Site icon Vistara News

Sanatana Dharma: ಸನಾತನ ಧರ್ಮದ ವಿರುದ್ಧ ಹೋರಾಡಲು ಇಂಡಿಯಾ ಕೂಟ ರಚನೆ! ಡಿಎಂಕೆ ಸಚಿವ ಹೇಳಿಕೆ

K Ponnmudy

India bloc formed to fight against sanatana Dharma

ನವದೆಹಲಿ: ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ (Tamil Nadu CM M K Stalin) ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಸನಾತನ ಧರ್ಮವನ್ನು ಅವಹೇಳನ ಮಾಡಿದ ಪ್ರಕರಣವು ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಸನಾತನ ಧರ್ಮವನ್ನು ಡೆಂಗೆ, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ ವಿರುದ್ದ ಹಲವು ಪ್ರಕರಣಗಳ ದಾಖಲಾಗಿವೆ. ಉದಯನಿಧಿ ಮಾತನ್ನು ಕೇಂದ್ರದ ಮಾಜಿ ಸಚಿವ ಎ ರಾಜಾ ( A Raja) ಅವರ ಕೂಡ ಬೆಂಬಲಿಸಿದ್ದರು. ಇನ್ನೂ ಅನೇಕರು ಬೆಂಬಲಿಸಿ ಮಾತನಾಡಿದ್ದರು. ಇದೀಗ, ಡಿಎಂಕೆ ಸರ್ಕಾರದ ಮತ್ತೊಬ್ಬ ಸಚಿವರು ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳುನಾಡು ಉನ್ನತ ಸಚಿವ ಕೆ ಪೊನ್ಮುಡಿ (Tamil Nadu Minister K Ponmudy) ಅವರು, ಇಂಡಿಯಾ ಕೂಟ(ಪ್ರತಿಪಕ್ಷಗಳ ಮೈತ್ರಿ ಕೂಟ INIDA Bloc)ವನ್ನು ಸನಾತನ ಧರ್ಮದ ವಿರುದ್ಧ ಹೋರಾಡಲು ರಚಿಸಲಾಗಿದೆ ಎಂದು ಹೇಳುವ ಮೂಲಕ ವಿವಾದಕ್ಕೆ ಹೊಸ ಆಯಾಮ ನೀಡಿದ್ದಾರೆ. ಅವರು ಈ ರೀತಿ ಆಡಿರುವ ಮಾತುಗಳ ವಿಡಿಯೋ ವೈರಲ್ ಆಗಿದೆ.

ಇಂಡಿಯಾ ಮೈತ್ರಿ ಕೂಟವು ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು ರಚನೆಯಾಗಿದೆ, ನಮ್ಮ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸಂತಾನ ಧರ್ಮದ ವಿರುದ್ಧದ ಹೋರಾಟದಲ್ಲಿ ಮೈತ್ರಿಯಲ್ಲಿರುವ 26 ಪಕ್ಷಗಳು ಒಗ್ಗೂಡಿವೆ. ಅದಕ್ಕಾಗಿ ರಾಜಕೀಯ ಶಕ್ತಿ ಬೇಕು ಎಂದು ತಮಿಳುನಾಡು ಉನ್ನತ ಸಚಿವ ಕೆ ಪೊನ್ಮುಡಿ ಅವರು ಕಾರ್ಯಕ್ರಮವೊಂದರಲ್ಲಿ ಹೇಳುತ್ತಿರುವ ವಿಡಿಯೋ ಕ್ಲಿಪ್ ಫುಲ್ ವೈರಲ್ ಆಗಿದೆ.

ಇದಕ್ಕೂ ಮೊದಲು ಕೇಂದ್ರ ಮಾಜಿ ಸಚಿವರೂ ಆಗಿರು ಡಿಎಂಕೆ ಪ್ರಮುಖ ಎ ರಾಜಾ ಅವರು, ಸನಾತನ ಧರ್ಮವನ್ನು ಏಡ್ಸ್ ಹಾಗೂ ಕುಷ್ಠ ರೋಗಕ್ಕೆ ಹೋಲಿಸಿದ್ದರು. ಅಲ್ಲದೇ, ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ಆಡಿರುವ ಮಾತುಗಳಿಗೆ ತಮ್ಮ ಬೆಂಬಲವಿದೆ ಎಂದು ಹೇಳಿಕೊಂಡಿದ್ದರು.

ಸನಾತನ ಧರ್ಮ ಕುರಿತು ಉದಯನಿಧಿ ಆಡಿದ ಮಾತುಗಳೇನು?

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪುತ್ರ, ಸಚಿವರೂ ಆದ ಉದಯನಿಧಿ ಸ್ಟಾಲಿನ್‌ ಅವರು ಸನಾತನ ಧರ್ಮದ (Sanatan Dharma) ಕುರಿತು ನೀಡಿದ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿತ್ತು. “ಸನಾತನ ಧರ್ಮವು ಮಲೇರಿಯಾ, ಕೊರೊನಾ ಹಾಗೂ ಡೆಂಗ್ಯೂ ಇದ್ದಂತೆ” ಎಂದು ಉದಯನಿಧಿ (Udhayanidhi Stalin) ಸ್ಟಾಲಿನ್‌ ಹೇಳಿದ್ದು, ಅವರ ಹೇಳಿಕೆಗೆ ತೀವ್ರ ವಿರೋಧ, ಟೀಕೆ ವ್ಯಕ್ತವಾಗಿತ್ತು.

ಈ ಸುದ್ದಿಯನ್ನೂ ಓದಿ: Power Point with HPK : ಉದಯನಿಧಿ ಹುಚ್ಚ, ಅಯೋಗ್ಯ; ಸನಾತನದ ಬಗ್ಗೆ ಮಾತಾಡೋಕೆ ಅವನು ಯಾವನು?: ಈಶ್ವರಪ್ಪ

ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಉದಯನಿಧಿ ಸ್ಟಾಲಿನ್‌ ಮಾತನಾಡಿದರು. “ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version