Site icon Vistara News

India China Meeting: ಲಡಾಕ್‌ ಸಂಘರ್ಷದ ಬಳಿಕ ಇದೇ ಮೊದಲಿಗೆ ಭಾರತ-ಚೀನಾ ಮುಖಾಮುಖಿ ಸಭೆ, ತೀರ್ಮಾನ ಏನು?

India, China's First In Person Meet In Beijing After Ladakh Standoff

India China

ಬೀಜಿಂಗ್‌: ಲಡಾಕ್‌ ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಬಳಿ ಚೀನಾ ೨೦೨೦ರ ಮೇ ೫ರಿಂದ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾರತ ಹಾಗೂ ಚೀನಾ ಮುಖಾಮುಖಿಯಾಗಿ ಸಭೆ ನಡೆಸಿವೆ. ಚೀನಾದ ಬೀಜಿಂಗ್‌ನಲ್ಲಿ ೨೬ನೇ ಸುತ್ತಿನ ಮಾತುಕತೆ (India China Meeting) ನಡೆದಿದ್ದು, ಸಕಾರಾತ್ಮಕ ಬೆಳವಣಿಗೆ ಉಂಟಾಗಿದೆ ಎಂದು ಚೀನಾ ಜಂಟಿ ಹೇಳಿಕೆ ಹೊರಡಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪೂರ್ವ ಏಷ್ಯಾ ಜಂಟಿ ಕಾರ್ಯದರ್ಶಿ ಶಿಲ್ಪಕ್‌ ಅಂಬುಳೆ ನೇತೃತ್ವದ ನಿಯೋಗವು ಚೀನಾದ ಬೀಜಿಂಗ್‌ನಲ್ಲಿ ಕಮ್ಯುನಿಸ್ಟ್‌ ರಾಷ್ಟ್ರದ ಹಾಂಗ್‌ ಲಿಯಾಂಗ್‌ ನೇತೃತ್ವದ ನಿಯೋಗದ ಜತೆ ಮಾತುಕತೆ ನಡೆಸಿದೆ. ಗಡಿಯಲ್ಲಿ ಶಾಂತಿ ಕಾಪಾಡುವುದು, ಗಡಿಗಳಲ್ಲಿ ಹೆಚ್ಚುವರಿಯಾಗಿ ನಿಯೋಜಿಸಿರುವ ಎಲ್ಲ ಸೈನಿಕರನ್ನು ಹಿಂಪಡೆಯುವ ಕುರಿತು ಎರಡೂ ರಾಷ್ಟ್ರಗಳು ಸಮ್ಮತಿ ಸೂಚಿಸಿವೆ. ಶೀಘ್ರದಲ್ಲಿಯೇ ಮತ್ತೊಂದು ಸಭೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

೨೦೨೦ರ ಮೇ ೫ರಂದು ಚೀನಾ ಲಡಾಕ್‌ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸುವ ಮೂಲಕ ಉದ್ಧಟತನ ಆರಂಭಿಸಿದೆ. ಇದೇ ವರ್ಷದ ಜೂನ್‌ನಲ್ಲಿ ಗಲ್ವಾನ್‌ನಲ್ಲಿ ಉಭಯ ರಾಷ್ಟ್ರಗಳ ಸೈನಿಕರ ಮಧ್ಯೆ ಸಂಘರ್ಷ ನಡೆದಿತ್ತು. ಇದಾದ ಬಳಿಕ ಹಲವು ಸುತ್ತಿನ ಮಾತುಕತೆ ನಡೆಸಿದರೂ, ಚೀನಾ ಯಥಾಸ್ಥಿತಿ ಕಾಪಾಡುತ್ತಿಲ್ಲ. ಇದಕ್ಕಾಗಿ, ಭಾರತೀಯ ಸೇನೆಯೂ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿದೆ.

ಇದನ್ನೂ ಓದಿ: Spy Balloon: ಅಮೆರಿಕ ಮಾತ್ರವಲ್ಲ, ಭಾರತದ ಮೇಲೂ ಚೀನಾ ಬಲೂನ್ ಕಣ್ಗಾವಲು!

Exit mobile version