Site icon Vistara News

IFFI 2023: ವೆಬ್‌ ಸಿರೀಸ್‌ ನಿರ್ಮಿಸುವವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ; ಸಿಗಲಿದೆ ಈ ಪ್ರಶಸ್ತಿ

Anurag Thakur On Best Web Series Award

IFFI 2023: Anurag Thakur announces 'Best Web Series' award category

ನವದೆಹಲಿ: ಭಾರತದ ಮನರಂಜನಾ ಕ್ಷೇತ್ರದಲ್ಲಿ OTT (Over The Top) ಕ್ರಾಂತಿ ಮಾಡುತ್ತಿದೆ. ಅದರಲ್ಲೂ, ಒಟಿಟಿಯಲ್ಲಿ ಮಾತ್ರ ಬಿಡುಗಡೆಯಾಗುವ ವೆಬ್‌ ಸಿರೀಸ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಪಂಕಜ್‌ ತ್ರಿಪಾಠಿ, ಮನೋಜ್‌ ಬಾಜಪೇಯಿ, ಜಿತೇಂದ್ರ ಕುಮಾರ್‌, ಮಿಥಿಲಾ ಪಾಲ್ಕರ್‌ ಅವರಂತಹ ನಟ-ನಟಿಯರು ವೆಬ್‌ಸಿರೀಸ್‌ ಮೂಲಕವೇ ಬಾಲಿವುಡ್‌ ನಟರಂತೆ ಖ್ಯಾತಿ ಗಳಿಸಿದ್ದಾರೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ವೆಬ್‌ ಸಿರೀಸ್‌ ನಿರ್ಮಿಸುವವರಿಗೆ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ‘ಬೆಸ್ಟ್‌ ವೆಬ್‌ ಸಿರೀಸ್‌ ಅವಾರ್ಡ್‌’ (IFFI 2023) ಎಂಬ ಪ್ರಶಸ್ತಿ ಘೋಷಿಸಿದ್ದು, ಇದರಿಂದ ವೆಬ್‌ ಸಿರೀಸ್‌ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ.

“ಗೋವಾದಲ್ಲಿ ನವೆಂಬರ್‌ 20ರಿಂದ 28ರವರೆಗೆ ನಡೆಯುವ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಆಫ್‌ ಇಂಡಿಯಾದಲ್ಲಿ (IFFI) ಅತ್ಯುತ್ತಮ ವೆಬ್‌ ಸಿರೀಸ್‌ಗೆ ಪ್ರಶಸ್ತಿ (Best Web Series Award) ನೀಡಲಾಗುವುದು” ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಘೋಷಿಸಿದ್ದಾರೆ. ಇದರೊಂದಿಗೆ ಭಾರತದಲ್ಲಿ ಒಟಿಟಿಗೆ ಉತ್ತೇಜನ ನೀಡುವುದು ಹಾಗೂ ವೆಬ್‌ ಸಿರೀಸ್‌ಗಳಿಗೂ ಮಾನ್ಯತೆ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

“ಭಾರತವು ಪ್ರತಿಭಾವಂತರಿಂದ ಕೂಡಿದ ದೇಶವಾಗಿದೆ. ಕೋಟ್ಯಂತರ ಪ್ರತಿಭೆಗಳು, ಯಾರಿಗೂ ಗೊತ್ತಿರದ ಲಕ್ಷಾಂತರ ಕತೆಗಳು ಇಲ್ಲಿವೆ. ಇವುಗಳನ್ನು ವೆಬ್‌ ಸಿರೀಸ್‌ ಮೂಲಕ ಹೇಳಲಾಗುತ್ತಿದೆ. ಹಾಗಾಗಿ, ಪ್ರತಿಭೆಗಳನ್ನು ಗುರುತಿಸಲು ಅತ್ಯುತ್ತಮ ವೆಬ್‌ ಸಿರೀಸ್‌ ಅವಾರ್ಡ್‌ ಘೋಷಿಸಲಾಗುತ್ತಿದೆ. ಕತೆ ವಿಶ್ಲೇಷಣೆ, ತಾಂತ್ರಿಕ ನೈಪುಣ್ಯತೆ, ತಂತ್ರಜ್ಞಾನದ ಅಳವಡಿಕೆ ಸೇರಿ ಸಕಲ ರೀತಿಯಲ್ಲಿ ಉತ್ತಮವಾಗಿರುವ ವೆಬ್‌ ಸಿರೀಸ್‌ಗೆ ಪ್ರಶಸ್ತಿ ನೀಡಲಾಗುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: Meghana Raj: ಮೇಘನಾ ರಾಜ್‌ ನಟನೆಯ ʼತತ್ಸಮ ತದ್ಭವʼ ಸಿನಿಮಾದ ಟೀಸರ್‌ ಔಟ್‌!

ಒಟಿಟಿಯಲ್ಲಿ ಮಾತ್ರ ಬಿಡುಗಡೆಯಾಗುವ, ಭಾರತೀಯ ಭಾಷೆಯಲ್ಲಿ ಮಾತ್ರ ನಿರ್ಮಿಸಿದ ಒರಿಜಿನಲ್‌ ವೆಬ್‌ ಸಿರೀಸ್‌ಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ವರ್ಷ ನಡೆಯುವ ಐಎಫ್‌ಎಪ್‌ಐನಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ದೇಶದಲ್ಲಿ, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ವೆಬ್‌ ಸಿರೀಸ್‌ಗಳು ಬಿಡುಗಡೆಯಾಗುತ್ತವೆ. ಇದು ಮನರಂಜನೆ ಕ್ಷೇತ್ರ ಕ್ರಾಂತಿ ಎಂದೂ ಹೇಳಲಾಗುತ್ತಿದೆ.

Exit mobile version