Site icon Vistara News

Arvind Dharmapuri: ಸಿಎಂ ಕೆಸಿಆರ್‌ ಸತ್ತರೆ ಬಹುಮಾನ; ತುಚ್ಚ ಹೇಳಿಕೆ ನೀಡಿದ ಬಿಜೆಪಿ ಸಂಸದ

Arvind Dharmapuri On KCR

If KCR Dies, We Will Give Monetary Rewards: BJP MP Arvind Dharmapuri on Tuesday stoked a controversy

ಹೈದರಾಬಾದ್:‌ ರಾಜಕಾರಣಿಗಳು ಇರುವುದೇ ಹಾಗೆ. ತಾವು ಹಾಗೂ ತಮ್ಮ ಸ್ಪರ್ಧಿ ಅಥವಾ ಪ್ರತಿಪಕ್ಷದ ನಾಯಕ ನಿಷ್ಠರಲ್ಲ, ಪ್ರಾಮಾಣಿಕರಲ್ಲ ಎಂಬುದು ಗೊತ್ತಿದ್ದರೂ ಪರಸ್ಪರ ಆರೋಪ ಮಾಡುತ್ತಾರೆ. ತಾವೇ ದೊಡ್ಡ ಪ್ರಾಮಾಣಿಕರು ಎಂಬಂತೆ ನಾಟಕ ಮಾಡುತ್ತಾರೆ. ಕೆಲವೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ರಾಜಕಾರಣಿಗಳ ತಲೆಯಲ್ಲಿ ಮೆದುಳೇ ಇರುವುದಿಲ್ಲವೇನೋ ಎಂಬಂತೆ ಕಾದಾಡುತ್ತಾರೆ, ಅಪದ್ಧ ಹೇಳಿಕೆ ನೀಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, “ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ (K Chandrashekar Rao) ಹಾಗೂ ಅವರ ಪುತ್ರ ಕೆ.ಟಿ.ರಾಮರಾವ್‌ ಮೃತಪಟ್ಟರೆ ಜನರಿಗೆ ನಗದು ಬಹುಮಾನ ನೀಡಲಾಗುವುದು” ಎಂದು ಬಿಜೆಪಿ ಸಂಸದ ಅವರಿಂದ್‌ ಧರ್ಮಾಪುರಿ (Arvind Dharmapuri) ಹೇಳಿಕೆ ನೀಡಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ನವೆಂಬರ್‌ 30ರಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಭಾರತ್‌ ರಾಷ್ಟ್ರ ಸಮಿತಿ (BRP) ಬಿಡುಗಡೆಗೊಳಿಸಿದ ಪ್ರಣಾಳಿಕೆ ಉದ್ದೇಶಿಸಿ ಮಾತನಾಡುವಾಗ ಅರವಿಂದ್‌ ಧರ್ಮಾಪುರಿ ಅವರು ಇಂತಹ ತುಚ್ಚ ಹೇಳಿಕೆ ನೀಡಿದ್ದಾರೆ. “ಕೆ.ಚಂದ್ರಶೇಖರ್‌ ರಾವ್‌ ಅವರು ಮೃತಪಟ್ಟರೆ 5 ಲಕ್ಷ ರೂ., ಅವರ ಪುತ್ರ ಕೆ.ಟಿ.ರಾಮರಾವ್‌ ಮೃತಪಟ್ಟರೆ 10 ಲಕ್ಷ ರೂ. ನಗದು ಬಹುಮಾನವನ್ನು ಬಿಜೆಪಿ ನೀಡಲಿದೆ. ಅಷ್ಟೇ ಅಲ್ಲ, ಅವರ ಪುತ್ರಿ ಕೆ.ಕವಿತಾ ನಿಧನರಾದರೆ 20 ಲಕ್ಷ ರೂ. ನೀಡಲಾಗುತ್ತದೆ” ಎಂದು ಅವರು ಹೇಳಿರುವುದಕ್ಕೆ ಜನರೂ ಛೀಮಾರಿ ಹಾಕುತ್ತಿದ್ದಾರೆ.

ಧರ್ಮಾಪುರಿ ಹೇಳಿಕೆಯ ವಿಡಿಯೊ

ಬಿಆರ್‌ಎಸ್‌ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ರೈತರಿಗೆ ವಿಮೆ ಘೋಷಿಸಲಾಗಿದೆ. ಮೃತಪಟ್ಟ ರೈತರಿಗೆ ಕೆಸಿಆರ್‌ ವಿಮಾ ಯೋಜನೆ ಅಡಿಯಲ್ಲಿ 5 ಲಕ್ಷ ರೂ. ವಿಮೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. “56 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೈತರು ಮೃತಪಟ್ಟರೆ ಅವರಿಗೆ 5 ಲಕ್ಷ ರೂ. ವಿಮೆ ಸಿಗುತ್ತದೆ. ಕಡಿಮೆ ವಯಸ್ಸಿನವರು ಸತ್ತರೆ ಅವರಿಗೆ ಹೆಚ್ಚು ಹಣವೇ? ಹಾಗಾದರೆ, ಕೆಸಿಆರ್‌ ಅವರ ಮಕ್ಕಳು ಸಾಯಲಿ” ಎಂದು ನಿಜಾಮಾಬಾದ್‌ ಸಂಸದರೂ ಆಗಿರುವ ಅರವಿಂದ್ ಧರ್ಮಾಪುರಿ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಕೆ.ಕವಿತಾ, “ಹೀಗೆ ಯಾರಾದರೂ ಮಾತನಾಡುತ್ತಾರಾ? ನಿಮ್ಮ ಮಕ್ಕಳಿಗೂ ಹೀಗೆ ಯಾರಾದರೂ ಹೇಳಿದರೆ ಏನು ಮಾಡುತ್ತೀರಿ? ನಾನೊಬ್ಬ ಸಿಎಂ ಪುತ್ರಿ ಎಂಬ ಕಾರಣಕ್ಕೆ ಹೀಗೆ ಮಾತನಾಡುವುದು ಎಷ್ಟು ಸರಿ” ಎಂದು ಪ್ರಶ್ನಿಸಿದ್ದಾರೆ.

ಕೆ ಕವಿತಾ ವಾಗ್ದಾಳಿ

ಇದನ್ನೂ ಓದಿ: ಬಿಪಿಎಲ್ ಕುಟುಂಬಗಳಿಗೆ ಉಚಿತ 5 ಲಕ್ಷ ರೂ. ವಿಮೆ, ಎಲ್ಲರಿಗೂ 400 ರೂ.ಗೆ ಸಿಲಿಂಡರ್! ಬಿಆರ್‌ಎಸ್ ಪ್ರಣಾಳಿಕೆ

ಕೆಸಿಆರ್‌ ನೀಡಿದ ಭರವಸೆಗಳೇನು?

ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ಕೂಡ ಚುನಾವಣೆ ಹಿನ್ನೆಲೆಯಲ್ಲಿ ಬಿಆರ್‌ಎಸ್‌ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ 5 ಲಕ್ಷದವರೆಗೂ ಉಚಿತ ವಿಮೆ, ರೈತ ಬಂಧು ಯೋಜನೆಯಡಿಯ ಸಹಾಯ ಧನ ಮೊತ್ತ 10 ಸಾವಿರ ರೂ.ನಿಂದ 16 ಸಾವಿರ ರೂ.ಗೆ ಏರಿಕೆ, 400 ರೂ.ಗೆ ಗ್ಯಾಸ್ ಸಿಲಿಂಡರ್ ಸೇರಿದಂತೆ ಅನೇಕ ಜನಪ್ರಿಯ ಕೊಡುಗೆಗಳನ್ನು ತೆಲಂಗಾಣ ವಿಧಾನಸಭೆ ಚುನಾವಣೆಗೆ ಭಾರತ್ ರಾಷ್ಟ್ರ ಸಮಿತಿ ನೀಡಲು ಮುಂದಾಗಿದೆ. ಭಾನುವಾರ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಆರ್‌ಎಸ್ ಭರ್ಜರಿ ಉಚಿತ ಯೋಜನೆಗಳನ್ನು ಘೋಷಿಸಿದೆ. ಇದಕ್ಕೆ ಪ್ರತಿಯಾಗಿ ಈಗ ಕಾಂಗ್ರೆಸ್‌ ಕೂಡ ಭರ್ಜರಿ ಗ್ಯಾರಂಟಿಗಳ ಮೂಲಕ ಜನರ ಮತ ಸೆಳೆಯಲು ಮುಂದಾಗಿದೆ.

Exit mobile version