Site icon Vistara News

IAF Mig 21 Crash | ಮಿಗ್‌-21 ಯುದ್ಧ ವಿಮಾನ ಪತನ; ಇಬ್ಬರು ಪೈಲಟ್‌ಗಳ ದುರಂತ ಸಾವು

IAF Mig 21 Crash

ಜೈಪುರ: ಭಾರತೀಯ ವಾಯುಪಡೆಯ ಮತ್ತೊಂದು ಮಿಗ್‌-೨೧ ಯುದ್ಧ ವಿಮಾನ ಪತನಗೊಂಡಿದೆ. ರಾಜಸ್ಥಾನದ ಬರ್ಮೇರ್‌ ಬಳಿ ಈ ಅಪಘಾತ ಸಂಭವಿಸಿದ್ದು (IAF Mig 21 Crash) ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.

ಇಬ್ಬರು ಕುಳಿತುಕೊಳ್ಳಬಹುದಾದ ಈ ಯುದ್ಧ ವಿಮಾನ ತರಬೇತಿ ಕಾರಣದಿಂದ ಹಾರಾಟ ನಡೆಸುತ್ತಿತ್ತು. ಗುರುವಾರ ರಾತ್ರಿ ೯.೧೦ ರ ಸಮಯದಲ್ಲಿ ಪತನಗೊಂಡಿದೆ. ಇದರಲ್ಲಿದ್ದ ಇಬ್ಬರೂ ಪೈಲಟ್‌ಗಳು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ವಾಯುಪಡೆಯ ಪ್ರಕಟಣೆ ತಿಳಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವಾಯುಪಡೆಯ ಮುಖ್ಯಸ್ಥರೊಂದಿಗೆ ಮಾತನಾಡಿದ್ದು, ಘಟನೆ ಕುರಿತು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

೨೦೨೧ರ ಡಿಸೆಂಬರ್‌ ೨೪ ರಂದು ಇದೇ ರೀತಿಯಾಗಿ ಮಿಗ್-21 ಯುದ್ಧ ವಿಮಾನ ರಾಜಸ್ಥಾನದಲ್ಲಿಯೇ ಪತನಗೊಂಡು ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿದ್ದರು. 1970 ರ ನಂತರ ಮಿಗ್‌-೨೧ ಯುದ್ಧ ವಿಮಾನಗಳು ಆಗಾಗ ಪತನಗೊಳ್ಳುತ್ತಲೇ ಬಂದಿದ್ದು, ಇವುಗಳನ್ನು ಹಾರುವ ಶವಪೆಟ್ಟಿಗೆಗಳು ಎಂದೇ ಕರೆಯಲಾಗುತ್ತಿದೆ.

ಮಿಗ್‌ ಪತನಗೊಂಡ ಇದುವರೆಗೆ ೧೭೦ ಪೈಲಟ್‌ಗಳು ಹಾಗೂ ೪೦ ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಕಳಪೆ ಗುಣಮಟ್ಟದ ಈ ಯುದ್ಧ ವಿಮಾನದ ಕುರಿತ ಬಾಲಿವುಡ್‌ನ ಸಿನಿಮಾ ರಂಗ್‌ ದೇ ಬಸಂತಿ (ಅಮೀರ್‌ ಖಾನ್‌) ಸೂಪರ್‌ ಹಿಟ್‌ ಆಗಿತ್ತು.

ಇದನ್ನೂ ಓದಿ | 7 ಪ್ರಯಾಣಿಕರು, ಇಬ್ಬರು ಪೈಲಟ್‌ಗಳಿದ್ದ ಹೆಲಿಕಾಪ್ಟರ್‌ ಅರಬ್ಬಿ ಸಮುದ್ರದಲ್ಲಿ ತುರ್ತು ʻಜಲಸ್ಪರ್ಶʼ

Exit mobile version