Site icon Vistara News

Anti Terror Bid | ಉಗ್ರರ ದಾಳಿ ಭೀತಿ, ಮುಂಬೈನಲ್ಲಿ ಡ್ರೋನ್‌, ಖಾಸಗಿ ಹೆಲಿಕಾಪ್ಟರ್‌ಗಳ ಹಾರಾಟ ನಿಷೇಧ

Terror

ಮುಂಬೈ: ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ (Anti Terror Bid) ಮುಂಬೈ ಪೊಲೀಸರು ಡ್ರೋನ್‌ಗಳು ಹಾಗೂ ಖಾಸಗಿ ಹೆಲಿಕಾಪ್ಟರ್‌ಗಳ ಹಾರಾಟವನ್ನು 30 ದಿನ ನಿಷೇಧಿಸಿದ್ದಾರೆ. ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC)ಯ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ಡ್ರೋನ್‌ಗಳು ಹಾಗೂ ಖಾಸಗಿ ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ನಿಷೇಧಾಜ್ಞೆ ಅನ್ವಯವಾಗಲಿದೆ.

ನವೆಂಬರ್‌ 13ರಿಂದ ಡಿಸೆಂಬರ್‌ 12ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. “ಮುಂಬೈನಲ್ಲಿ ವಿವಿಐಪಿಗಳು ಸೇರಿ ಹಲವರನ್ನು ಗುರಿಯಾಗಿಸಿ ಡ್ರೋನ್‌, ಏರಿಯಲ್‌ ಮಿಸೈಲ್ಸ್‌ಗಳನ್ನು ಬಳಸಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ. ಹಾಗಾಗಿ, ಬೃಹನ್‌ಮುಂಬೈ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಭೀತಿ ಇರುವುದರಿಂದ ಡ್ರೋನ್‌ ಹಾಗೂ ಖಾಸಗಿ ಹೆಲಿಕಾಪ್ಟರ್‌ಗಳ ಹಾರಾಟ ನಿಷೇಧಿಸಲಾಗಿದೆ” ಎಂದು ಪ್ರಕಟಣೆ ಹೊರಡಿಸಲಾಗಿದೆ.

“ಡ್ರೋನ್‌ಗಳು, ರಿಮೋಟ್‌ ಕಂಟ್ರೋಲ್ಡ್‌ ಮೈಕ್ರೋ-ಲೈಟ್‌ ಏರ್‌ಕ್ರಾಫ್ಟಟ್‌, ಪ್ಯಾರಾಗ್ಲೈಡರ್‌ಗಳು, ಪ್ಯಾರಾ ಮೋಟರ್‌, ಹಾಟ್‌ ಏರ್‌ ಬಲೂನ್‌ಗಳು ಹಾಗೂ ಖಾಸಗಿ ಹೆಲಿಕಾಪ್ಟರ್‌ಗಳನ್ನು ಮುಂಬೈನಲ್ಲಿ ಹಾರಾಟ ನಡೆಸಬೇಕು ಎಂದರೆ ಲಿಖಿತ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಹಾರಾಟಕ್ಕೆ ಅವಕಾಶ ಇರುವುದಿಲ್ಲ” ಎಂದು ತಿಳಿಸಲಾಗಿದೆ. ಯಾವ ಸಂಘಟನೆಯ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬುದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ | Coimbatore Car Blast | ಕೊಯಮತ್ತೂರು ಸ್ಫೋಟಕ್ಕೆ ಉಗ್ರ ಲಿಂಕ್​; 45 ಪ್ರದೇಶಗಳಲ್ಲಿ ಎನ್​ಐಎ ರೇಡ್​

Exit mobile version