Site icon Vistara News

G20 Presidency | ಭಾರತದ ಜಿ20 ಕಾರುಬಾರು ಶುರು, ವಾರ ಕಾಲ ಬೆಳಗಲಿವೆ 100 ಪಾರಂಪರಿಕ ತಾಣಗಳು!

G20 Presidency @ India

ನವದೆಹಲಿ: ಡಿಸೆಂಬರ್ 1, ಗುರುವಾರದಿಂದಲೇ ಭಾರತದ ಜಿ20 ಅಧ್ಯಕ್ಷತೆ (G20 presidency) ಜವಾಬ್ದಾರಿ ಆರಂಭವಾಗಿದೆ. ಆರ್ಥಿಕ ಹಿಂಜರಿತ, ದೇಶಗಳ ಋಣಭಾರ ಮತ್ತು ಹವಾಮಾನ ಬಿಕ್ಕಟ್ಟಿನಂತಹ ಜಾಗತಿಕ ಸವಾಲುಗಳನ್ನು ನಿಭಾಯಿಸಲು ಭಿನ್ನ ಗುಂಪಿನೊಳಗಿನ ಏಕತೆಯ ಮೇಲೆ ಕೇಂದ್ರೀಕರಿಸುವ ನೀತಿಯೊಂದಿಗೆ ಭಾರತವು ತನ್ನ ಅಭಿಯಾನವನ್ನು ಆರಂಭಿಸಿದೆ. ಜಿ20 ಅಧ್ಯಕ್ಷತೆಯ ಸಂದರ್ಭವನ್ನು ಸ್ಮರಣೀಯವಾಗಿಸಲು ಕೇಂದ್ರ ಸರ್ಕಾರವು, ದೇಶಾದ್ಯಂತ ಹರಡಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಸೇರಿದಂತೆ ನೂರಾರು ಕೇಂದ್ರೀಯ ರಕ್ಷಿತ ಸ್ಮಾರಕ ಸ್ಥಳಗಳಲ್ಲಿ ಡಿ.1ರಿಂದ ಒಂದು ವಾರ ಕಾಲ ದೀಪಗಳನ್ನು ಬೆಳಗಿಸಲಾಗುತ್ತದೆ.

ದಿಲ್ಲಿಯ ಹೂಮಾಯೂನ್ ಗೋರಿ, ಪುರಾನಾ ಕಿಲ್ಲಾದಿಂದ ಗುಜರಾತ್‌ನ ಮೊಧೇರಾ ಸೂರ್ಯ ದೇವಾಲಯ ಹಾಗೂ ಒಡಿಶಾ ಕೊನಾರ್ಕ್ ಸೂರ್ಯ ಟೆಂಪಲ್‌ನಿಂದ ಹಿಡಿದು ಬಿಹಾರದ ಶೇರ್ ಶಾ ಸೂರಿ ಗೋರಿಯಯವರೆಗಿನ 100 ಪುರಾತನ ಸ್ಥಳಗಳಲ್ಲಿ ದೀಪುಗಳನ್ನು ಬೆಳಗಲಾಗುತ್ತಿದೆ. ಇದೇ ವೇಳೆ, ಭಾರತದ ಜಿ20 ಅಧ್ಯಕ್ಷೀಯತನಕ್ಕೆ ಬೆಂಬಲ ನೀಡಲು ಅಮೆರಿಕ ಎದುರು ನೋಡುತ್ತಿದೆ ಎಂದು ಶ್ವೇತಭವನವು ತಿಳಿಸಿದೆ.

ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ವಿಷಯದಿಂದ ಪ್ರೇರಿತವಾಗಿ ಭಾರತವು ಏಕತೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಜಗತ್ತು ಭಯೋತ್ಪಾದನೆ, ಹವಾಮಾನ ಬದಲಾವಣೆ ಮತ್ತು ಸಾಂಕ್ರಾಮಿಕ ರೂಪದಲ್ಲಿ ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಇವುಗಳ ವಿರುದ್ಧ ಒಗ್ಗಟ್ಟಿನ ಹೋರಾಟದ ಅಗತ್ಯವಿದೆ ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ | G20 Summit | ಬೆಂಗಳೂರಲ್ಲಿ ಜಿ20 ರಾಷ್ಟ್ರಗಳ ವಿತ್ತ ಸಚಿವರು, ಕೇಂದ್ರೀಯ ಬ್ಯಾಂಕ್‌ಗಳ ಗವರ್ನರ್‌ಗಳ ಸಭೆ

Exit mobile version