Site icon Vistara News

India Bloc: ರಾಷ್ಟ್ರಮಟ್ಟದಲ್ಲಿ ಮಾತ್ರ ಇಂಡಿಯಾ ಕೂಟ ಎಂದ ಎಸ್‌ಪಿ ನಾಯಕ! ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು

akhilesh yadav

ನವದೆಹಲಿ: ಪ್ರತಿಪಕ್ಷಗಳ (Opposition Parties) ಭಾರತೀಯ ರಾಷ್ಟ್ರೀಯ ಅಭಿವೃದ್ಧಿಯ ಸಮಗ್ರ ಒಕ್ಕೂಟ(INDIA Bloc)ವು ರಾಷ್ಟ್ರ ಮಟ್ಟದಲ್ಲಿ (National Level) ಮಾತ್ರವೇ ಇರಲಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾವದ್ (SP Leader Akhilesh Yadav) ಅವರು ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟವು ರಾಜ್ಯ ಮಟ್ಟದಲ್ಲೂ ಇದೆಯೇ ಎಂಬ ಕಾಂಗ್ರೆಸ್ ಪಕ್ಷಕ್ಕೆ ಕೇಳಿದ ಮಾರನೇ ದಿನವೇ ಅಖಿಲೇಶ್ ಯಾದವ್ ಅವರು ತಮ್ಮ ತೀರ್ಮಾನವನ್ನು ಹೊರ ಹಾಕಿದ್ದಾರೆ.

ಮೈತ್ರಿಯು ದೆಹಲಿಯ (ರಾಷ್ಟ್ರೀಯ) ಮಟ್ಟದಲ್ಲಿ ಮಾತ್ರ ಎಂಬ ಮಾಹಿತಿ ಈಗ ನಮಗೆ ಸಿಕ್ಕಿದೆ. ಸರಿ, ಸಮಯ ಬಂದಾಗ ನಾವು ದೆಹಲಿಯ ಬಗ್ಗೆ ಮಾತನಾಡುತ್ತೇವೆ. ಮೈತ್ರಿಯು ರಾಜ್ಯ ಚುನಾವಣೆಗಳಿಗೆ ಅನ್ವಯಿಸುವುದಿಲ್ಲ ಎಂದು ಈಗ ನಾವು ಒಪ್ಪಿಕೊಂಡಿದ್ದೇವೆ. ನಾವು ಮಧ್ಯಪ್ರದೇಶ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲು ಆರಂಭಿಸುತ್ತೇವೆ ಎಂದು ಅಖಿಲೇಶ್ ಯಾದವ್ ಅವರು ಹೇಳಿದರು.

ರಾಜ್ಯ ಮಟ್ಟದಲ್ಲಿ ಇಂಡಿಯಾ ಕೂಟ ಮೈತ್ರಿ ಇಲ್ಲ ಎಂಬ ಮಾಹಿತಿ ದೊರೆತಿದೆ. ಹಾಗಾಗಿ ಮಧ್ಯ ಪ್ರದೇಶದಲ್ಲಿ ಎಸ್‌ಪಿ ಪ್ರತಿನಿಧಿಗಳು ಕಾಂಗ್ರೆಸ್ ಸೀಟ್ ಷೇರಿಂಗ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಸೀತಾಪುರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವುರ, 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು. ಮಧ್ಯ ಪ್ರದೇಶದ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷವು ಈಗಾಗಲೇ 31 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದೆ ಎಂದು ಮಧ್ಯ ಪ್ರದೇಶ ಚುನಾವಣಾ ಉಸ್ತುವಾರಿ ವ್ಯಾಸಜೀ ಗೋಂದ್ ಅವರು, ಎಲ್ಲ 230 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಗಢದಲ್ಲಿ ಆಪ್ ಸ್ಪರ್ಧೆ! ಇಂಡಿಯಾ ಕೂಟದಲ್ಲಿ ಬಿರುಕು!

ರಾಷ್ಟ್ರೀಯ ಪಕ್ಷವಾಗಲು ಹವಣಿಸುತ್ತಿರುವ ಸಮಾಜವಾದಿ ಪಕ್ಷವು ಉತ್ತರ ಪ್ರದೇಶದ ಆಚೆಗೂ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡುತ್ತಿದೆ. 1992ರಲ್ಲಿ ಪಾರ್ಟಿ ಆರಂಭವಾದಾಗಿನಿಂದಲೂ ಸಮಾಜವಾದಿ ಪಕ್ಷವು ಪ್ರಾದೇಶಿಕ ಪಕ್ಷದ ಮಾನ್ಯತೆಯಲ್ಲೇ ಇದೆ. ಉತ್ತರ ಪ್ರದೇಶದ ಆಚೆ ಅಂದರೆ ಮಧ್ಯ ಪ್ರದೇಶದಲ್ಲಿ 2003ರಲ್ಲಿ ಭಾರೀ ಸಕ್ಸೆಸ್ ದೊರೆತಿತ್ತು. ಆಗ ಎಸ್‌ಪಿ ಮಧ್ಯ ಪ್ರದೇಶದ 161 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 2018ರಲ್ಲಿ 52 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಸ್‌ಪಿ, ಒಂದು ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಆದರೆ, ಗೆದ್ದ ಎಸ್‌ಪಿ ಅಭ್ಯರ್ಥಿ ಬಳಿಕ ಭಾರತೀಯ ಜನತಾ ಪಾರ್ಟಿಗೆ ಪಕ್ಷಾಂತರ ಮಾಡಿದ್ದರು.

ಮಧ್ಯ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೂಡ 12 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷವು ಯೋಜನೆ ರೂಪಿಸಿತ್ತು. ಆದರೆ, ಉತ್ತರ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ ಅವರು, ಮಧ್ಯ ಪ್ರದೇಶದಲ್ಲಿ ಅಸ್ತಿತ್ವ ಹೊಂದಿರದ ಎಸ್‍‌ಪಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಕೇಳಿಕೊಂಡಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version