ವಾರಾಣಸಿ, ಉತ್ತರ ಪ್ರದೇಶ: ಬನಾರಸ್ ಹಿಂದೂ ವಿಶ್ವವಿದ್ಯಾಲಯ (Banaras Hindu University) ಆವರಣದಲ್ಲಿ ನಡೆದ ಐಐಟಿ ವಿದ್ಯಾರ್ಥಿನಿ (IIT Student) ಗ್ಯಾಂಗ್ ರೇಪ್ (Ganga Rape) ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ (UP Police) ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ(Accused Arrested). ಈ ಮೂವರು ಆರೋಪಿಗಳು ವಾರಾಣಸಿ ಬಿಜೆಪಿ ಐಟಿ ಸೆಲ್‌ನಲ್ಲಿ (BJP IT Cell Members) ಕೆಲಸ ಮಾಡವರರಾಗಿದ್ದಾರೆಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ. ಬಂಧಿತರನ್ನು ಕುನಾಲ್ ಪಾಂಡೆ, ಆನಂದ್ ಅಲಿಯಾಸ್ ಅಭಿಷೇಕ್ ಚೌಹಾಣ್ ಮತ್ತು ಸಕ್ಷಮ್ ಪಟೇಲ್ ಎಂದು ಗುರುತಿಸಲಾಗಿದೆ ಎಂದು ಲಂಕಾ ಪೊಲೀಸ್ ಠಾಣೆಯ ಉಸ್ತುವಾರಿ ಶಿವಕಾಂತ್ ಮಿಶ್ರಾ ಹೇಳಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯ ಆವರಣದಲ್ಲಿ ಕಳೆದ ನವೆಂಬರ್ 1ರಂದು ಐಐಟಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಂತ್ರಸ್ತ ವಿದ್ಯಾರ್ಥಿನಿಯ ನವೆಂಬರ್ 1ರ ರಾತ್ರಿ ತನ್ನ ಗೆಳೆಯನ ಜತೆಗೆ ಹಾಸ್ಟೆಲ್‌ನಿಂದ ಹೊರಗೆ ಹೋಗಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು, ಗೆಳೆಯನಿಂದ ಆಕೆಯನ್ನು ಪ್ರತ್ಯೇಕಿಸಿ, ಬಲವಂತಗಾಗಿ ಮೂಲೆ ಕರೆದುಕೊಂಡು ಹೋದರು ಮತ್ತು ಬಾಯಿ ಮುಚ್ಚಿಸಿ ಅವಳ ಮೇಲೆ ಅತ್ಯಾಚಾರ ನಡೆಸಿದ್ದರು.
#BJPIT #Vanaras These three people are arrested in case of gang rape with IIT BHU student. Here is their identity 👇
— Odisha Youth Congress (@IYCOdisha) December 31, 2023
1. Kunal Pandey, BJP IT Cell head Varanasi
2. Saksham Patel, Co manager BJP IT Cell Varanasi
3. Abhishek Chauhan, Member BJP IT Cell Varanasi
Can #GodiMedia…
ಆರೋಪಿಗಳು ಆಕೆಯನ್ನು ಬೆತ್ತಲೆಗೊಳಿಸಿ ವಿಡಿಯೋ ಕೂಡ ಶೂಟ್ ಮಾಡಿದ್ದರು, ಫೋಟೋಗಳನ್ನು ಕ್ಲಿಕ್ಕಿಸಿದ್ದರು. ನಿಮಿಷಗಳ ಬಳಿಕ ಆಕೆಗೆ ಹೋಗಲು ಬಿಟ್ಟಿದ್ದ ಆರೋಪಿಗಳು ಫೋನ್ ನಂಬರ್ ಪಡೆದುಕೊಂಡಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಐಪಿಸಿಯ ಸೆಕ್ಷನ್ 354 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಲಂಕಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನಂತರ, ಪ್ರಕರಣಕ್ಕೆ ಸಾಮೂಹಿಕ ಅತ್ಯಾಚಾರದ ಐಪಿಸಿಯನ್ನು ಕೂಡ ಸೇರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು ವಾರಾಣಸಿ ಬಿಜೆಪಿ ಐಟಿ ಸೆಲ್‌ನವರು
ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ವಾರಾಣಸಿ ಬಿಜೆಪಿಯ ಐಟಿ ಸೆಲ್ ಸದಸ್ಯರಾಗಿದ್ದಾರೆಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ. ಜತೆಗೆ, ಭಾನುವಾರ ಬಿಜೆಪಿಐಟಿ ಎಂಬ ಹ್ಯಾಷ್ಟ್ಯಾಗ್ ಕೂಡ ಟ್ರೆಂಡ್ ಆಗಿತ್ತು. ಈ ಹ್ಯಾಷ್‌ಟ್ಯಾಗ್‌ನಲ್ಲಿ ಈ ಮೂವರು ಬಿಜೆಪಿಯ ಐಟಿಸೆಲ್ ಸದಸ್ಯರು ಎಂಬ ಟ್ವೀಟ್‌ಗಳಿದ್ದವು. ಬಂಧಿತರ ಪೈಕಿ ಕುನಾಲ್ ಪಾಂಡೆ ವಾರಾಣಿಸಿಯ ಐಟಿಸೆಲ್ ಮುಖ್ಯಸ್ಥನಾದರೆ, ಸಕ್ಷಮ್ ಪಟೇಲ್ ವಾರಾಣಸಿ ಐಟಿ ಸೆಲ್‌ನ ಸಹ ವ್ಯವಸ್ಥಾಪಕ ಮತ್ತು ಅಭಿಷೇಕ್ ಚವಾಣ್ ಐಟಿ ಸೆಲ್‌ನ ಸದಸ್ಯನಾಗಿದ್ದಾನೆ.
ಈ ಸುದ್ದಿಯನ್ನೂ ಓದಿ: Physical Abuse: ಬೆಂಗಳೂರಿನಲ್ಲಿ ಯುವತಿ ಮೇಲೆ ಪ್ರಿಯಕರ ಸೇರಿ ಐವರಿಂದ ಗ್ಯಾಂಗ್ ರೇಪ್