Site icon Vistara News

ನಾನು ಕೊಲೆಯಾಗುವುದು ಪಕ್ಕಾ, ಜೈಲಿನಿಂದ ಹೊರ ಬರಲಾರೆ: ಗ್ಯಾಂಗಸ್ಟರ್ ರಾಜಕಾರಣಿ ಅತೀಕ್ ಅಹ್ಮದ್

Atiq Ahmed Murder Case: Lawyer presents secret letter to SC written weeks before killing

Atiq Ahmed Murder Case: Lawyer presents secret letter to SC written weeks before killing

ನವದೆಹಲಿ: ಜೈಲುಪಾಲಾಗಿರುವ ಆರೋಪಿಗಳು ಸಾಧ್ಯವಾದಷ್ಟು ಜೈಲಿನಿಂದ ಹೊರಗೆ ಹೋಗಲು ಇಚ್ಛೆ ಪಡುತ್ತಾರೆ. ಆದರೆ, ಗ್ಯಾಂಗಸ್ಟರ್ ರಾಜಕಾರಣಿ ಅತೀಕ್ ಅಹ್ಮದ್(Atiq Ahmed) ಮಾತ್ರ ತನ್ನನ್ನು ಜೈಲಿನಲ್ಲೇ ಉಳಿಸಿ ಎಂದು ಬೇಡಿಕೊಂಡಿದ್ದಾನೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ. ವಿಡಿಯೋ ಕಾನ್ಫರೆನ್ಸ್ ಮೂಲಕವೇ ಶಿಕ್ಷೆಯನ್ನು ಪ್ರಕಟಿಸುವಂತೆ ಕೋರಿದ್ದಾನೆ. ಒಂದೊಮ್ಮೆ ಉತ್ತರ ಪ್ರದೇಶದ ಕೋರ್ಟ್‌ಗೆ ಕರೆದೊಯ್ಯುವಾಗ ಅಪಘಾತ ಇಲ್ಲವೇ ಎನ್‌ಕೌಂಟರ್ ಮೂಲಕ ಹತ್ಯೆ ಮಾಡುವ ಸಾಧ್ಯತೆ ಇದೆ. ಹಾಗಾಗಿ, ಜೈಲಿನಲ್ಲೇ ಇರುವಂತೆ ಕೋರಿದ್ದಾನೆ ಎನ್ನಲಾಗಿದೆ.

ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಅತೀಕ್ ಅಹ್ಮದ್‌ಗೆ ಮಾರ್ಚ್ 28 ರಂದು ಶಿಕ್ಷೆ ಪ್ರಕಟವಾಗಲಿದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ವ್ಯಕ್ತಿ ಈ ತಿಂಗಳ ಆರಂಭದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ.

ಅತೀಕ್ ಅಹ್ಮದ್ 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೇ, ಇದೇ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಕೊಲೆಯ ಆರೋಪಿಯೂ ಹೌದು.

ಇದನ್ನೂ ಓದಿ: ಉಮೇಶ್ ಪಾಲ್​ ಹತ್ಯೆ ಆರೋಪಿ ಆತಿಕ್​ ಅಹ್ಮದ್ ಕುಟುಂಬದ ವಿರುದ್ಧ 160 ಎಫ್​ಐಆರ್​; ಸುಪ್ರೀಂಕೋರ್ಟ್ ಮೊರೆ ಹೋದ ಗ್ಯಾಂಗ್​ಸ್ಟರ್​

2005ರಲ್ಲಿ ಉಮೇಶ್ ಪಾಲ್ ಅವರನ್ನು ಅಪಹರಣ ಮಾಡಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ಕೊನೆಯ ದಿನ ಅಂದರೆ ಫೆಬ್ರವರಿ 24ರಂದು ಉಮೇಶ್ ಪಾಲ್ ಅವರನ್ನು ಕೊಲೆ ಮಾಡಲಾಗಿತ್ತು. ಹಾಡಹಗಲೇ ನಡೆದ ಈ ಕೊಲೆಯ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಉಮೇಶ್ ಪಾಲ್‌ಗೆ ಗುಂಡು ಹಾರಿಸಿದ್ದ ಆರೋಪಿಗಳ ಪೈಕಿ ಒಬ್ಬನಾಗಿದ್ದ ವಿಜಯ ಚೌಧರಿ ಅಲಿಯಾಸ್ ಉಸ್ಮಾನ್‌ನನ್ನು ಪ್ರಯಾಗ್‌ರಾಜ್ ಪೊಲೀಸರು ಎನ್‌ಕೌಂಟರ್ ಮಾಡಿದ್ದರು.

Exit mobile version