Site icon Vistara News

India and Japan: ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ವಿಸ್ತರಿಸಲು ಒಂದಾದ ಜಪಾನ್ ಮತ್ತು ಭಾರತ ಪ್ರಧಾನಿಗಳು

#image_title

ನವದೆಹಲಿ: ಭಾರತ ಮತ್ತು ಜಪಾನ್‌ (India and Japan) ನಡುವಿನ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಪರಸ್ಪರ ಸಹಕಾರದೊಂದಿಗೆ ಮುಂದುವರಿಯುವ ವಾಗ್ದಾನ ಮಾಡಿದ್ದಾರೆ.

ಇದನ್ನೂ ಓದಿ: ಜಪಾನ್‌ನಲ್ಲಿ 80 ಕೋಟಿ ರೂ. ಗಳಿಸಿದ RRR Movie; ದಾಖಲೆಗಳ ಮೇಲೆ ದಾಖಲೆಗಳ ಸೃಷ್ಟಿ

ಫ್ಯೂಮಿಯೊ ಅವರು ಸೋಮವಾರ ಬೆಳಗ್ಗೆ ದೆಹಲಿಗೆ ಬಂದಿದ್ದು, ಸುಮಾರು 27 ಗಂಟೆಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿರಲಿದ್ದಾರೆ. ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹಲವು ವಿಚಾರಗಳ ಕುರಿತಾಗಿ ಚರ್ಚೆ ನಡೆಸಿದ್ದಾರೆ. ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ವಿಸ್ತರಿಸುವುದು ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ಗೆ ಮುಖ್ಯವಾಗಿದೆ. ಹಾಗೆಯೇ ಉಭಯ ದೇಶಗಳ ವಿಭಿನ್ನ ಕ್ಷೇತ್ರಗಳಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ.

ಜಿ20 ಭಾರತೀಯ ಅಧ್ಯಕ್ಷ ಸ್ಥಾನದ ಆದ್ಯತೆಗಳ ಬಗ್ಗೆ ಪ್ರಧಾನಿ ಫ್ಯೂಮಿಯಾ ಕಿಶಿದಾ ಅವರಿಗೆ ವ್ಯಾಪಕವಾಗಿ ವಿವರಿಸಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯು ಪ್ರಜಾಸತ್ತಾತ್ಮಕ ತತ್ವಗಳು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಗೌರವವನ್ನು ಆಧರಿಸಿದೆ ಮತ್ತು ಇದು ಇಂಡೋ-ಪೆಸಿಫಿಕ್‌ಗೆ ಸಹ ಮುಖ್ಯವಾಗಿದೆ. ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧಗಳಲ್ಲಿ ವಿಶೇಷವಾಗಿ ರಕ್ಷಣೆ, ಡಿಜಿಟಲ್ ತಂತ್ರಜ್ಞಾನ, ವ್ಯಾಪಾರ ಮತ್ತು ಹೂಡಿಕೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಪ್ರಗತಿಯ ಕುರಿತಾಗಿ ಚರ್ಚೆ ನಡೆಸಿದೆವು ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ನವದೆಹಲಿಯೊಂದಿಗಿನ ಟೋಕಿಯೊದ ಆರ್ಥಿಕ ಸಹಕಾರವು ವೇಗವಾಗಿ ಬೆಳೆಯುತ್ತಿದೆ ಮತ್ತು ಇದು ಭಾರತದ ಮತ್ತಷ್ಟು ಅಭಿವೃದ್ಧಿಗೆ ಬೆಂಬಲ ನೀಡುವುದಲ್ಲದೆ ಜಪಾನ್‌ಗೆ ಗಮನಾರ್ಹ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪಿಎಂ ಕಿಶಿಡಾ ತಮ್ಮ ಟೀಕೆಗಳಲ್ಲಿ ಹೇಳಿದರು.

ಹಾಗೆಯೇ ಜಪಾನ್‌ ಪ್ರಧಾನಿ ಕಿಶಿದಾ ಅವರು ಮೇ ತಿಂಗಳಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಪ್ರಧಾನಿ ಮೋದಿಯವರನ್ನು ಔಪಚಾರಿಕವಾಗಿ ಆಹ್ವಾನಿಸಿರುವುದಾಗಿಯೂ ವರದಿಯಾಗಿದೆ.

ಇದನ್ನೂ ಓದಿ: Paharganj Holi Case: ಹೋಳಿ ಹಬ್ಬದ ದಿನ ಬಣ್ಣ ಹಚ್ಚುವ ನೆಪದಲ್ಲಿ ಜಪಾನ್‌ ಮಹಿಳೆಗೆ ಕಿರುಕುಳ, ನಾಲ್ವರ ಬಂಧನ
ಕಳೆದ ವರ್ಷ ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿದ್ದ ಕಿಶಿಯೋ ಅವರು ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಐದು ಟ್ರಿಲಿಯನ್ ಯೆನ್ (3,20,000 ಕೋಟಿ ರೂ.) ಹೂಡಿಕೆ ಗುರಿಯನ್ನು ಘೋಷಿಸಿದ್ದರು. ಭಾರತ-ಜಪಾನ್ ಸಂಬಂಧಗಳನ್ನು 2000ರಲ್ಲಿ ‘ಜಾಗತಿಕ ಸಹಭಾಗಿತ್ವ’, 2006ರಲ್ಲಿ ‘ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ’ ಮತ್ತು 2014ರಲ್ಲಿ ‘ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ’ ಎಂದು ಉನ್ನತೀಕರಿಸಲಾಗಿದೆ. 2006ರಿಂದ ಎರಡು ದೇಶಗಳ ನಾಯಕರ ನಡುವೆ ನಿಯಮಿತ ವಾರ್ಷಿಕ ಶೃಂಗಸಭೆಗಳು ನಡೆಯುತ್ತಿವೆ.‌

ಕಳೆದ ವರ್ಷ ಪ್ರಧಾನಿ ಮೋದಿ ಮತ್ತು ಕಿಶಿದಾ ಮೂರು ಬಾರಿ ಭೇಟಿಯಾಗಿದ್ದರು. ಪಿಎಂ ಕಿಶಿದಾ ಮಾರ್ಚ್‌ನಲ್ಲಿ 14ನೇ ವಾರ್ಷಿಕ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡಿದ್ದರು ಮತ್ತು ಪ್ರಧಾನಿ ಮೋದಿ ಅವರು ಮೇ ತಿಂಗಳಲ್ಲಿ ಕ್ವಾಡ್ ಶೃಂಗಸಭೆಗಾಗಿ ಮತ್ತು ಸೆಪ್ಟೆಂಬರ್‌ನಲ್ಲಿ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತಿಮ ಸಂಸ್ಕಾರಕ್ಕಾಗಿ ಟೋಕಿಯೊಗೆ ಭೇಟಿ ನೀಡಿದ್ದರು.

Exit mobile version