ಬೆಂಗಳೂರು: ಮುಸ್ಲಿಮ್ ವೈಯಕ್ತಿಕ ಕಾನೂನು ಅನುಮತಿಸಿದರೂ, ಅಪ್ರಾಪ್ತೆಯನ್ನು ಮದುವೆಯಾದರೆ, ಅಂಥ ಮದುವೆಯು ಅಸಿಂಧುವಾಗುತ್ತದೆ ಮತ್ತು ಪೋಕ್ಸೊ ಕಾಯ್ದೆಯನ್ನು ಉಲ್ಲಂಘಿಸದಂತಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ (Karnataka Highcourt) ಅಭಿಪ್ರಾಯಪಟ್ಟಿದೆ. ಅಪ್ರಾಪ್ತ ಮುಸ್ಲಿಮ್ ಹುಡುಗಿಯನ್ನು ಮದುವೆಯಾದ ವ್ಯಕ್ತಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ರಾಜೇಂದ್ರ ಬಾದಾಮಿಕರ್ ಅವರಿದ್ದ ಪೀಠವು, ಪ್ರಾಯಕ್ಕೆ ಬಂದ ಅಥವಾ 15 ವರ್ಷ ವಯಸ್ಸಿನ ಅಪ್ರಾಪ್ತ ಮುಸ್ಲಿಮ್ ಬಾಲಕಿಯ ವಿವಾಹವು, ಬಾಲ್ಯ ವಿವಾಹ ನಿಷೇಧ ಕಾಯಿದೆಯನ್ನು ಉಲ್ಲಂಘಿಸುವುದಿಲ್ಲ ಎಂಬ ವಾದವನ್ನು ಅವರು ತಳ್ಳಿ ಹಾಕಿದರು.
ಪೋಕ್ಸೊ ವಿಶೇಷ ಕಾಯ್ದೆಯಾಗಿದ್ದು, ಮುಸ್ಲಿಮ್ ವೈಯಕ್ತಿಕ ಕಾನೂನು ಅನ್ನು ಅದು ಮೀರಿರುತ್ತದೆ. ಪೋಕ್ಸೊ ಕಾಯ್ದೆಯ ಅನುಸಾರ, ಯಾವುದೇ ಮದುವೆ ಸಿಂಧುವಾಗಬೇಕಿದ್ದರೆ ಮತ್ತು ಲೈಂಗಿಕ ಚಟುವಟಿಕೆಗಳನ್ನು ನಡೆಸಲು 18 ವರ್ಷ ಪ್ರಾಯವಾಗಿರಬೇಕು ಎಂದು ಕೋರ್ಟ್ ಹೇಳಿದೆ.
ಬೆಂಗಳೂರಿನ ಆರೋಗ್ಯ ಕೇಂದ್ರದಲ್ಲಿ 17 ವರ್ಷದ ಮುಸ್ಲಿಮ್ ಹುಡುಗಿಯ ಗರ್ಭಿಣಿಯಾಗಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು. ಬಾಲಕಿ ಅಪ್ರಾಪ್ತವಾಗಿರುವುದರಿಂದ ಆರೋಗ್ಯ ಕೇಂದ್ರದ ಅಧಿಕಾರಿಯು, ನಿಯಮಗಳ ಅನುಸಾರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರನ ವಿರುದ್ಧ ಬಾಲ್ಯ ವಿವಾಹ ನಿಷೇಧ ಸೇರಿದಂತೆ ವಿವಿಧ ಕಾಯ್ದೆಗಳ ಅಡಿ ಕೇಸ್ ದಾಖಲಿಸಲಾಗಿತ್ತು.
ಇದನ್ನೂ ಓದಿ | Explainer | ತಲಾಖ್-ಇ-ಹಸನ್ ರದ್ದಿಗೆ ಆಗ್ರಹ, ಮಹಿಳೆಯರ ವಾದವೇನು? ಸುಪ್ರೀಂ ಕೋರ್ಟ್ ಹೇಳಿದ್ದೇನು?