ನವದೆಹಲಿ: ಜಗತ್ತಿನಲ್ಲೇ ಭಾರತವು (India) ಅತಿದೊಡ್ಡ ರಸ್ತೆ ಜಾಲವನ್ನು (Largest Road Network) ಹೊಂದಿರುವ ಎರಡನೇ ದೇಶವಾಗಿದೆ. ಈ ವಿಷಯದಲ್ಲಿ ಚೀನಾವನ್ನು (China) ಹಿಂದಿಕ್ಕಿ ಭಾರತವು ಎರಡನೇ ಸ್ಥಾನಕ್ಕೇರಿದೆ. ಮೊದಲನೇ ಸ್ಥಾನದಲ್ಲಿ ಅಮೆರಿಕವಿದೆ(America). 8 ವರ್ಷಗಳಲ್ಲಿ 1.45 ಲಕ್ಷ ಕಿಮೀ ರಸ್ತೆ ಸಂಪರ್ಕವನ್ನು ವಿಸ್ತರಿಸವ ಮೂಲಕ ಭಾರತವು ಎರನಡೇ ಸ್ಥಾನಕ್ಕೆ ಏರಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Road Transport and Highways minister Nitin Gadkari) ಅವರು ಹೇಳಿದ್ದಾರೆ.
ತಮ್ಮ ಅಧಿಕಾರಾವಧಿಯಲ್ಲಿನ ಸಾಧನೆಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು. ಕಳೆದ ಒಂಬತ್ತು ವರ್ಷಗಳಲ್ಲಿ ಭಾರತವು ಹೆದ್ದಾರಿಗಳನ್ನು ಸುಧಾರಿಸಲು ಮತ್ತು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳನ್ನು ರಚಿಸುವತ್ತ ಗಮನಹರಿಸುತ್ತಿದೆ. ದೇಶದ ಮೂಲಸೌಕರ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದಿಲ್ಲಿ-ಮುಂಬೈ ಎಕ್ಸ್‌ಪ್ರೆಸ್ ವೇ ಮೇಲೆ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದೆ. ಈ ಎಕ್ಸ್ ಪ್ರೆಸ್ ವೇ ಭಾರತದ ಉನ್ನತ ದರ್ಜೆಯ ಯೋಜನೆಯಾಗಿದ್ದು, ಬಹುತೇಕ ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Nitin Gadkari: ಬಿಜೆಪಿ ಹೈಕಮಾಂಡ್ ಜತೆ ಮುನಿಸು, ನಿತಿನ್ ಗಡ್ಕರಿ ರಾಜಕೀಯ ನಿವೃತ್ತಿ?
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವನಾಗುವುದಕ್ಕೆ ಮುಂಚೆ ಭಾರತದಲ್ಲಿ 91,287 ಕಿ.ಮೀ ರಸ್ತೆ ಸಂಪರ್ಕ ಜಾಲವಿತ್ತು. ನನ್ನ ಅವಧಿಯಲ್ಲಿ ಈ ಜಾಲವನ್ನು ವಿಸ್ತರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಹೆಚ್ಚು ಹಿಡಿತವನ್ನು ಸಾಧಿಸಿದ್ದರಿಂದ ಹೈವೇಗಳು ಮತ್ತು ಎಕ್ಸ್‌ಪ್ರೆಸ್‌ಗಳ ನಿರ್ಮಾಣ ಮತ್ತು ಅವುಗಳನ್ನು ಸುಧಾರಣೆ ಮಾಡಲು ಸಾಧ್ಯವಾಯಿತು. ಉತ್ತರ ಪ್ರದೇಶ ಲಕ್ನೋ-ಘಾಜಿಯಪುರ ಮತ್ತು ದಿಲ್ಲಿ-ಮಿರತ್ ಹೈವೇ ಸೇರಿದಂತೆ ದೇಶಾದ್ಯಂತ 30 ಸಾವಿರ ಕಿಮೀ ಹೈವೇಗಳನ್ನು ದೇಶಾದ್ಯಂತ ನಿರ್ಮಾಣ ಮಾಡಲಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.