Site icon Vistara News

IIT Dress Code: ಯುವತಿಯರು ಸೀರೆಯಲ್ಲೇ ಬರಬೇಕು; ವಿವಾದಕ್ಕೆ ಕಾರಣವಾದ ಐಐಟಿ ಡ್ರೆಸ್‌ ಕೋಡ್‌!

College Girls

IIT Kharagpur issues clarification amid row over convocation dress code

ಕೋಲ್ಕೊತಾ: ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮಧ್ಯೆ ಬಡವ-ಶ್ರೀಮಂತ ಎಂಬ ಭೇದ-ಭಾವ ಮೂಡಬಾರದು ಎಂದು ವಸ್ತ್ರಸಂಹಿತೆ (Dress Code) ಜಾರಿಗೊಳಿಸಲಾಗುತ್ತದೆ. ಆದರೆ, ಪಶ್ಚಿಮ ಬಂಗಾಳದ (West Bengal) ಖರಗ್‌ಪುರ ಐಐಟಿಯು ಘಟಿಕೋತ್ಸವಕ್ಕೂ ವಿದ್ಯಾರ್ಥಿಗಳು ಇಂತಹ ದಿರಸನ್ನೇ ಧರಿಸಿ (IIT Dress Code) ಬರಬೇಕು ಎಂದು ಸುತ್ತೋಲೆ ಹೊರಡಿಸಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

2023ರ ಘಟಿಕೋತ್ಸವಕ್ಕೆ ವಿದ್ಯಾರ್ಥಿನಿಯರು ಬಿಳಿ ಕಾಟನ್‌ ಸೀರೆ ಹಾಗೂ ವಿದ್ಯಾರ್ಥಿಗಳು ಬಿಳಿ ಕುರ್ತಾ ಧರಿಸಿ ಬರಬೇಕು ಎಂದು ಐಐಟಿ ಖರಗ್‌ಪುರ ಅಧಿಸೂಚನೆ ಹೊರಡಿಸಿದೆ. ಆದರೆ, ಶಿಕ್ಷಣ ಸಂಸ್ಥೆಯು ನಾವು ಧರಿಸುವ ಬಟ್ಟೆಯ ಆಯ್ಕೆಯನ್ನು ಕಸಿದುಕೊಳ್ಳುತ್ತಿದೆ ಎಂದು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಕೆಲವು ಪ್ರೊಫೆಸರ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೀಗಿದೆ ಡ್ರೆಸ್‌ ಕೋಡ್‌

ವಿದ್ಯಾರ್ಥಿಗಳು ಪೂರ್ತಿ ತೋಳಿನ, ಮೊಳಕಾಲಿನವರೆಗೆ ಬರುವ, ಕಾಟನ್‌ ಕುರ್ತಾವನ್ನು ಘಟಿಕೋತ್ಸವ ಸಮಾರಂಭಕ್ಕೆ ಧರಿಸಿ ಬರಬೇಕು. ಕಾಟನ್‌ ಪೈಜಾಮಾ ಕೂಡ ಧರಿಸಿ ಬರಬೇಕು. ಇನ್ನು ವಿದ್ಯಾರ್ಥಿನಿಯರು ಬಂಗಾರದ ಬಣ್ಣದ ಬಾರ್ಡರ್‌ ಇರುವ ಕಾಟನ್‌ ಸೀರೆ ಧರಿಸಿ ಆಗಮಿಸಬೇಕು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿಯೇ ವಿದ್ಯಾರ್ಥಿಗಳು ನಮ್ಮ ಆಯ್ಕೆಗೆ ಅಧಿಸೂಚನೆ ಅಡ್ಡಿಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Dress code in temple | ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ವಸ್ತ್ರಸಂಹಿತೆ ಸದ್ದು! ಹಿಂದು ಜಾಗೃತಿ ವೇದಿಕೆ ಮನವಿ

ಸ್ಪಷ್ಟನೆ ನೀಡಿದ ಆಡಳಿತ ಮಂಡಳಿ

ವಸ್ತ್ರಸಂಹಿತೆ ಕುರಿತು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸುತ್ತಲೇ ಆಡಳಿತ ಮಂಡಳಿಯು ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಚರ್ಚೆಯಾದ ಕಾರಣ, “ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿ ಬರಬೇಕಾಗಿರುವುದು ಕಡ್ಡಾಯವಲ್ಲ. ಘಟಿಕೋತ್ಸವವು ವಿಶೇಷ ಕಾರ್ಯಕ್ರಮವಾದ ಕಾರಣ ಹಾಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ವಿದ್ಯಾರ್ಥಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಅವರಿಗೆ ಇಷ್ಟವಾದ ದಿರಸುಗಳನ್ನು ಧರಿಸಿ ಬರಬಹುದು” ಎಂದು ತಿಳಿಸಿದೆ. ಆ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version