Site icon Vistara News

Jaya Bachan | ಮದ್ವೆ ಆಗದೇ ಮೊಮ್ಮಗಳು ಮಗು ಮಾಡಿಕೊಂಡ್ರೆ ತಕರಾರಿಲ್ಲ: ಜಯಾ ಬಚ್ಚನ್

Jaya Bachan

ಮುಂಬೈ: ಮದುವೆಯಾಗದೇ ನನ್ನ ಮೊಮ್ಮಗಳು(ನವ್ಯಾ ನವೇಲಿ ನಂದಾ) ಮಗುವನ್ನು ಮಾಡಿಕೊಂಡರೆ ನಂದೇನೂ ತಕರಾರು ಇರುವುದಿಲ್ಲ ಎಂದು ನಟಿಯೂ ಆಗಿರುವ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚನ್ (Jaya Bachan) ಅವರು ಹೇಳಿದ್ದಾರೆ. ಅವರು ತಮ್ಮ ಮೊಮ್ಮಗಳಾದ ನವ್ಯಾ ನವೇಲಿ ನಂದಾ ಅವರ ನಿರೂಪಿಸುವ What The Hell Navya ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಿದ್ದರು. ಸಂಬಂಧಗಳು ದೀರ್ಘಾವಧಿಗೆ ಮುಂದುವರಿಯಲು ದೈಹಿಕ ಆಕರ್ಷಣೆಯೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ತಮ್ಮ ಕಾಲದಲ್ಲಿ ಸಂಬಂಧಗಳ ಪ್ರಯೋಗಕ್ಕೆ ಅವಕಾಶವಿರಲಿಲ್ಲ ಎಂದು ಹೇಳಿದ ಜಯಾ ಅವರು, ದೈಹಿಕ ಸಂಗತಿ ಬಹಳ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸಂಬಂಧಗಳು ಪ್ರೀತಿ, ತಾಜಾ ಗಾಳಿ ಮತ್ತು ಹೊಂದಾಣಿಕೆಯಿಂದ ಮಾತ್ರವೇ ದೀರ್ಘ ಬಾಳಿಕೆ ಬರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನನ್ನ ಮೊಮ್ಮಗಳು(ನವ್ಯಾ ನವೇಲಿ ನಂದಾ) ಮದುವೆಯಾಗದೆಯೇ ಮಕ್ಕಳನ್ನು ಪಡೆದರೆ ನಂದೇನೂ ಅಭ್ಯಂತರವಿಲ್ಲ ಎಂದು ಅವರು ತಿಳಿಸಿದ್ದಾರೆ.

ನಾನು ಹೀಗೆ ಹೇಳಿದ್ದು ಜನರಿಗೆ ಆಕ್ಷೇಪಾರ್ಹ ಎನಿಸಬಹುದು. ಆದರೆ, ದೈಹಿಕ ಆಕರ್ಷಣೆ ಮತ್ತು ಹೊಂದಾಣಿಕೆ ಕೂಡ ಮಹತ್ವದ್ದಾಗಿದೆ. ನಮ್ಮ ಕಾಲದಲ್ಲಿ ನಾವೇನೂ ಪ್ರಯೋಗಗಳನ್ನು ಮಾಡುತ್ತಿರಲಿಲ್ಲ. ಅವಕಾಶವೂ ಇರಲಿಲ್ಲ. ಆದರೆ, ಈ ತಲೆಮಾರಿನ ಜನರು ಪ್ರಯೋಗ ಮಾಡುತ್ತಾರೆ ಮತ್ತು ಮಾಡಬಾರದೇಕೆ ಅಲ್ಲವೇ? ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಮಿತಾಭ್ ಗೆದ್ದ ‌6 ಸವಾಲುಗಳು! ತಿರಸ್ಕಾರ, ಅಪಮಾನ, ನೋವುಗಳನ್ನು ಮೀರಿ ನಿಂತ ಖುಷಿ

Exit mobile version