ಹೊಸದಿಲ್ಲಿ: ಮಂಗಳವಾರದಂದು ನಡೆಯುವ ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಗೆ (Independence Day 2023) ರಾಜಧಾನಿ ಪೊಲೀಸರು (Delhi police) ಭಾರಿ ಸಿದ್ಧತೆ ಮಾಡಿಕೊಳುತ್ತಿದ್ದು, ಕೆಂಪು ಕೋಟೆ (Red fort) ಸುತ್ತಮುತ್ತ ಬಿಗಿ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗುತ್ತಿದೆ.
10,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಸ್ವಾತಂತ್ರ್ಯ ದಿನದಂದು ನಗರದಾದ್ಯಂತ ನಿಯೋಜಿಸಲು ನಿರ್ಧರಿಸಲಾಗಿದೆ. ಜನ ನಿರ್ಭೀತವಾಗಿ ಯಾವುದೇ ಅನುಕೂಲತೆ ಇಲ್ಲದೆ ಪ್ರಯಾಣಿಸುವಂತೆ, ಸ್ವಾತಂತ್ರ್ಯೋತ್ಸವ ಆಚರಿಸುವಂತೆ, ರಾಜಧಾನಿ ಸುರಕ್ಷಿತವಾಗಿರುವಂತೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಗಳು ತೀಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಗಾಗಿ ನಗರದಾದ್ಯಂತ 10,000 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು (pm Narendra Modi) ಧ್ವಜಾರೋಹಣ ನಡೆಸಲಿರುವ ಕೆಂಪು ಕೋಟೆ ಬಳಿ ವಿಧ್ವಂಸಕ ಕೃತ್ಯಗಳ ತಡೆ ಉಪಕ್ರಮಗಳು, ಬಿಗಿ ತಪಾಸಣೆ, ಪ್ರವೇಶ ನಿಯಂತ್ರಣ ಮತ್ತು ಆಂಟಿ-ಟೆರರ್ ಸ್ಕ್ವಾಡ್ ಅಳವಡಿಸಲಾಗಿವೆ ಎಂದು ಪೊಲೀಸ್ ಉಪ ಕಮಿಷನರ್ (ಸಾರ್ವಜನಿಕ ಸಂಪರ್ಕ ಅಧಿಕಾರಿ) ಸುಮನ್ ನಲ್ವಾ ತಿಳಿಸಿದರು.
ಭಯೋತ್ಪಾದಕ ಕೃತ್ಯ ಸಾಧ್ಯತೆಗಳ ಮೇಲೆ ನಿಗಾ ಇಡಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆಯೂ ಜಾರಿಯಲ್ಲಿದೆ ಎಂದು ಅಧಿಕಾರಿ ಹೇಳಿದರು. ಭಾನುವಾರ ಮಧ್ಯರಾತ್ರಿಯಿಂದ ಭಾರೀ ವಾಹನಗಳು ರಾಜಧಾನಿಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಗಡಿಗಳಲ್ಲಿ ತಪಾಸಣೆ ನಡೆಸಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಸಂಚಾರ ನಿರ್ಬಂಧಗಳನ್ನು ಮಾಡಲಾಗಿದೆ. ನಾಗರಿಕರಿಗೆ ನಿಯಮಿತ ಸಂಚಾರ ಸಲಹೆ ನೀಡಲಾಗುತ್ತಿದೆ.
ಕೆಂಪು ಕೋಟೆ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳುಗಳಿಂದ ಹೋಟೆಲ್‌ಗಳು, ಅತಿಥಿ ಗೃಹಗಳು, ಪೇಯಿಂಗ್ ಗೆಸ್ಟ್ ವಸತಿ ಮತ್ತು ಲಾಡ್ಜ್‌ಗಳಲ್ಲಿ ಕಟ್ಟುನಿಟ್ಟಾದ ಪರಿಶೀಲನೆ ನಡೆಸಲಾಗಿದೆ. ಅನುಮಾನಾಸ್ಪದ ವಸ್ತುಗಳು ಮತ್ತು ವ್ಯಕ್ತಿಗಳನ್ನು ಪರಿಶೀಲಿಸಲಾಗುತ್ತಿದೆ. ನಗರದಾದ್ಯಂತ ಪ್ರತಿ ಭಾಗದಲ್ಲಿ ಪ್ರತಿದಿನ 100ಕ್ಕೂ ಹೆಚ್ಚು ವಾಹನಗಳನ್ನು ಪರಿಶೀಲಿಸಲಾಗಿದೆ. ನಿವಾಸಿಗಳ ಕಲ್ಯಾಣ ಸಂಘಗಳು (RWAs) ಮತ್ತು ಮಾರುಕಟ್ಟೆ ಕಲ್ಯಾಣ ಸಂಘಗಳೊಂದಿಗೆ (MWAs) ಸಭೆಗಳನ್ನು ನಡೆಸಲಾಯಿತು. ಏನಾದರೂ ಅನುಮಾನಾಸ್ಪದವಾಗಿ ಏನಾದರೂ ಕಂಡುಬಂದರೆ ಎಚ್ಚರಿಸಲಿ ದೆಹಲಿಯ ಪ್ರಜ್ಞಾವಂತ ನಾಗರಿಕರನ್ನು ಅಲರ್ಟ್ ಮಾಡಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ರಾಷ್ಟ್ರೀಯ ಭದ್ರತಾ ಗಾರ್ಡ್‌ಗಳು (ಎನ್‌ಎಸ್‌ಜಿ) ಸೇರಿದಂತೆ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
ಏತನ್ಮಧ್ಯೆ, ದೆಹಲಿ ಸಂಚಾರ ಪೊಲೀಸರು ಸಹ ಸೂಚನೆ ನೀಡಿದ್ದಾರೆ. ಮಂಗಳವಾರ ಮುಂಜಾನೆ 4ರಿಂದ 11 ಗಂಟೆಯವರೆಗೆ ಕೆಂಪು ಕೋಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರಿಗೆ ರಸ್ತೆಗಳನ್ನು ಮುಚ್ಚಲಾಗುವುದು. ಪರ್ಯಾಯ ರಸ್ತೆಗಳನ್ನು ಸೂಚಿಸಲಾಗಿದೆ. ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್‌ಗಳು ಭಾನುವಾರ ಮಧ್ಯರಾತ್ರಿಯಿಂದ ಆಗಸ್ಟ್ 15ರಂದು ಬೆಳಿಗ್ಗೆ 11 ಗಂಟೆಯವರೆಗೆ ಕಾಶ್ಮೀರ್ ಗೇಟ್ ಮತ್ತು ರಿಂಗ್ ರೋಡ್ ನಡುವೆ ಚಲಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Independence Day 2023: ಭಾರತ ಸ್ವಾತಂತ್ರ್ಯ ಚಳವಳಿಯ ಟಾಪ್ 10 ಹೋರಾಟಗಾರರು!