Site icon Vistara News

ನನ್ನ 3ನೇ ಅವಧಿಯಲ್ಲಿ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ; ಪಿಎಂ ಮೋದಿ

Narendra Modi

ದಾಮೋಹ್: ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ಜಗತ್ತಿನ ಮೂರನೇ ದೊಡ್ಡ ಆರ್ಥಿಕತೆಯಾಗಿಸುವುದಾಗಿ (India 3rd largest economy) ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ(PM Narendra Modi). ಮಧ್ಯಪ್ರದೇಶದ (Madhya Pradesh Assembly Election) ದಾಮೋಹ್ ಪಟ್ಟಣದಲ್ಲಿ ಚುನಾವಣಾ ಪ್ರಚಾರದ ಸಭೆಯಲ್ಲಿ (Election Rally) ಮಾತನಾಡಿದ ಅವರು, ಬಡ ಜನರಿಗೆ ಐದು ವರ್ಷಗಳ ಕಾಲ ಉಚಿತ ರೇಷನ್ ವಿತರಣೆ ಮಾಡಿದ್ದಕ್ಕಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಅವರು ಈ ಪಾಪವನ್ನು ಮಾಡಲಿ. ನಾನು ಈ ದೇಶದ ಜನರಿಗಾಗಿ ಒಳ್ಳೆಯ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.

ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉಚಿತ ರೇಷನ್ ವಿಚರಣೆಯಿಂದ ಮುಂದಿನ ಐದು ವರ್ಷಗಳ ಕಾಲ 80 ಕೋಟಿ ಬಡವರಿಗೆ ಲಾಭವಾಗಲಿದೆ. ನನ್ನನ್ನು ಎಷ್ಟೇ ಬೈದರೂ, ಹೀಯಾಳಿಸಿದರೂ ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟವು ಮುಂದುವರಿಯಲಿದೆ ಎಂದು ಹೇಳಿದರು.

ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದರು. ಆದರೆ, ಆ ರಾಜ್ಯಗಳ ಮುಖ್ಯಮಂತ್ರಿಗಳು ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿ ಕಪ್ಪು ಹಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದರು.

2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ದೇಶದ ಆರ್ಥಿಕತೆ 10ನೇ ಸ್ಥಾನದಲ್ಲಿತ್ತು. ಕ್ರಮೇಣ ಅದು 9, 8, 7 ಮತ್ತು 6ನೇ ಸ್ಥಾನಕ್ಕೆ ಹೋಯಿತು. ಆದರೆ ಯಾರೂ ಅದರ ಬಗ್ಗೆ ಮಾತನಾಡುತ್ತಿರಲಿಲ್ಲ. 5ನೇ ಸ್ಥಾನಕ್ಕೆ ಬಂದು ಬ್ರಿಟನ್‌ ಅನ್ನು ಹಿಂದಿಕ್ಕಿತ್ತು. ಬ್ರಿಟಿಷರು 200 ವರ್ಷಗಳ ಕಾಲ ದೇಶವನ್ನು ಆಳಿದವರು. ಆಗ ಭಾರತದ ಪ್ರಗತಿಯನ್ನು ಕಂಡು ಎಲ್ಲರೂ ನಮ್ಮತ್ತ ನೋಡಲಾರಂಭಿಸಿದರು ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನೆಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ; ನಿತೀಶ್‌ ಕುಮಾರ್‌ಗೆ ಮೋದಿ ಮಾತಿನೇಟು!

“ಹೆಣ್ಣುಮಕ್ಕಳು ಹೆಚ್ಚು ಶಿಕ್ಷಣ ಕಲಿತಷ್ಟು ದೇಶದ ಜನಸಂಖ್ಯೆ ನಿಯಂತ್ರಣ ಆಗುತ್ತದೆ. ಮಕ್ಕಳಾಗಲು ಅವರು ಗಂಡನಿಗೆ ಅವಕಾಶ ನೀಡುವುದಿಲ್ಲ” ಎಂದು ಬಿಹಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ನೀಡಿದ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೂಡ ನಿತೀಶ್‌ ಕುಮಾರ್‌ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಇನ್ನೂ ಎಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ” ಎಂದು ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆ ರ‍್ಯಾಲಿಯೊಂದರಲ್ಲಿ ಮಾತನಾಡಿದ ಮೋದಿ, ನಿತೀಶ್‌ ಕುಮಾರ್‌ ಅವರ ಹೆಸರು ಪ್ರಸ್ತಾಪಿಸದೆಯೇ ವಾಗ್ದಾಳಿ ನಡೆಸಿದರು. “ಇಂಡಿಯಾ ಒಕ್ಕೂಟದ ದೊಡ್ಡ ನಾಯಕರೊಬ್ಬರು ದೇಶದ ಮಾತೆಯರು, ಸಹೋದರಿಯರ ಕುರಿತು ಕೀಳಾಗಿ ಮಾತನಾಡಿದ್ದಾರೆ. ವಿಧಾನಸಭೆಯಲ್ಲಿ ನಿಂತು ಸಹ್ಯವಲ್ಲದ ಭಾಷೆ ಉಪಯೋಗಿಸಿದ್ದಾರೆ. ಇಷ್ಟಾದರೂ ಇಂಡಿಯಾ ಒಕ್ಕೂಟದ ಯಾವೊಬ್ಬ ನಾಯಕರೂ ಇದನ್ನು ಖಂಡಿಸಿಲ್ಲ. ಇವರು ಇನ್ನೂ ಎಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ” ಎಂದು ಮೋದಿ ಕುಟುಕಿದರು.

ಈ ಸುದ್ದಿಯನ್ನೂ ಓದಿ: Ram Mandir: ಜನವರಿ 22ಕ್ಕೆ ರಾಮ ಮಂದಿರ ಉದ್ಫಾಟನೆ, ಆಹ್ವಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

ಇಂಡಿಯಾ ಒಕ್ಕೂಟವು ಘಮಂಡಿಯಾ (ಅಹಂಕಾರದಿಂದ ಕೂಡಿದ) ಘಟಬಂಧನ್‌ ಆಗಿದೆ. ದೇಶದ ಮಾತೆಯರು, ಸಹೋದರಿಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದರೂ ಯಾವ ನಾಯಕನು ಕೂಡ ಒಂದು ಮಾತು ಆಡಿಲ್ಲ. ಅವರಿಗೆ ನಾಚಿಕೆ ಎನ್ನುವುದೇ ಇಲ್ಲ. ಅವರು ದೇಶದ ಘನತೆಗೆ ಚ್ಯುತಿ ತರುತ್ತಿದ್ದಾರೆ ಎಂದು ಇಂಡಿಯಾ ಒಕ್ಕೂಟದ ನಾಯಕರ ವಿರುದ್ಧ ಮೋದಿ ವಾಗ್ದಾಳಿ ಮಾಡಿದರು.

Exit mobile version