ಹರದೋಯಿ, ಉತ್ತರ ಪ್ರದೇಶ: ಗಗನಕ್ಕೇರಿರುವ ಟೊಮೆಟೋ (Tomatoes) ದರವನ್ನು ತಗ್ಗಿಸುವುದು ಹೇಗೆ? ಈ ಪ್ರಶ್ನೆಗೆ ಎಲ್ಲರೂ ಬೆಚ್ಚಿ ಬೀಳುವ ಸಲಹೆ ನೀಡಿದ್ದಾರೆ ಉತ್ತರ ಪ್ರದೇಶದ (Uttar Pradesh) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪ್ರತಿಭಾ ಶುಕ್ಲಾ (Minister Pratibha Shukla) ಅವರು. ಒಂದು ವೇಳೆ ಟೊಮೆಟೋ ದರ ಹೆಚ್ಚಾಗಿದ್ದರೆ ತಿನ್ನುವುದನ್ನು ಕಡಿಮೆ ಮಾಡಿ. ಟೊಮೆಟೋ ಮನೆಯಲ್ಲಿ ಬೆಳೆಯಿರಿ. ಆಗ ಟೊಮೆಟೋ ದರ ತಾನಾಗಿಯೇ ಕಡಿಮೆಯಾಗುತ್ತದೆ ಎಂಬ ಸಲಹೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಪರಿಸರ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪ್ರತಿಭಾ ಶುಕ್ಲಾ ಅವರು, ಒಂದು ವೇಳೆ ಟೊಮೆಟೋ ದರ ಹೆಚ್ಚಾಗಿದ್ದರೆ, ಜನರು ಅವುಗಳನ್ನು ಮನೆಯಲ್ಲಿ ಬೆಳೆಯಬೇಕು. ನೀವು ಟೊಮೆಟೋ ತಿನ್ನುವುದನ್ನು ನಿಲ್ಲಿಸಿ. ಆಗ ದರ ತಾನಾಗೇ ಕೆಳಗಿಳಿಯುತ್ತವೆ. ಅಲ್ಲದೇ, ನೀವು ಟೊಮೆಟೋ ಬದಲಿಗೆ ನಿಂಬೆ ತಿನ್ನಿ. ಒಂದೂ ವೇಳೆ ಯಾರೂ ಟೊಮೆಟೋ ತಿನ್ನದೇ ಇದ್ದರೆ, ಬೆಲೆ ತಾನಾಗಿಯೇ ಕುಸಿಯುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Tomato Price: ಸಿರಿವಂತಿಕೆ ತಂದುಕೊಟ್ಟ ಟೊಮ್ಯಾಟೊ; ಪುಣೆಯ ಬೆಳೆಗಾರ ಈಗ ಕೋಟ್ಯಧೀಶ!
ಈ ವೇಳೆ ಅಸಾಹಿ ಗ್ರಾಮದ ಪೌಷ್ಟಿಕಾಂಶದ ಉದ್ಯಾನದ ಉದಾಹರಣೆಯನ್ನು ನೀಡಿದ ಸಚಿವೆ ಪ್ರತಿಭಾ ಶುಕ್ಲಾ ಅವರು, ದರ ಏರಿಕೆ ಕಾಣುತ್ತಿರುವ ಟೊಮೆಟೋಗೆ ಪರಿಹಾರವಿದೆ. ಮನೆಯಲ್ಲಿ ಟೊಮೆಟೊ ಬೆಳೆಯಬೇಕು. ಟೊಮೆಟೋ ಸಾರ್ವಕಾಲಿಕ ದುಬಾರಿಯಾಗಿದೆ ಮತ್ತು ನೀವು ಟೊಮೆಟೊಗಳನ್ನು ತಿನ್ನದಿದ್ದರೆ ಸ್ವಯಂ ಆಗಿ ಬೆಲೆ ಇಳಿಕೆಯಾಗಲಿದೆ. ಟೊಮೆಟೋ ಬದಲಿಗೆ ನಿಂಬೆ ಬಳಸಿ ಎಂಬ ಸಲಹೆಯನ್ನು ನೀಡಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.