Site icon Vistara News

‌Independence Day 2023: ಹಿಂದುಸ್ತಾನ್‌ ಜಿಂದಾಬಾದ್‌ ಥಾ, ಜಿಂದಾಬಾದ್‌ ರಹೇಗಾ!

patriotic films

ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಲ್ಲಿ (‌Independence Day 2023) ಗಂಗಾ ನದಿಯಲ್ಲಿ ಬಹಳಷ್ಟು ನೀರು ಹರಿದುಹೋಗಿದೆ. ಹಾಗೆಯೇ ಬಾಲಿವುಡ್‌ನಲ್ಲಿ ಸಾಕಷ್ಟು ಫಿಲಂಗಳೂ (patriotic films) ಬಂದುಹೋಗಿವೆ. ದೇಶಭಕ್ತಿಯನ್ನು ಬಡಿದೆಬ್ಬಿಸುವ, ದೇಶಭಕ್ತರ ಕಥೆಗಳನ್ನು ಸಾರುವ, ಯೋಧರ ನೆನಪುಗಳನ್ನು ನಮ್ಮಲ್ಲಿ ಅಮರವಾಗಿಸುವ ಚಲನಚಿತ್ರಗಳು ಸಾಕಷ್ಟಿವೆ. ಅಂಥ ಸಿನಿಮಾಗಳ ಸಂಭಾಷಣೆಗಳೇ (patriotic film dialogues) ಚಂದ. ಪ್ರತೀ ಸಲ ಕೇಳಿದಾಗಲೂ ಮೈಮನ ಪುಳಕ. ಅಂಥ ರೋಮಾಂಚನಕಾರಿ ಡಯಲಾಗ್‌ಗಳು ಇಲ್ಲಿವೆ.

ಗದರ್: ಏಕ್ ಪ್ರೇಮ್ ಕಥಾ

ʼʼಹಿಂದೂಸ್ತಾನ್ ಜಿಂದಾಬಾದ್ ಥಾ, ಜಿಂದಾಬಾದ್ ಹೈ, ಜಿಂದಾಬಾದ್ ರಹೇಗಾʼʼ

ಈ ಚಿತ್ರ (gadar ek prem katha) ಸಾರ್ವಕಾಲಿಕ ದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದು. ತಾರಾ ಸಿಂಗ್ (ಸನ್ನಿ ಡಿಯೋಲ್) ಸಕೀನಾ (ಅಮೀಶಾ ಪಟೇಲ್) ಎಂಬ ಅಮರ ಪ್ರೇಮಿಗಳ ಕತೆಯಾಗಿರುವಂತೆಯೇ, ಭಾರತ- ಪಾಕಿಸ್ತಾನ ಎಂಬ ಎರಡು ಭೂಭಾಗಗಳ ಕತೆಯೂ ಇದು ಹೌದು. ಚಿತ್ರದ ಎರಡನೇ ಭಾಗ ಇದೀಗ ಥಿಯೇಟರ್‌ಗಳಿಗೆ ಬಂದಿದೆ. ಇದರ ಪಾಪ್ಯುಲರ್‌ ʼಹಿಂದುಸ್ತಾನ್ ಜಿಂದಾಬಾದ್ ಥಾ, ಜಿಂದಾಬಾದ್ ಹೈ, ಜಿಂದಾಬಾದ್ ರಹೇಗಾ’ (ಹಿಂದೂಸ್ತಾನ ಗೆದ್ದಿದೆ, ಗೆಲ್ಲುತ್ತಿದೆ, ಗೆಲ್ಲುತ್ತಲೇ ಇರುತ್ತದೆ)‌ ಎಂಬ ಸಂಭಾಷಣೆಯನ್ನು ʼಗದರ್ 2: ದಿ ಕಥಾ ಕಂಟಿನ್ಯೂಸ್‌ʼನಲ್ಲಿಯೂ ಬಳಸಲಾಗಿದೆ.

ಬಾರ್ಡರ್‌

(ಯೇ ಧರ್ತಿ ಶೇರ್‌ ಭಿ ಪೈದಾ ಕರ್ತೀ ಹೈ, ದೂಸ್ರೋಂ ಕೋ ಮಿಟ್ಟಿ ಮೆ ಮಿಲಾನೀ ವಾಲೀ ಶೇರ್‌)

ಬಿಡುಗಡೆಗೊಂಡು ಹಲವು ದಶಕಗಳಾಗಿದ್ದರೂ (border 1997) ಇಂದಿಗೂ ಬಾಲಿವುಡ್‌ನ ಅತಿ ಫೇವರಿಟ್‌ ದೇಶಭಕ್ತಿಯ ಚಿತ್ರಗಳಲ್ಲಿ ಇದು ಒಂದು. 1971ರ ಲಾಂಗೇವಾಲಾ ಯುದ್ಧದ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರದ ʼಸಂದೇಶೇ ಆತೇ ಹೈಂ..ʼʼ ಪದ್ಯ ದೇಶದ ಆಲ್‌ಟೈಮ್‌ ಫೇವರಿಟ್‌ಗಳಲ್ಲಿ ಒಂದು. ʼʼಈ ಭೂಮಿ ಹುಲಿಗಳಿಗೂ ಜನ್ಮ ನೀಡುತ್ತದೆ; ಎದುರಾಳಿಗಳನ್ನು ಮಣ್ಣಿನಲ್ಲಿ ಒಂದುಗೂಡಿಸುವ ಹುಲಿʼʼ ಎಂದೆನ್ನುವ ಮೇಲಿನ ಡಯಲಾಗ್‌ ದೇಶಪ್ರಿಯರಲ್ಲಿ ರೋಮಾಂಚನ ಮೂಡಿಸದೇ ಇದ್ದೀತೆ?

ಮಂಗಲ್ ಪಾಂಡೆ: ದಿ ರೈಸಿಂಗ್

(ಯೇ ಆಜಾದಿ ಕಿ ಲಡಾಯಿ ಹೈ)

ʼಮಂಗಲ್ ಪಾಂಡೆ: ದಿ ರೈಸಿಂಗ್ʼ (Mangal Pandey: The Rising) 2005ರಲ್ಲಿ ಬಂದ ಐತಿಹಾಸಿಕ ಚಿತ್ರ. 1857ರ ಮೊದಲ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಹುಟ್ಟುಹಾಕಿದ ಭಾರತೀಯ ಸೈನಿಕ ಮಂಗಲ್ ಪಾಂಡೆಯ ಜೀವನವನ್ನು ಆಧರಿಸಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಅಮೀರ್ ಖಾನ್, “ಯೇ ಆಜಾದಿ ಕಿ ಲಡಾಯಿ ಹೈ, ಗುಜ್ರೆ ಹುಯೇ ಕಲ್ ಸೇ ಆಜಾದಿ. ಆನೇ ವಾಲೇ ಕಲ್ ಕೆ ಲಿಯೇ” (ಇದು ಬಂಧಮುಕ್ತಿಯ ಹೋರಾಟ. ಕಳೆದ ನಿನ್ನೆಗಳಿಂದ ಬಂಧಮುಕ್ತಿ, ಬರಲಿರುವ ನಾಳೆಗಳಿಗಾಗಿ) ಎನ್ನುತ್ತಾರೆ.

ರಾಝಿ

ವತನ್ ಕೆ ಆಗೇ ಕುಚ್ ಭಿ ನಹಿ, ಖುದ್ ಭಿ ನಹಿ (ದೇಶದ ಮುಂದೆ ಯಾವುದೂ ದೊಡ್ಡದಲ್ಲ, ನಾನೂ ದೊಡ್ಡದಲ್ಲ)

raazi film

ರಾಝಿ ಬಾಲಿವುಡ್‌ನ ಹಿಟ್ ದೇಶಭಕ್ತಿ ಚಿತ್ರಗಳಲ್ಲಿ ಒಂದು. ಚಿತ್ರದಲ್ಲಿ ಆಲಿಯಾ ಭಟ್‌ ಅಂಡರ್‌ಕವರ್‌ ಏಜೆಂಟ್ ಪಾತ್ರದಲ್ಲಿ ನಟಿಸಿದ್ದಾಳೆ. ಇದು ಆಕೆಯ ಡಯಲಾಗ್.‌ 1971ರಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಗಾಳಿ ಬೀಸುತ್ತಿರುವಾಗ ನಡೆದ 20 ವರ್ಷದ ಕಾಶ್ಮೀರಿ ಹುಡುಗಿಯ ನಿಜಜೀವನದ ಕಥೆ. ರಾಝಿ- ಇದು ಹರಿಂದರ್ ಸಿಕ್ಕಾ ಅವರ ಕಾದಂಬರಿಯ ಚಿತ್ರ ರೂಪ.

ಚಕ್ ದೇ! ಇಂಡಿಯಾ

(ಮುಝೆ ಸಿರ್ಫ್ ಏಕ್ ಮುಲ್ಕ್ ಕಾ ನಾಮ್ ಸುನಾಯಿ ದೇತಾ ಹೈ, ಇಂಡಿಯಾ)

ಈ ಐಕಾನಿಕ್ ಡೈಲಾಗ್ ಶಾರುಖ್ ಖಾನ್ ಅವರ ಎವರ್‌ಗ್ರೀನ್‌ (chak de india) ಚಿತ್ರದ್ದು. ಭಾರತೀಯ ಹಾಕಿ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಅವರ ಡಯಲಾಗ್‌ ಇದು. “ನಂಗೆ ರಾಜ್ಯಗಳ ಹೆಸರು ಕೇಳಿಸಬೇಕಾಗಿಲ್ಲ, ಕಾಣಿಸಬೇಕಾಗಿಲ್ಲ. ಕೇವಲ ಒಂದು ರಾಷ್ಟ್ರದ ಹೆಸರು ಕೇಳಿಸಬೇಕಿದೆ, ಇಂಡಿಯಾʼʼ ಎಂದು ಇದರರ್ಥ. ಗೆಲುವಿನ ಗೋಲು ಗಳಿಸಲು ವಿಫಲಗೊಂಡ ತಂಡದ ನಾಯಕ ಕಬೀರ್ ಖಾನ್ ತಂಡದ ಸೋಲಿಗೆ ಕಾರಣವಾಗಿ, ವಜಾಗೊಂಡು, ವರ್ಷಗಳ ನಂತರ ಮಹಿಳಾ ಹಾಕಿ ತಂಡದ ತರಬೇತುದಾರರಾಗಿ ಸ್ಥಾನ ಪಡೆದಾಗ ಆಡುವ ಮಾತಿದು.

ಹಾಲಿಡೇ: ಎ ಸೋಲ್ಜರ್‌ ಈಸ್ ನೆವರ್‌ ಆಫ್‌ ಡ್ಯೂಟಿ

(ಜಬ್ ವಹಾನ್ ಬಾರ್ಡರ್ ಪಾರ್ ಲೋಗ್ ಅಪ್ನಿ ನೀಂದ್ ಕಿ ಪರ್ವಾ ಕಿಯೇ ಬಿನಾ ಜಾಗ್ತೇ ಹೈಂ.)

ಅಕ್ಷಯ್ ಕುಮಾರ್ ಅವರ ಚಲನಚಿತ್ರ ಹಾಲಿಡೇ, ಭಾರತೀಯ ಸೇನೆಯ ಅಧಿಕಾರಿಯೊಬ್ಬರು ರಜೆಯ ಮೇಲೆ ಮುಂಬೈಗೆ ಆಗಮಿಸಿ ಸ್ಲೀಪರ್ ಸೆಲ್ ನೆಟ್‌ವರ್ಕ್‌ನ ಭಯೋತ್ಪಾದಕ ನಾಯಕನನ್ನು ಬೇಟೆಯಾಡುವ ಕಥೆಯನ್ನು ಹೊಂದಿದೆ. ಅವರು ಆಡುವ ಡಯಲಾಗ್-‌ “ಜಬ್ ವಹಾನ್ ಬಾರ್ಡರ್ ಪರ್ ಲೋಗ್ ಅಪ್ನಿ ನೀಂದ್ ಕಿ ಪರ್ವಾ ಕಿಯೇ ಬಿನಾ ಜಾಗ್ತೇ ಹೈ, ತಬ್ ತುಮ್ಹೇಂ ಯಹಾನ್ ಶೆಹರ್ ಮೇ ಚೈನ್ ಕಿ ನೀಂದ್ ಆತಿ ಹೈ”. ʼʼಅಲ್ಲಿ ಜವಾನರು ಗಡಿಯಲ್ಲಿ ತಮ್ಮ ನಿದ್ರೆಯ ಚಿಂತೆ ಬಿಟ್ಟು ಕಾವಲು ಕಾದರೆ ಮಾತ್ರ ನಿಮಗೆ ಇಲ್ಲಿ ನಗರದಲ್ಲಿ ಚಿಂತೆಯಿಲ್ಲದ ನಿದ್ರೆ ಬಂದೀತುʼʼ ಎಂಧೂ ಇದರರ್ಥ.

ಇದನ್ನೂ ಓದಿ: Independence Day 2023: ಈ ಸಂದೇಶಗಳ ಮೂಲಕ 77ನೇ ಸ್ವಾತಂತ್ರ್ಯ ದಿನಾಚರಣೆಗೆ ಉಲ್ಲಾಸ ತುಂಬಿ!

Exit mobile version