Site icon Vistara News

Independence Day 2023: ನಾಳೆ ಬೆಳಗ್ಗೆ 7 ಗಂಟೆಗೆ ಕೆಂಪು ಕೋಟೆ ಮೇಲೆ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣ

PM Narendra Modi

Narendra Modi Will Become PM Again, NDA To Win 326 Seats: Says Times Now ETG Survey

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಆಗಸ್ಟ್ 15, ಮಂಗಳವಾರ ಬೆಳಗ್ಗೆ 7 ಗಂಟೆಗೆ ದಿಲ್ಲಿಯ ಕೆಂಪುಕೋಟೆಯ (Red Fort) ಮೇಲೆ 77ನೇ ಸ್ವಾತಂತ್ರ್ಯೋತ್ಸವದ ಭಾಷಣ (Independence Day Speech) ಮಾಡಲಿದ್ದಾರೆ. 2024ರ ಲೋಕಸಭೆ ಚುನಾವಣೆಯ ಸದ್ಯದಲ್ಲೇ ಇರುವುದರಿಂದ ಈ ಭಾಷಣವು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಹಾಗೆಯೇ ಈ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ (Former PM Dr Manmohan Singh) ಅವರ ಭಾಷಣವನ್ನು (10 ಬಾರಿ) ಅವರು ಸರಿ ಗಟ್ಟಲಿದ್ದಾರೆ. ನಾಳೆಯ ಭಾಷಣದ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಸಾಧನೆಗಳು, ಕಾರ್ಯಕ್ರಮಗಳು ಮತ್ತು ದೇಶದ ಪ್ರಗತಿಗೆ ತಮ್ಮ ದೂರದೃಷ್ಟಿಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಸಾಧ್ಯತೆಗಳಿವೆ.

2014ರಲ್ಲಿ ಮೊದಲ ಬಾರಿಗೆ ದಿಲ್ಲಿಯ ಕೆಂಪುಕೋಟೆಯಲ್ಲಿ ಆಗಸ್ಟ್ 15ರಂದು ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಮತ್ತು ಜನ್ ಧನ್ ಬ್ಯಾಂಕ್ ಖಾತೆಗಳ ಕುರಿತು ಹೇಳಿದ್ದರು. ಅಲ್ಲಿಂದ ಇಲ್ಲಿಯ ತನಕವು ಪ್ರತಿ ವರ್ಷವೂ ಅವರು ಹೊಸ ಹೊಸ ಅಭಿಯಾನಗಳ ಬಗ್ಗೆ ಮಾತನಾಡುತ್ತಾರೆ. 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಕೂಡ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇಲ್ಲದಿಲ್ಲ.

2022ರ ಸ್ವಾತಂತ್ರ್ಯೋತ್ಸವ ದಿನದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಚ ಪ್ರಾಣ ಬಗ್ಗೆ ಮಾತನಾಡಿದ್ದರು. ಅಂದರೆ, 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವು ಕುರಿತು ಐದು ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು.

ಕೇಂದ್ರ ಸರ್ಕಾರದ ‘ಜನ್ ಭಾಗಿದಾರಿ’ಗೆ ಅನುಗುಣವಾಗಿ, ದೇಶದ ವಿವಿಧ ಭಾಗಗಳಿಂದ ಬಂದಿರುವ 50 ನರ್ಸ್‌ಗಳ ತಂಡವು ಅವರ ಕುಟುಂಬಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಭಾಗವಹಿಸಲು ವಿಶೇಷ ಆಹ್ವಾನಗಳನ್ನು ಸ್ವೀಕರಿಸಿದೆ. ಸರಪಂಚ್‌ಗಳು, ಶಿಕ್ಷಕರು, ರೈತರು ಮತ್ತು ಮೀನುಗಾರರಂತಹ 1800 ವಿಶೇಷ ಅತಿಥಿಗಳಲ್ಲಿ 50 ನರ್ಸಗಳು ಇದರಲ್ಲಿ ಸೇರಿದ್ದಾರೆ.

Independence Day 2023: ತಿರಂಗಾವನ್ನು ಜಾಲತಾಣಗಳ ಡಿಪಿ ಇಟ್ಟು ದೇಶಪ್ರೇಮ ಮೆರೆಯಲು ಮೋದಿ ಕರೆ

ದೇಶಕ್ಕೆ ದೇಶವೇ 76ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2023) ಸಂಭ್ರಮಕ್ಕೆ ಕಾಲಿಡುತ್ತಿದೆ. ಆಗಸ್ಟ್‌ 15ರಂದು ದೇಶಾದ್ಯಂತ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ. ಅದರಲ್ಲೂ, ಕೆಂಪು ಕೋಟೆಯಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮಕ್ಕೆ ದೆಹಲಿ ಸಿದ್ಧವಾಗುತ್ತಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬರೂ ತಿರಂಗಾವನ್ನು ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಫೋಟೊವನ್ನಾಗಿಸಿ ಎಂದು ಕರೆ ನೀಡಿದ್ದಾರೆ.

“ಹರ್‌ ಘರ್‌ ತಿರಂಗಾ (ಪ್ರತಿಯೊಂದು ಮನೆಯಲ್ಲೂ ತಿರಂಗಾ) ಅಭಿಯಾನದ ಭಾಗವಾಗಿ ಎಲ್ಲರೂ ತಿರಂಗಾವನ್ನು ಸಾಮಾಜಿಕ ಜಾಲತಾಣಗಳ ಡಿಪಿಯಾಗಿ (Social Media Display Picture) ಇಡೋಣ. ಆ ಮೂಲಕ ನಮ್ಮ ಹಾಗೂ ದೇಶದ ನಡುವಿನ ಭಾವುಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸೋಣ” ಎಂದು ನರೇಂದ್ರ ಮೋದಿ ಅವರು ಟ್ವೀಟ್‌ (ಈಗ X) ಮಾಡಿದ್ದಾರೆ. ಹಾಗೆಯೇ, ಅವರು ತಮ್ಮ ಡಿಪಿಯನ್ನು ತಿರಂಗಾ ಆಗಿ ಬದಲಿಸಿದ್ದಾರೆ.

ಫೋಟೊ ಅಪ್‌ಲೋಡ್‌ ಮಾಡಲೂ ಕರೆ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಗಸ್ಟ್‌ 13ರಿಂದ 15ರವರೆಗೆ ಹರ್‌ ಘರ್‌ ತಿರಂಗಾ ಅಭಿಯಾನ ಕೈಗೊಳ್ಳಲಾಗುತ್ತಿದೆ. ಹಾಗಾಗಿ, “ರಾಷ್ಟ್ರಧ್ವಜವು ದೇಶದ ಸ್ವಾತಂತ್ರ್ಯ ಹಾಗೂ ರಾಷ್ಟ್ರೀಯ ಏಕತೆಯ ಸಂಕೇತವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕರೂ ತಿರಂಗಾ ಜತೆ ಭಾವನಾತ್ಮಕ ಸಂಬಂದ ಹೊಂದಿದ್ದು, ಇದು ಹೆಚ್ಚು ಪರಿಶ್ರಮ ವಹಿಸಿ ದೇಶವನ್ನು ಏಳಿಗೆಯತ್ತ ಕೊಂಡೊಯ್ಯಲು ಸ್ಫೂರ್ತಿ ನೀಡುತ್ತದೆ. ಹಾಗಾಗಿ, ಆಗಸ್ಟ್‌ 13ರಿಂದ 15ರವರೆಗೆ ಕೈಗೊಳ್ಳುವ ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಹಾಗೆಯೇ, ತಿರಂಗಾ ಜತೆಗಿನ ನಿಮ್ಮ ಫೋಟೊ ಅಪ್‌ಲೋಡ್‌ ಮಾಡಿ” ಎಂದು ಈಗಾಗಲೇ ಕರೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Independence day 2023 : ಸ್ವಾತಂತ್ರ್ಯ ದಿನದಂದು 2.70 ಲಕ್ಷ ಲಡ್ಡು ಹಂಚಲಿದ್ದಾರೆ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌!

ನೀವೂ ತಿರಂಗಾ ಜತೆಗಿನ ಫೋಟೊ ಅಪ್‌ಲೋಡ್‌ ಮಾಡಿ

ಮನೆಯ ಮೇಲೆ ಅಥವಾ ಮನೆಯ ಅಂಗಳದಲ್ಲಿ ತಿರಂಗಾ ಹಾರಿಸುವುದು, ನೀವು ತಿರಂಗಾ ಜತೆಗೆ ನಿಂತಿರುವ ಫೋಟೊಗಳನ್ನು ಹರ್‌ ಘರ್‌ ತಿರಂಗಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ದೇಶದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ. ದೇಶದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಹರ್‌ ಘರ್‌ ತಿರಂಗಾ ಅಭಿಯಾನ ಕೈಗೊಳ್ಳಲಾಗಿತ್ತು. ಈ ಬಾರಿಯೂ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ನೀವು ಕೂಡ https://harghartiranga.com ಗೆ ಭೇಟಿ ನೀಡಿ ಸುಲಭವಾಗಿ ಫೋಟೊ ಅಪ್‌ಲೋಡ್‌ ಮಾಡಬಹುದಾಗಿದೆ.

ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 15ರಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ದೇಶಾದ್ಯಂತ ಸುಮಾರು 1,800 ವಿಶೇಷ ಅತಿಥಿಗಳು ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version