Site icon Vistara News

IT Survey at BBC Offices: 58 ಗಂಟೆ ಬಳಿಕ ಬಿಬಿಸಿ ಕಚೇರಿಗಳಲ್ಲಿ ‘ಸಮೀಕ್ಷೆ’ ನಿಲ್ಲಿಸಿದ ಐಟಿ, ಸಿಕ್ಕ ದಾಖಲೆ ಏನು?

IT Survey At BBC Offices

#image_title

ನವದೆಹಲಿ/ಮುಂಬೈ: ದೇಶಾದ್ಯಂತ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿರುವ ಮಧ್ಯೆಯೇ ಮೂರು ದಿನಗಳಿಂದ ದೆಹಲಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದ ‘ತೆರಿಗೆ ಸಮೀಕ್ಷೆ’ಯು (IT Survey at BBC Offices) ಸತತ ೫೮ ಗಂಟೆಗಳ ಬಳಿಕ ಗುರುವಾರ ರಾತ್ರಿ ಮುಕ್ತಾಯಗೊಂಡಿದೆ.

ತೆರಿಗೆ ಪಾವತಿಯಲ್ಲಿ ಏರಪೇರಾಗಿರುವ ಕುರಿತು ಐಟಿ ಅಧಿಕಾರಿಗಳು ಮಂಗಳವಾರ ಬಿಬಿಸಿ ಮಾಧ್ಯಮ ಸಂಸ್ಥೆಯ ಕಚೇರಿಗಳಲ್ಲಿ ಪರಿಶೀಲನೆ ಆರಂಭಿಸಿದ್ದರು. ಮಂಗಳವಾರದಿಂದ ಸತತವಾಗಿ ೫೮ ಗಂಟೆ ದಾಖಲೆ ಪರಿಶೀಲನೆ ಬಳಿಕ ಗುರುವಾರ ರಾತ್ರಿ ೧೦.೩೦ರ ಸುಮಾರಿಗೆ ಕಚೇರಿಗಳಿಂದ ಹೊರನಡೆದಿದ್ದಾರೆ. ಬಿಬಿಸಿ ಕಚೇರಿಗಳಿಂದ ಐಟಿ ಅಧಿಕಾರಿಗಳ ಕಾರು ಹೊರಗೆ ಹೋಗುತ್ತಿರುವ ವಿಡಿಯೊ ಲಭ್ಯವಾಗಿವೆ.

ಗೋದ್ರಾ ಹತ್ಯಾಕಾಂಡಕ್ಕೆ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಬಿಂಬಿಸಿ ಬಿಬಿಸಿಯು ಇತ್ತೀಚೆಗೆ ಡಾಕ್ಯುಮೆಂಟರಿ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ, ಭಾರತದಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷಗಳು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಬಿಜೆಪಿ ನಾಯಕರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಮೂರು ದಿನದ ಪರಿಶೀಲನೆ ವೇಳೆ ಲ್ಯಾಪ್‌ಟಾಪ್‌, ಎಲೆಕ್ಟ್ರಾನಿಕ್‌ ಡಿವೈಸ್‌ ಸೇರಿ ಹಲವು ಉಪಕರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: IT Raid : ಅವರು ಸತ್ಯ ಹೇಳಿದ ಬಿಬಿಸಿಯವರನ್ನೇ ಬಿಟ್ಟಿಲ್ಲ, ನಮ್ಮನ್ನು ಬಿಡ್ತಾರಾ?; ಪ್ರಭಾಕರ ರೆಡ್ಡಿ ಐಟಿ ದಾಳಿಗೆ ಎಚ್‌ಡಿಕೆ ಪ್ರತಿಕ್ರಿಯೆ

Exit mobile version