ಲಕ್ನೋ: ಮುಂಬರುವ ಲೋಕಸಭೆ ಚುನಾವಣೆ(Lok Sabha Election 2024)ಗಾಗಿ ಉತ್ತರ ಪ್ರದೇಶದಲ್ಲಿ (Uttar Pradesh) ಸೀಟು ಹಂಚಿಕೆ (Seat Sharing) ಸಂಬಂಧ ಉದ್ಭವಿಸಿದ್ದ ಬಿಕ್ಕಟ್ಟು ಶಮನಗೊಂಡಿದೆ ಎಂದು ಇಂಡಿಯಾ ಕೂಟದ (INDIA Bloc) ಪ್ರಮುಖ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ (Congress Party) ಹಾಗೂ ಸಮಾಜವಾದಿ ಪಾರ್ಟಿ (Samajwadi Party) ಹೇಳಿವೆ. ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ 63 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಹಾಗೂ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲಿದ್ದು, ಜಂಟಿಯಾಗಿ ಚುನಾವಣೆಯನ್ನು ಎದುರಿಸಲಿವೆ.
ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಸೀಟು ಹಂಚಿಕೆ ಗೊಂದಲ ಬಗೆಹರಿದಿದೆ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಚೌಧರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಅವರು ಮಾಹಿತಿ ನೀಡಿದರು.
BREAKING-
— Rohini Anand (@mrs_roh08) February 21, 2024
The alliance between the Congress party & SP has been finalized.
Congress party to fight on 17 seats & remaining 63 seats will be shared between SP & other small parties.
INDIA all set to sweep Uttar Pradesh with 60+ seats 🔥pic.twitter.com/XVxTx0eU0Z
ಕಾಂಗ್ರೆಸ್ ತನ್ನ ಭದ್ರಕೋಟೆಗಳಾದ ರಾಯ್ ಬರೇಲಿ ಮತ್ತು ಅಮೇಠಿ ಜೊತೆಗೆ ಕಾನ್ಪುರ ನಗರ, ಫತೇಪುರ್ ಸಿಕ್ರಿ, ಬಸ್ಗಾಂವ್, ಸಹರಾನ್‌ಪುರ್, ಪ್ರಯಾಗ್‌ರಾಜ್, ಮಹಾರಾಜ್‌ಗಂಜ್, ಅಮ್ರೋಹಾ, ಝಾನ್ಸಿ, ಬುಲಂದಶಹರ್, ಘಾಜಿಯಾಬಾದ್, ಮಥುರಾ, ಶಾಜಿಯಾಬಾದ್ , ಬಾರಾಬಂಕಿ ಮತ್ತು ಡಿಯೋರಿಯಾ ಕೇತ್ರಗಳಲ್ಲಿ ಸ್ಪರ್ಧಿಸಲಿದೆ.
ಸಮಾಜವಾದಿ ಪಕ್ಷವು ತನ್ನ ಪಾಲಿಗೆ ದೊರೆತಿರುವ ಕ್ಷೇತ್ರಗಳಲ್ಲೇ ಪ್ರಾದೇಶಿಕ ಪಕ್ಷಗಳಿಗೆ ಸ್ಥಾನಗಳನ್ನು ಹಂಚಿಕೆ ಮಾಡಲಿದೆ. ಕಳೆದ ತಿಂಗಳು ಎಸ್‌ಪಿಯೊಂದಿಗೆ ಏಳು ಸ್ಥಾನಗಳ ಒಪ್ಪಂದಕ್ಕೆ ಒಪ್ಪಿಗೆ ನೀಡಿದ ಹೊರತಾಗಿಯೂ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.
ಮೈತ್ರಿಯು ದೇಶಕ್ಕೆ ಒಂದು ಸಂದೇಶವಾಗಿದೆ. ಯುಪಿಯಲ್ಲಿ 80 ಲೋಕಸಭಾ ಸ್ಥಾನಗಳಿವೆ. ಉತ್ತರ ಪ್ರದೇಶದ ಸಹಾಯದಿಂದಲೇ ಭಾರತೀಯ ಜನತಾ ಪಾರ್ಟಿಯು ಕೇಂದ್ರದಲ್ಲಿಅಧಿಕಾರಕ್ಕೆ ಬಂದಿದೆ. ಅದೇ ಉತ್ತರ ಪ್ರದೇಶದಿಂದಾಗಿಯೇ ಬಿಜೆಪಿ 2024 ರಲ್ಲಿ ಅಧಿಕಾರವನ್ನು ಕಳೆದುಕೊಳ್ಳುತ್ತದೆ ಎಂದು ಅಖಿಲೇಶ್ ಯಾದವ್ ಅವರು ಹೇಳಿದ್ದಾರೆ.
ದೇಶದಲ್ಲಿ ಪರಿಸ್ಥಿತಿ ತುಂಬಾ ವಿಷಮವಾಗಿದೆ. ರೈತರು ಮತ್ತು ಯುವಕರು ಬೀದಿಗಿಳಿದಿದ್ದಾರೆ. ದೇಶವನ್ನು ಬಿಜೆಪಿಯಿಂದ ರಕ್ಷಣೆ ಮಾಡುವುದೇ ಇಂಡಿಯಾ ಕೂಟದ ಕನಸಾಗಿದೆ ಎಂದು ಎಸ್‌ಪಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಚೌಧರಿ ಹೇಳಿದರು.
ಅಮೇಠಿ ಮತ್ತು ರಾಯ್ಬರೇಲಿ ಸೇರಿದಂತೆ ಕಾಂಗ್ರೆಸ್ ತನ್ನ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಇನ್ನೂ ನಿರ್ಧರಿಸಿಲ್ಲ ಎಂದು ಅವಿನಾಶ್ ಪಾಂಡೆ ಅವರು ಸುದ್ದಿಗಾರರಿಗೆ ತಿಳಿಸಿದರು. ಗಾಂಧಿ ಕುಟುಂಬವು ಈ ಎರಡು ಕ್ಷೇತ್ರಗಳನ್ನು ತಮ್ಮ ಎರಡನೇ ಮನೆ ಎಂದು ಪರಿಗಣಿಸುತ್ತವೆ. ಈ ಕ್ಷೇತ್ರಗಳ ಸಂಬಂಧ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Lok Sabha Pre Poll Survey: ಬಿಹಾರದಲ್ಲಿ ಎನ್‌ಡಿಎಗೆ 32, ಇಂಡಿಯಾ ಕೂಟಕ್ಕೆ 8 ಸ್ಥಾನ ಎಂದ ಸಮೀಕ್ಷೆ