Site icon Vistara News

ಇದೇ ಮೊದಲ ಬಾರಿ ರಾಮ ನವಮಿಗೆ ರಜೆ ಪ್ರಕಟಿಸಿದ ಮಮತಾ ಬ್ಯಾನರ್ಜಿ; ರಾಮಮಂದಿರ ಎಫೆಕ್ಟ್!

Mamata Banerjee

Who knows if this government will last even 15 days; Says Mamata Banerjee

ಕೋಲ್ಕೊತಾ: ಲೋಕಸಭೆ ಚುನಾವಣೆಗೆ (Lok Sabha Election 2024) ದಿನಗಣನೆ ಆರಂಭವಾಗಿದೆ. ರಾಮಮಂದಿರದಿಂದ (Ram Mandir) ಹಿಡಿದು ಸ್ಥಳೀಯ ಸಮಸ್ಯೆಗಳವರೆಗೆ ಎಲ್ಲ ವಿಷಯಗಳಲ್ಲೂ ರಾಜಕೀಯ ಶುರುವಾಗಿದೆ. ರಾಮಮಂದಿರ ನಿರ್ಮಾಣವಾಗಿದ್ದೇ ನಮ್ಮ ಅವಧಿಯಲ್ಲಿ ಎಂದು ಬಿಜೆಪಿಯವರು ಹೇಳಿದರೆ, ರಾಮ ಎಲ್ಲರಿಗೂ ಸೇರಿದವನು, ನಾವೂ ರಾಮನ ಭಕ್ತರೆ ಎಂದು ಕಾಂಗ್ರೆಸ್‌ನವರು ವರಸೆ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವು (West Bengal Government) ಇದೇ ಮೊದಲ ಬಾರಿಗೆ ರಾಮನವಮಿಗೆ (Ram Navami 2024) ಸಾರ್ವಜನಿಕ ರಜೆ ಘೋಷಿಸಿದೆ. ಇದು ರಾಮಮಂದಿರ ಎಫೆಕ್ಟ್‌ ಎಂದು ಬಿಜೆಪಿ ಕುಟುಕಿದೆ.

ಪಶ್ಚಿಮ ಬಂಗಾಳ ಹಣಕಾಸು ಇಲಾಖೆಯು ಈ ಕುರಿತು ಆದೇಶ ಹೊರಡಿಸಿದೆ. “1881ರ ನೆಗೋಶಿಯೇಬಲ್‌ ಇನ್‌ಸ್ಟ್ರುಮೆಂಟ್ ಆ್ಯಕ್ಟ್‌ ಅನ್ವಯ 2024ರ ಏಪ್ರಿಲ್‌ 17ರಂದು ರಾಮನವಮಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ” ಎಂದು ಹಣಕಾಸು ಇಲಾಖೆಯ ಪ್ರಕಟಣೆ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಹಾಗೂ ಕಾಳಿ ಪೂಜೆಗೆ ಮಾತ್ರ ಸಾರ್ವಜನಿಕ ರಜೆ ಇತ್ತು. ರಾಮನವಮಿ ದಿನ ಹಿಂಸಾಚಾರ ನಡೆಯುತ್ತವೆ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರವು ರಜೆ ನೀಡುತ್ತಿರಲಿಲ್ಲ. ಆದರೀಗ, ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ರಾಮನವಮಿಗೂ ಸಾರ್ವಜನಿಕ ರಜೆ ಘೋಷಿಸಿದೆ.

ತುಂಬ ಲೇಟ್‌ ಆಯ್ತು ಎಂದ ಬಿಜೆಪಿ

ರಾಮನವಮಿಗೆ ರಜೆ ಘೋಷಿಸಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಟಾಂಗ್‌ ಕೊಟ್ಟಿದೆ. “ಯಾರಾದರೂ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರೆ ಮಮತಾ ಬ್ಯಾನರ್ಜಿ ಅವರಿಗೆ ಇದುವರೆಗೆ ಸಿಟ್ಟು ಬರುತ್ತಿತ್ತು. ಆದರೆ, ಅವರೀಗ ರಾಮನವಮಿಗೆ ಸಾರ್ವಜನಿಕ ರಜೆ ಘೋಷಣೆ ಮಾಡಿದ್ದಾರೆ. ಹಿಂದು-ವಿರೋಧಿ ಹಣೆಪಟ್ಟಿಯಿಂದ ಹರಗೆ ಬರಲು ಅವರು ಇಂತಹ ಪ್ರಯತ್ನ ಮಾಡಿದ್ದಾರೆ. ಆದರೆ, ಈಗಾಗಲೇ ಸಮಯ ಮೀರಿದೆ. ಇದಕ್ಕೂ ಮಿಗಿಲಾಗಿ ಮಮತಾ ಬ್ಯಾನರ್ಜಿ ಸರ್ಕಾರವು ರಾಮನವಮಿ ಮೆರವಣಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ಅವರು ಇದನ್ನು ಮಾಡುತ್ತಾರೆಯೇ” ಎಂದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Sela Tunnel: ವಿಶ್ವದಲ್ಲೇ ಉದ್ದದ ಸುರಂಗಕ್ಕೆ ಮೋದಿ ಚಾಲನೆ; ಚೀನಾಗೆ ಹೇಗೆ ಇದು ಟಕ್ಕರ್?

ಕಾಶಿ ವಿಶ್ವನಾಥ ದೇಗುಲಕ್ಕೆ ಮೋದಿ ಭೇಟಿ

ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ ಶನಿವಾರ (ಮಾರ್ಚ್‌ 9) ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ವಾರಾಣಸಿ ಲೋಕಸಭೆ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸಲು ಮೋದಿ ಅವರು ತೀರ್ಮಾನಿಸಿದ್ದು, ಟಿಕೆಟ್‌ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದರು. ಇದೇ ವೇಳೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ನರೇಂದ್ರ ಮೋದಿ ಅವರಿಗೆ ತ್ರಿಶೂಲ ಕೊಟ್ಟರು. ಆಗ ಮೋದಿ ಅದನ್ನು ಭಕ್ತರಿಗೆ ತೋರಿಸಿದರು. ಆಗ ಅಲ್ಲಿದ್ದ ಜನ ಜೈಕಾರ ಕೂಗಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version