Site icon Vistara News

Rahul Gandhi: ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಅದಾನಿ ವಿರುದ್ಧ ತನಿಖೆ! ರಾಹುಲ್ ಗಾಂಧಿ ಭರವಸೆ

Rahul Gandhi

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್ ಪಕ್ಷವು (Congress Party) ಅಧಿಕಾರಕ್ಕೇರಿದರೆ ಅದಾನಿ ಗ್ರೂಪ್ (Adani Group) ಅಕ್ರಮ ವ್ಯವಹಾರದ ಕುರಿತು ತನಿಖೆ (Investigation) ನಡೆಸಲಾಗುವುದು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಈಗಲೇ ತನಿಖೆ ನಡೆಸುವುದು ಸೂಕ್ತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಹೇಳಿದ್ದಾರೆ.

ಈಗ ಪ್ರಧಾನ ಮಂತ್ರಿಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳನ್ನು ಉದ್ಭವವಾಗುತ್ತಿವೆ. ಏಕೆಂದರೆ ಅವರನ್ನು(ಗೌತಮ್ ಅದಾನಿ) ರಕ್ಷಿಸಲು ಇವರೊಬ್ಬರೇ ಇದ್ದಾರೆ. ಹಾಗಾಗಿ, ನಾನು ಪ್ರಧಾನಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಿಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ತನಿಖೆಯನ್ನು ಮಾಡಿಸಿ. ಆದರೆ, ಅವರಿಗೆ ತಮಗೆ ಅಂಟಿದ ಕಳಂಕವನ್ನು ಸ್ವಚ್ಛಗೊಳಿಸುವ ಇರಾದೆ ಇದ್ದಂತಿಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ಅದಾನಿ ಗ್ರೂಪ್‌ನ ಕಲ್ಲಿದ್ದಲು ಆಮದುಗಳ ಮಿತಿಮೀರಿದ ಇನ್‌ವಾಯ್ಸ್ ಕುರಿತು ಬ್ರಿಟಿಷ್ ದಿನಪತ್ರಿಕೆ ದಿ ಫೈನಾನ್ಷಿಯಲ್ ಟೈಮ್ಸ್ ವರದಿಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿಯನ್ನು ಮತ್ತೆ ಮತ್ತೆ ರಕ್ಷಿಸುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರಗಳು ವಿದ್ಯುತ್ ಸಬ್ಸಿಡಿಯನ್ನು ನೀಡುತ್ತಿರುವಾಗ, ಅದಾನಿ ಗ್ರೂಪ್ ಕಲ್ಲಿದ್ದಲನ್ನು ಅತಿಯಾಗಿ ಖರೀದಿಸುತ್ತಿದೆ ಮತ್ತು ಇದು ನೇರವಾಗಿ ಭಾರತದ ಜನರ ಕಳ್ಳತನವೇ ಆಗಿದೆ. ಇಷ್ಟೆಲ್ಲ ಅಕ್ರಮವನ್ನು ಪ್ರಧಾನಿ ಮೋದಿ ರಕ್ಷಣೆ ಇಲ್ಲದೇ ಮಾಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Rahul Gandhi: ಕ್ರಿಕೆಟ್​ vs ಫುಟ್ಬಾಲ್​; ರಾಹುಲ್ ಗಾಂಧಿಗೆ ಯಾವುದು ಅಚ್ಚುಮೆಚ್ಚು

ಅದಾನಿ ಗ್ರೂಪ್ ಕುರಿತು ಸರ್ಕಾರ ತನಿಖೆಯನ್ನು ಮಾಡುತ್ತಿಲ್ಲ. ಈ ಸಮೂಹದ ಬಗ್ಗೆ ಅಂಥ ವಿಶೇಷ ಏನಿದೆ ಎಂಬುದೇ ಆಶ್ಚರ್ಯವಾಗುತ್ತದೆ. ಅಲ್ಲದೇ, ಈ ಕುರಿತು ಪ್ರತಿಪಕ್ಷಗಳ ಬೇಡಿಕೆಯಾಗಿರುವ ಜಂಟಿ ಸಂಸದೀಯ ಸಮಿತಿ ತನಿಖೆಯನ್ನು ಕೇಂದ್ರ ಸರ್ಕಾರವು ತಿರಸ್ಕರಿಸುತ್ತಾ ಬಂದಿದೆ ಎಂದು ಅವರು ಆರೋಪಿಸಿದರು.

ಅದಾನಿ ಗ್ರೂಪ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿರಂತರವಾಗಿ ಆರೋಪ ಮಾಡುತ್ತಾ ಬಂದಿದ್ದಾರೆ. ಸಂಸತ್ ಲೋಕಸಭೆ ಅಧಿವೇಶನದ ವೇಳೆ ಅದಾನಿ ಕುರಿತಾದ ಪ್ರಶ್ನೆಗಳನ್ನು ಎತ್ತಿದ್ದರು. ಪ್ರತಿಪಕ್ಷಗಳು ಕೂಡ ಅದಾನಿ ಗ್ರೂಪ್ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿದ್ದವು. ಆದರೆ, ಇದಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ, ಅನುಮಾನಗಳು ಹೆಚ್ಚಾಗುತ್ತಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version