Site icon Vistara News

Adani Row: ಅದಾನಿ ವಿರುದ್ಧ ಸಾಕ್ಷ್ಯಗಳಿದ್ದರೆ ಕೋರ್ಟ್‌ಗೆ ಹೋಗಿ: ಕಾಂಗ್ರೆಸ್‌ಗೆ ಶಾ ಟಾಂಗ್

If congress has evidence against adani than go to court, Says Amit Shah

ನವದೆಹಲಿ: ಅದಾನಿ ಗ್ರೂಪ್ (Adani Row) ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುಚ್ಚಿಡುವಂಥದ್ದು ಏನೂ ಇಲ್ಲ. ಪ್ರತಿ ಪಕ್ಷಗಳ ಆರೋಪಕ್ಕೆ ಹೆದರುವ ಅಗತ್ಯವೂ ಇಲ್ಲ. ಅದಾನಿ ಪ್ರಕರಣದಲ್ಲಿ ಸಾಕ್ಷ್ಯಗಳಿದ್ದರೆ ಕಾಂಗ್ರೆಸ್ (Congress) ಪಕ್ಷವು ಕೋರ್ಟ್‌ಗೆ ಹೋಗಲಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಎನ್ಐ ಸುದ್ದಿಗೆ ಸಂಸ್ಥೆಗೆ ನೀಡಿದ ಸಂದರ್ಶದಲ್ಲಿ ನಾನಾ ವಿಷಯಗಳ ಕುರಿತು ಅವರು ಮಾತನಾಡಿದ್ದಾರೆ .

ಸಂಸತ್ತಿನಲ್ಲಿ ಅದಾನಿಗೂ ಮೋದಿಗೂ ಏನು ಸಂಬಂಧ ಎಂದು ಕೇಳುವ ಬದಲಿಗೆ ಕಾಂಗ್ರೆಸ್ ಪಕ್ಷವು ಕೋರ್ಟ್‌ಗೆ ಹೋಗಲಿ. ಸಾಕ್ಷ್ಯಗಳಿದ್ದರೆ, ಕೋರ್ಟ್‌ಗೆ ಸಬ್‌ಮಿಟ್ ಮಾಡಲಿ ಎಂದು ಅಮಿತ್ ಶಾ ಸವಾಲು ಹಾಕಿದರು. ಪ್ರತಿಪಕ್ಷಗಳು ರಾಜಕೀಯದ ಬದಲು ರಾಜಕೀಕರಣ ಮಾಡುತ್ತಿವೆ ಎಂದು ಆರೋಪಿಸಿದರು. ನಾವೆಲ್ಲರೂ ಸೇರಿ ದೇಶವನ್ನು ಬಲಪಡಿಸುವ ಕೆಲಸ ಮಾಡಬೇಕು. ಆದರೆ, ಪ್ರತಿಪಕ್ಷಗಳು ಆ ಕೆಲಸವನ್ನು ಮಾಡುತ್ತಿಲ್ಲ ಎಂದು ಹೇಳಿದರು.

ಕಡಿತದಿಂದ ಭಾಷಣ ಹಿಂತೆಗೆತ

ಈ ಹಿಂದೆಯೂ ಕಡಿತದಿಂದ ಭಾಷಣವನ್ನು ಹಿಂತೆಗೆಯಲಾಗಿದೆ. ಇದೇನೂ ಹೊಸ ಪ್ರಕ್ರಿಯೆ ಅಲ್ಲ. ಸಂಸತ್ ನಿಯಮಗಳನ್ನು ಬಳಸಿಕೊಂಡೇ ರಾಹುಲ್ ಭಾಷಣವನ್ನು ಕಡತದಿಂದ ಹಿಂದಕ್ಕೆ ಪಡೆಯಲಾಗಿದೆ ಎಂದು ಅಮಿತ್ ಶಾ ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ಪಿಎಫ್ಐಗೆ ರಕ್ಷಣೆ ನೀಡಿತ್ತು

ಪಿಎಫ್ ಐ ಮೂಲಭೂತವಾದ ಬೆಳೆಸುತ್ತಿತ್ತು. ಕಾಂಗ್ರೆಸ್ ಪಕ್ಷವು ಪಿಎಫ್ಐಗೆ ರಕ್ಷಣೆ ಒದಗಿಸುತ್ತಿತ್ತು. ಹಾಗಾಗಿ ನಾವು ಅದನ್ನು ಬ್ಯಾನ್ ಮಾಡಿದ್ದೇವೆ ಎಂದು ಹೇಳಿದ ಅಮಿತ್ ಶಾ, ಸದ್ಯ ಎದುರಾಗಲಿರುವ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯೇ ಭರ್ಜರಿಯಾಗಿ ಗೆಲುವು ಸಾಧಿಸಲಿದೆ ಎಂದು ಹೇಳಿದರು. 2024ರ ಲೋಕಸಭೆ ಚುನಾವಣೆಗೆ ಬಿಜೆಪಿಗೆ ಯಾವುದೇ ಪ್ರಬಲ ಎದುರಾಳಿಗಳೇ ಇಲ್ಲ. ಇಡೀ ದೇಶವೇ ಮೋದಿಯೊಂದಿಗೆ ಇದೆ ಎಂದು ಹೇಳಿದರು.

ಇದನ್ನೂ ಓದಿ: Karnataka Election | ಬಿಜೆಪಿಗೆ ಮತ ನೀಡಲು ಕರ್ನಾಟಕದ ಜನ ಸಿದ್ಧರಾಗಿದ್ದಾರೆ: ಅಮಿತ್ ಶಾ

ಕಾಶ್ಮೀರದಲ್ಲಿ ಶೀಘ್ರ ಚುನಾವಣೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರವೇ ಚುನಾವಣೆ ನಡೆಸಲಾಗುವುದು. ಈ ರಾಜ್ಯದಲ್ಲಿ ಹೇರಲಾಗಿದ್ದ ವಿಶೇಷ 370ನೇ ವಿಧಿಯಿಂದ ದೇಶಕ್ಕೆ ನಷ್ಟವಾಗಿತ್ತು. ಹಾಗೆಯೇ, ಚುನಾವಣೆ ನಡೆಸುವ ಬಗ್ಗೆ ಶೀಘ್ರವೇ ಕೇಂದ್ರ ಚುನಾವಣಾ ಆಯೋಗವು ನಿರ್ಧಾರ ಕೈಗೊಳ್ಳಲಿದೆ. ಈಗ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಅಂತ್ಯ ಹಾಡಲಾಗಿದೆ. ಭಯೋತ್ಪಾದನೆಗೆ ಬದಲಾಗಿ ಕಾಶ್ಮೀರದಲ್ಲಿ ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತಿದೆ ಎಂದು ಶಾ ಹೇಳಿದರು.

Exit mobile version