Site icon Vistara News

IG Rank For Women | ಸಿಆರ್‌ಪಿಎಫ್‌ನ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಐಜಿ ರ‍್ಯಾಂಕ್‌, 35 ವರ್ಷದಲ್ಲೇ ಮೊದಲು

CRPF

ನವದೆಹಲಿ: ದೇಶದ ಸೇನೆಯಲ್ಲೀಗ ಹೆಚ್ಚಿನ ಬದಲಾವಣೆ ಆಗುತ್ತಿದ್ದು, ಮಹಿಳೆಯರಿಗೂ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಅದರಲ್ಲೂ, ನಾರಿಯರು ಈಗ ಯುದ್ಧವಿಮಾನದ ಪೈಲಟ್‌ಗಳಾಗಿ ಹೊರಹೊಮ್ಮುತ್ತಿದ್ದಾರೆ. ಉನ್ನತ ಸ್ಥಾನಗಳು ಅವರಿಗೆ ಲಭ್ಯವಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ಕಳೆದ 35 ವರ್ಷದಲ್ಲಿಯೇ ಮೊದಲ ಬಾರಿಗೆ ಸಿಆರ್‌ಪಿಎಫ್‌ನ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಇನ್ಸ್‌ಪೆಕ್ಟರ್‌ ಜನರಲ್‌ (IG Rank For Women) ಹುದ್ದೆ ನೀಡಲಾಗಿದೆ.

ಅನಿ ಅಬ್ರಾಹಂ ಅವರು ಕ್ಷಿಪ್ರ ಕಾರ್ಯ ಪಡೆ (RAF)ಯ ಐಜಿ ಆಗಿ ನೇಮಕಗೊಂಡಿದ್ದರೆ, ಸೀಮಾ ಧುಂಡಿಯಾ ಅವರು ಸಿಆರ್‌ಪಿಎಫ್‌ ಕಮಾಂಡ್ಸ್‌ನ ಬಿಹಾರ ಸೆಕ್ಟರ್‌ ಐಜಿ ಆಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ, ಆರ್‌ಎಎಫ್‌ಗೆ ಸೇನೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳೆಯೊಬ್ಬರು ಐಜಿ ಆಗಿ ನೇಮಕಗೊಂಡಿದ್ದಾರೆ.

“ನಾವಿಬ್ಬರೂ 1986ರಲ್ಲಿ ಸಿಆರ್‌ಪಿಎಫ್‌ ಸೇರಿದೆವು. ಸೇರಿದ ಒಂದು ವರ್ಷದ ಬಳಿಕ ನಮ್ಮನ್ನು ಸೇನೆಗೆ ನಿಯೋಜಿಸಲಾಯಿತು. ಇದಾದ ಬಳಿಕ ಹಲವು ಸವಾಲುಗಳನ್ನು ದಾಟಿ ನಾವು ಸೇವೆ ಸಲ್ಲಿಸಿದ್ದೇವೆ. ಈಗ ಮತ್ತೊಂದು ಜವಾಬ್ದಾರಿ ಸಿಕ್ಕಿದ್ದು, ಇದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ” ಎಂದು ಅನಿ ಅಬ್ರಾಹಂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Siachen Glacier | 19,061 ಅಡಿ ಎತ್ತರದಲ್ಲಿ ಸ್ಯಾಟಲೈಟ್‌ ಆಧಾರಿತ ಇಂಟರ್ನೆಟ್‌ಗೆ ಚಾಲನೆ, ಸೇನೆ ಸಾಧನೆ

Exit mobile version