Site icon Vistara News

physical abuse : ಕ್ಯಾಂಪಸ್​ ಒಳಗಡೆಯೇ ಐಐಟಿ ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸಿ ಕಿರುಕುಳ

IIT BHU

ವಾರಣಾಸಿ: ಐಐಟಿ-ಬಿಎಚ್​ಯು ವಿದ್ಯಾರ್ಥಿನಿಯೊಬ್ಬಳನ್ನು ಕ್ಯಾಂಪಸ್​ ಒಳಗಡೆಯೇ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ (physical abuse) ಘಟನೆ ಗುರುವಾರ ಮುಂಜಾನೆ ನಡೆದಿದೆ. ಈ ಘಟನೆಯ ಆಕ್ರೋಶಕ್ಕೆ ಕಾರಣವಾಯಿತು, ನಂತರ ನೂರಾರು ವಿದ್ಯಾರ್ಥಿಗಳು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಗುರುವಾರ ಮುಂಜಾನೆ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಹಾಸ್ಟೆಲ್ ನಿಂದ ಹೊರಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಬೈಕ್​ನಲ್ಲಿ ಬಂದ ಮೂವರು ಆಕೆಯನ್ನು ತಡೆದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳು ತನ್ನನ್ನು ಸ್ನೇಹಿತನಿಂದ ಬೇರ್ಪಡಿಸಿ ಬಲವಂತವಾಗಿ ಬೇರೊಂದು ಕಡೆಗೆ ಕರೆದೊಯ್ದರು. ನಂತರ ಅವರು ನನ್ನನ್ನು ವಿವಸ್ತ್ರಗೊಳಿಸಿ, ವೀಡಿಯೊ ಮಾಡಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿನಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು 15 ನಿಮಿಷಗಳ ನಂತರ ಅವಳನ್ನು ಅಲ್ಲಿಂದ ಹೋಗಲು ಬಿಟ್ಟಿದ್ದಾರೆ. ಅದಕ್ಕಿಂತ ಮೊದಲು ಆಕೆಯ ಫೋನ್ ನಂಬರ್​ ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಯ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಐಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ

ಘಟನೆ ಬೆಳಕೆಗೆ ಬಂದ ನಂತರ, ವಿದ್ಯಾರ್ಥಿಗಳು ಐಐಟಿ-ಬಿಎಚ್ಯು ಕ್ಯಾಂಪಸ್​ನ ವಿದ್ಯಾರ್ಥಿ ಚಟುವಟಿಕೆ ಕೇಂದ್ರದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ಘಟನೆಯಲ್ಲಿ ಹೊರಗಿನ ಶಕ್ತಿಗಳು ಭಾಗಿಯಾಗಿವೆ ಎಂದು ಅವರು ಹೇಳಿದ್ದಾರೆ. ಹೊರಗಿನ ವ್ಯಕ್ತಿಗಳೂ ಕ್ಯಾಂಪಸ್​​ ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

“ಆರೋಪಿಗಳನ್ನು ಪತ್ತೆಹಚ್ಚುವ ಜತೆಗೆ ಐಐಟಿ ಕ್ಯಾಂಪಸ್​ನ ಗಡಿಗಳನ್ನು ಬೇರ್ಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ವಿದ್ಯುತ್ ಸುಗಮ ಕಾರ್ಯನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳು ಜ್ಞಾಪಕ ಪತ್ರವನ್ನು ನೀಡಿದ್ದಾರೆ ಎಂದು ಡಿಸಿಪಿ ಆರ್.ಎಸ್.ಗೌತಮ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : India Bloc : ಇಂಡಿಯಾ ಬ್ಲಾಕ್ ವೇಸ್ಟ್​​ ಎಂದ ಬಿಹಾರದ ಸಿಎಂ ನಿತೀಶ್​ ಕುಮಾರ್​

ಆರೋಪಿಗಳನ್ನು ಹಿಡಿಯಲು ತಂಡವನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವರನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅವರು ಹೇಳಿದರು. ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿಯ ಯಾವುದೇ ವೀಡಿಯೊ ಅಥವಾ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಎಚ್ಚರಿಕೆ ನೀಡಿದ್ದಾರೆ.

ಆಪಘಾತದಲ್ಲಿ ನಿರ್ಮಾಪಕನ ಸಾವು; ಫೋನ್, ಕ್ಯಾಮೆರಾ ಕಳವು

ದೆಹಲಿ: ದಕ್ಷಿಣ ದೆಹಲಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ಮೋಟಾರ್‌ಸೈಕಲ್ (Bike Accident) ಹಾಗೂ ಬೈಕ್‌ ಡಿಕ್ಕಿ ಹೊಡೆದು ಸಾಕ್ಷ್ಯಚಿತ್ರ ನಿರ್ಮಾಪಕ ಪಿಯೂಷ್ ಪಾಲ್ (30) ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಗಾಯಗೊಂಡ ನಂತರ ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ.

ಅಕ್ಟೋಬರ್ 28ರಂದು ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಂಚಶೀಲ್ ಎನ್‌ಕ್ಲೇವ್ ಬಳಿಯ ಜನನಿಬಿಡ ರಸ್ತೆಯಲ್ಲಿ ಚಲನಚಿತ್ರ ನಿರ್ಮಾಪಕರ ಮೋಟಾರ್‌ಸೈಕಲ್ ಲೇನ್ ಬದಲಾಯಿಸುವುದನ್ನು ವೀಡಿಯೊ ತೋರಿಸುತ್ತದೆ. ಆಗ ಹಿಂದೆ ಬರುವ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್‌ಗಳು ಡಿಕ್ಕಿಯಾಗುತ್ತಿದ್ದಂತೆ, ಚಲನಚಿತ್ರ ನಿರ್ಮಾಪಕರು ಮೋಟಾರ್‌ಸೈಕಲ್ ಸ್ಕಿಡ್ ಆಗಿ ದೂರದಲ್ಲಿ ಬಿದ್ದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದರುವ ಪಿಯೂಷ್ ಪಾಲ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಲ್ ಗುರುಗ್ರಾಮ್‌ನಲ್ಲಿ ಚಲನಚಿತ್ರ ನಿರ್ಮಾಪಕರಾಗಿ ಕೆಲಸ ಮಾಡಿದರು. ದಕ್ಷಿಣ ದೆಹಲಿಯ ಕಲ್ಕಾಜಿಯಲ್ಲಿ ವಾಸಿಸುತ್ತಿದ್ದರು.

ಅಲ್ಲೇ ನೆರದಿದ್ದ ಜನರು ತಕ್ಷಣ ಸಹಾಯ ಮಾಡಿದರೆ ಅವರ ಜೀವ ಉಳಿಸಬಹುದಿತ್ತು ಎಂದು ಚಿತ್ರ ನಿರ್ಮಾಪಕರ ಸ್ನೇಹಿತ ಹೇಳಿಕೊಂಡಿದ್ದಾರೆ. ಅವರು ಬಿದ್ದಾಗ ಸಹಾಯ ಮಾಡಲು ಯಾರೂ ಮುಂದಾಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಕೇವಲ ಫೋಟೊ ಕ್ಲಿಕ್ಕಿಸಲು ಜನರು ಅವರ ಸುತ್ತಲೂ ಜಮಾಯಿಸಿದ್ದರು. 20 ನಿಮಿಷಗಳ ಕಾಲ ರಸ್ತೆಯ ಬದಿಯಲ್ಲಿ ರಕ್ತದ ಮುಡುವಿನಲ್ಲೇ ಇದ್ದರು. ಅವರ ಮೊಬೈಲ್ ಫೋನ್ ಮತ್ತು ಗೋ-ಪ್ರೊ ಕ್ಯಾಮೆರಾವನ್ನು ಸಹ ಜನ ಕಳವು ಮಾಡಿರುವುದಾಗಿ ಆರೋಪಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಬೈಕ್ ಸವಾರನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ

Exit mobile version