮಗನಿದ್ದಾನೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದ ಒಬ್ಬಳು ಮಗಳಿದ್ದಾಳೆ. ವಿದೇಶಗಳಲ್ಲಿ ಉದ್ಯೋಗ ಹುಡುಕಿಕೊಳ್ಳಿ ಮತ್ತು ಅಲ್ಲಿಯ ಪೌರತ್ವ ಪಡೆದುಕೊಳ್ಳಿ ಎಂದು ಅವರಿಗೆ ಸಲಹೆ ಮಾಡಿದ್ದೇನೆ ಎಂದು ಸಿದ್ದಿಕ್ಕಿ ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಹೇಳಿರುವ ಮಾತುಗಳು ಈಗ ವಿವಾದಕ್ಕೆ ಕಾರಣವಾಗಿದೆ.

ಆರ್‌ಜೆಡಿ ನಾಯಕ ಆಡಿರುವ ಮಾತುಗಳಿಗೆ ಮಿತ್ರ ಪಕ್ಷವಾಗಿರುವ ಸಂಯುಕ್ತ ಜನತಾ ದಳವು ಅನುಮೋದಿಸಿದೆ. ಅಲ್ಲದೇ, ಸಿದ್ದಿಕ್ಕಿ ಅವರು ತಮ್ಮ ಮಾತುಗಳಲ್ಲಿ ಎಲ್ಲಿಯೂ ನೇರವಾಗಿ ಬಿಜೆಪಿ ಅಥವಾ ಮುಸ್ಲಿಮ್ ಎಂದ ಪದ ಬಳಿಸಿಲ್ಲ. ಹಾಗಿದ್ದೂ, ಬಿಹಾರ ಬಿಜೆಪಿ ಘಟಕವು ಸಿದ್ದಿಕ್ಕಿ ವಿರುದ್ಧ ವಾಗ್ದಾಳಿ ನಡೆಸಿದೆ. ಸಿದ್ದಿಕ್ಕಿ ಅವರು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅತ್ಯಂತ ನಿಕಟವರ್ತಿ ನಾಯಕರಾಗಿದ್ದಾರೆ.

ಇದನ್ನೂ ಓದಿ | ಬಿಹಾರ 2025ರ ಚುನಾವಣೆ ತೇಜಸ್ವಿ ಯಾದವ್​ ನೇತೃತ್ವದಲ್ಲಿ, ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯೂ ಅಲ್ಲ: ಸಿಎಂ ನಿತೀಶ್​ ಕುಮಾರ್​

Exit mobile version