Site icon Vistara News

Udhayanidhi Stalin: ಸನಾತನ ಧರ್ಮ ಕುರಿತು ‘ಅದೇ ಮಾತು’ ಮತ್ತೆ ಮತ್ತೆ ಹೇಳುವೆ! ಉದಯನಿಧಿ ಸ್ಟಾಲಿನ್ ಭಂಡತನ

Udhayanidhi Stalin

Rs 10 lakh to slap Udhayanidhi Stalin for Sanatana Dharma remark: Hindu outfit puts up poster

ನವದೆಹಲಿ: ಸನಾತನ ಧರ್ಮವನ್ನು (Sanatana Dharma Row) ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ (CM MK Stalin) ಅವರ ಪುತ್ರರೂ ಆಗಿರುವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ವಿರುದ್ಧ ದಿಲ್ಲಿ ಮತ್ತು ಬಿಹಾರ ಸೇರಿ ಕೆಲವಡೆ ಪ್ರಕರಣಗಳ ದಾಖಲಾಗಿವೆ. ಇಷ್ಟಾಗಿಯೂ, ಉದಯನಿಧಿ ಸ್ಟಾಲಿನ್, ”ಮತ್ತೆ ಮತ್ತೆ ನಾನು ಹೇಳಿದ್ದೇನೆ (ಸನಾತನ ಧರ್ಮ ಅವಹೇಳನ) ರಿಪೀಟ್ ಹೇಳುತ್ತೇನೆ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ” ಎಂದು ಸೋಮವಾರ ತೂತುಕೂಡಿಯಲ್ಲಿ (Thoothukudi) ಹೇಳಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉದಯನಿಧಿ ಅವರ ಹೇಳಿಕೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ.

“ಮೊನ್ನೆ ನಾನು ಅದರ ಬಗ್ಗೆ (ಸನಾತನ ಧರ್ಮ) ಒಂದು ಸಮಾರಂಭದಲ್ಲಿ ಮಾತನಾಡಿದ್ದೆ. ನಾನು ಏನು ಹೇಳಿದರೂ ಮತ್ತೆ ಮತ್ತೆ ಅದನ್ನೇ ಪುನರಾವರ್ತಿಸುತ್ತೇನೆ… ನಾನು ಹಿಂದೂಗಳಷ್ಟೇ ಅಲ್ಲ ಎಲ್ಲ ಧರ್ಮಗಳನ್ನೂ ಸೇರಿಸಿ ಹೇಳಿದ್ದೇನೆ… ಜಾತಿ ಭೇದಗಳನ್ನು ಖಂಡಿಸಿ ಮಾತನಾಡಿದ್ದೇನೆ ಅಷ್ಟೇ…” ಎಂದು ಡಿಎಂಕೆ ಉದಯನಿಧಿ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉದಯನಿಧಿ ಸ್ಟಾಲಿನ್ ಹೇಳಿದ್ದೇನು?

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪುತ್ರ, ಸಚಿವರೂ ಆದ ಉದಯನಿಧಿ ಸ್ಟಾಲಿನ್‌ ಅವರು ಸನಾತನ ಧರ್ಮದ (Sanatan Dharma) ಕುರಿತು ನೀಡಿದ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. “ಸನಾತನ ಧರ್ಮವು ಮಲೇರಿಯಾ, ಕೊರೊನಾ ಹಾಗೂ ಡೆಂಗ್ಯೂ ಇದ್ದಂತೆ” ಎಂದು ಉದಯನಿಧಿ (Udhayanidhi Stalin) ಸ್ಟಾಲಿನ್‌ ಹೇಳಿದ್ದು, ಅವರ ಹೇಳಿಕೆಗೆ ತೀವ್ರ ವಿರೋಧ, ಟೀಕೆ ವ್ಯಕ್ತವಾಗಿವೆ.

ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಉದಯನಿಧಿ ಸ್ಟಾಲಿನ್‌ ಮಾತನಾಡಿದರು. “ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದರು.

“ಕೆಲವು ವಿಷಯಗಳನ್ನು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಒಳ್ಳೆಯದು. ನಾವು ಡೆಂಗ್ಯೂ, ಸೊಳ್ಳೆ, ಮಲೇರಿಯಾ ಅಥವಾ ಕೊರೊನಾದಂತಹ ಸೋಂಕನ್ನು ವಿರೋಧಿಸಬಾರದು. ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು” ಎಂದು ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ವಿರುದ್ಧ ಭಾಷಣ ಮಾಡಿದರು.

ಈ ಸುದ್ದಿಯನ್ನೂ ಓದಿ: Udhayanidhi Stalin: ಸನಾತನ ಧರ್ಮ ಅವಹೇಳನ, ಉದಯನಿಧಿ ಮಾತ್ರವಲ್ಲದೇ ಅವರ ಡ್ಯಾಡಿ ವಿರುದ್ಧವೂ ಬಿಹಾರದಲ್ಲಿ ಕೇಸ್!

ಉದಯನಿಧಿ ರಾವಣನ ವಂಶಸ್ಥ- ಬಾಗೇಶ್ವರ ಬಾಬಾ ಟೀಕೆ

ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ವಿರುದ್ದ ಬಾಗೇಶ್ವರ್ ಧಾಮ್‌ನ ಮುಖ್ಯಸ್ಥ (Bageshwar Dham Head) ಧೀರೇಂದ್ರ ಶಾಸ್ತ್ರಿ(ಬಾಗೇಶ್ವರ್ ಬಾಬಾ) ತೀವ್ರ ವಾಗ್ದಾಳಿ ನಡೆಸಿದ್ದಾರೆ(Bageshwar Baba). ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ರಾವಣನನ ವಂಶಸ್ಥ ಎಂದು ಜರಿದಿದ್ದಾರೆ. ಯಾರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಕನಸು ಕಾಣುತ್ತಿದ್ದಾರೋ ಅವರು ಒಂದು ಸಂಗತಿಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಏನೆಂದರೆ, ಇದು ನಿಮ್ಮಿಂದ ಆಗದ ಕೆಲಸವಾಗಿದೆ ಮತ್ತು ಸನಾತನ ಧರ್ಮವನ್ನು ಯಾರೂ ನಾಶಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version