Site icon Vistara News

India Energy Week 2024 : ಗೋವಾದಲ್ಲಿ ಇಂಧನ ಸಪ್ತಾಹ; ಎಂಇಐಎಲ್ ಎನರ್ಜಿಗೆ ಬೇಷ್‌ ಎಂದ ಹರ್ದೀಪ್ ಸಿಂಗ್ ಪುರಿ

Minister Hardeep Singh Puri lauds MEILs performance during Goa Energy Week

ಬೆತುಲ್, ಗೋವಾ: ದೇಶದ ಮೂಲಭೂತ ಸೌಕರ್ಯ ಸಂಸ್ಥೆಯಾಗಿರುವ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಮತ್ತು ಅದರ ಅಂಗಸಂಸ್ಥೆಗಳಾದ ಡ್ರಿಲ್‌ಮೆಕ್‌ ಐಎನ್‌ಟಿ, ಡ್ರಿಲ್ಮೆಕ್ ಎಸ್‌.ಪಿ.ಎ, ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್, ಈವಿಟ್ರಾನ್ಸ್, ಮೇಘಾ ಗ್ಯಾಸ್ ಮತ್ತು ಐಕಾಮ್‌ ಸಂಸ್ಥೆಗಳು ಇಂಡಿಯಾ ಎನರ್ಜಿ ವೀಕ್ 2024ರಲ್ಲಿ (India Energy Week 2024) ಇಂಧನ ಕ್ಷೇತ್ರದಲ್ಲಿ ತಮ್ಮ ಪ್ರವರ್ತಕ ಉಪಕ್ರಮಗಳು ಮತ್ತು ಪ್ರಗತಿಯನ್ನು ಪ್ರದರ್ಶಿಸುವ ಮೂಲಕ ಹಿರಿಮೆಗೆ ಪಾತ್ರವಾಗಿದೆ.

ಎಂಇಐಎಲ್‌ನ ಅಂಗ ಸಂಸ್ಥೆಯಾದ ಡ್ರಿಲ್‌ಮೆಕ್ ಎಸ್‌ಪಿಎಯ ‌ʼಮೇಡ್ ಇನ್ ಇಂಡಿಯಾ -ಎಚ್‌ಎಚ್ 150 ಆಟೋಮೇಟೆಡ್ ಹೈಡ್ರಾಲಿಕ್ ವರ್ಕ್ ಓವರ್‌ರಿಗ್ʼ ಪ್ರದರ್ಶನವು ಪ್ರಮುಖ ಆಕರ್ಷಣೆಯಾಗಿತ್ತು. ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಎಂಇಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಕೃಷ್ಣ ರೆಡ್ಡಿ ಅವರೊಂದಿಗೆ ಎಚ್ಎಚ್ 150 ಸ್ವಯಂಚಾಲಿತ ಹೈಡ್ರಾಲಿಕ್ ವರ್ಕ್ಓವರ್ ರಿಗ್ ಅನ್ನು ವೀಕ್ಷಿಸಿದ ಸಚಿವರು, ಸರ್ಕಾರದ ‘ಮೇಕ್ ಇನ್ ಇಂಡಿಯಾ’ ‘ಆತ್ಮನಿರ್ಭರ ಭಾರತ್’ ದೃಷ್ಟಿಕೋನದೊಂದಿಗಿನ ಎಂಇಐಎಲ್ ಮತ್ತು ಡ್ರಿಲ್‌ ಮೆಕ್ ಎಸ್‌.ಪಿ.ಎ ಶ್ರೇಷ್ಠತೆಯನ್ನು ಶ್ಲಾಘಿಸಿದರು.

Minister Hardeep Singh Puri lauds MEILs performance during Goa Energy Week

ಇದೇ ವೇಳೆ ಮಾತನಾಡಿದ ಎಂ.ಇ.ಐ.ಎಲ್‌ ವ್ಯವಸ್ಥಾಪಕ ನಿರ್ದೇಶಕ ಪಿ.ವಿ. ಕೃಷ್ಣಾ ರೆಡ್ಡಿ, ಓಎನ್‌ಜಿಸಿಗೆ ಎಂ.ಇ.ಐ.ಎಲ್‌ ಶೇ.55ರಷ್ಟು ಸ್ವದೇಶಿ ನಿರ್ಮಿತ ಸ್ವಯಂ ಚಾಲಿತ ರಿಗ್‌ಗಳನ್ನು ಒದಗಿಸುತ್ತಿದೆ. ಇಂಧನ ಕ್ಷೇತ್ರದಲ್ಲಿ ಆತ್ಮ ನಿರ್ಭರ್‌ ಭಾರತ್ ಮತ್ತು ಇಂಧನ ಭದ್ರತೆಯ ಗುರಿ ಸಾಧಿಸುವ ನಿಟ್ಟಿನಲ್ಲಿ ಎಂ.ಇ.ಐ.ಎಲ್‌ ದೇಶಿಯ ನಿರ್ಮಾಣಕ್ಕೆ ಆದ್ಯತೆ ನೀಡಲಿದೆ. ದೇಶೀಯ ತೈಲ ಮತ್ತು ಅನಿಲ ನಿಕ್ಷೇಪ ಪತ್ತೆಗೆ ವಿಶ್ವ ದರ್ಜೆಯ ಯಂತ್ರೋಪಕರಣಗಳನ್ನು ಒದಗಿಸಲಿದೆ ಎಂದು ತಿಳಿಸಿದರು.

ಭಾರತದ ಇಂಧನ ಕ್ಷೇತ್ರದಲ್ಲಿನ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿರುವ ಮತ್ತು ಇಂಧನ ಭದ್ರತೆ, ದೇಶದ ಸ್ವಸಾಮರ್ಥ್ಯ ಹೆಚ್ಚಿಸಲಿರುವ ವಿದ್ಯುತ್‌ ಜತೆಗೆ ನೈಸರ್ಗಿಕ ಅನಿಲ ಸರಬರಾಜು ಸಂಸ್ಥೆಯಾಗಿರುವ ಮೆಘಾ ಗ್ಯಾಸ್‌, ಓಲೆಕ್ಟ್ರಾ ಈವೇ ಟ್ರಾನ್ಸ್‌, ಐಕಾಮ್‌ಗಳು ತಮ್ಮ ಕಾರ್ಯ ಶ್ರೇಷ್ಠತೆಯನ್ನು ಪ್ರದರ್ಶನದಲ್ಲಿ ಪ್ರಸ್ತುತ ಪಡಿಸಿದವು.

ಎಂಇಐಎಲ್ ಭಾರತದ ಅತಿದೊಡ್ಡ ಖಾಸಗಿ ಮೂಲಸೌಕರ್ಯ ಕಂಪನಿಯಾಗಿದ್ದು, ಭಾರತದ ಬೆಳವಣಿಗೆಗೆ ನಿರ್ಣಾಯಕ ಕ್ಷೇತ್ರಗಳಲ್ಲಿ ತನ್ನ ಇರುವಿಕೆಯನ್ನು ಹೊಂದಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಬದ್ಧತೆಯೊಂದಿಗೆ ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನದಡಿ ಗಮನಾರ್ಹ ಕೊಡುಗೆ ನೀಡಿರುವ ಸಂಸ್ಥೆಯಾಗಿದೆ. ಎಂ.ಇ.ಐ.ಎಲ್ ನವೀಕರಿಸಬಹುದಾದ ಇಂಧನ, ವಿದ್ಯುತ್ ಚಲನಶೀಲತೆ, ಸಿಜಿಡಿ, ಹೈಡ್ರೋಕಾರ್ಬನ್‌ಗಳು, ರಕ್ಷಣೆ, ಸಾರಿಗೆ, ರೈಲ್ವೆ, ಉತ್ಪಾದನೆ, ಮೂಲಸೌಕರ್ಯ, ನೀರಿನ ನಿರ್ವಹಣೆ ಮತ್ತು ಇತರ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದೆ.

ಎಂಇಐಎಲ್‌ನ ಅಂಗ ಸಂಸ್ಥೆಗಳಾದ ಒಲೆಕ್ಟ್ರಾ ಗ್ರೀನ್‌ ಟೆಕ್‌ ಲಿಮಿಟೆಡ್, ಬಿಎಸ್ಇ ಮತ್ತು ಎನ್ಎಸ್ಇ ಲಿಸ್ಟೆಡ್ ಕಂಪನಿ, ಐಕಾಮ್‌ ಮತ್ತು ಡ್ರಿಲ್‌ ಮೆಕ್‌, ಎಲೆಕ್ಟ್ರಿಕ್ ಬಸ್ಸುಗಳು ಮತ್ತು ಟ್ರಕ್‌ಗಳು, ನವೀಕರಿಸಬಹುದಾದ ಇಂಧನ, ಸುಧಾರಿತ ತೈಲ ರಿ‌ಗ್‌ಗಳು, ರಕ್ಷಣೆ, ಟೆಲಿಕಾಂ ಮತ್ತು ಇತರ ಮೂಲಸೌಕರ್ಯಗಳ ಮೂಲಕ ‘ಮೇಕ್ ಇನ್ ಇಂಡಿಯಾ’ ದಡಿ ಮುನ್ನಡೆದಿದೆ.

ಮೇಘಾ ಗ್ಯಾಸ್ ಭಾರತದಾದ್ಯಂತ ಪ್ರಮುಖ ಸಿಎನ್ ಜಿ ಮತ್ತು ಪಿಎನ್‌ಜಿ ಮೂಲಸೌಕರ್ಯಗಳನ್ನು ನಿರ್ಮಿಸುತ್ತದೆ. ಈವಿ ಟ್ರಾನ್ಸ್ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಫ್ಲೀಟ್ ಆಪರೇಟರ್ ಆಗಿದೆ. ಎಂಇಐಎಲ್ ನ ವೈವಿಧ್ಯಮಯ ಕಾರ್ಯಶ್ರೇಷ್ಠತೆ 20ಕ್ಕೂ ಅಧಿಕ ದೇಶಗಳಲ್ಲಿ ವ್ಯಾಪಿಸಿವೆ, ಇದು ಸಂಸ್ಥೆಯ ಜಾಗತಿಕ ಪ್ರಭಾವವನ್ನು ಪ್ರದರ್ಶಿಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version