Site icon Vistara News

Military Hardware Export: ಆತ್ಮನಿರ್ಭರಕ್ಕೆ ಬಲ, 13 ಸಾವಿರ ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್‌ವೇರ್‌ ರಫ್ತು

Military Hardware Export

Military Hardware Export

ನವದೆಹಲಿ: ಭಾರತದಲ್ಲಿಯೇ ರಕ್ಷಣಾ ಉಪಕರಣಗಳು, ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸುವ ಮೂಲಕ ರಕ್ಷಣಾ ಕ್ಷೇತ್ರದಲ್ಲೂ ಭಾರತ ಆತ್ಮನಿರ್ಭರತೆ ಸಾಧಿಸಲು ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತವು 13,339 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್‌ವೇರ್‌ಗಳನ್ನು (Military Hardware Export) ವಿದೇಶಕ್ಕೆ ರಫ್ತು ಮಾಡಿದೆ.

ಮಿಲಿಟರಿ ಹಾರ್ಡ್‌ವೇರ್‌ಗಳ ರಫ್ತು ಕುರಿತು ಕೇಳಿದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ರಕ್ಷಣಾ ಖಾತೆ ಸಹಾಯಕ ಸಚಿವ ಅಜಯ್‌ ಭಟ್‌ ಮಾಹಿತಿ ನೀಡಿದರು. “ದೇಶದಲ್ಲಿಯೇ ಉತ್ಪಾದನೆಯಾಗುವ ಮಿಲಿಟರಿ ಹಾರ್ಡ್‌ವೇರ್‌ಗಳ ರಫ್ತು ಇತ್ತೀಚಿಗೆ ಹೆಚ್ಚಾಗಿದೆ. 2017-18ನೇ ಸಾಲಿನಲ್ಲಿ 4,682 ಕೋಟಿ ರೂ. ಮಿಲಿಟರಿ ಹಾರ್ಡ್‌ವೇರ್‌ಗಳ ರಫ್ತು ಮಾಡಲಾಗಿತ್ತು. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಚ್‌ 11ರ ಅವಧಿಗೆ ಇದು 13,339 ಕೋಟಿ ರೂ.ಗೆ ಏರಿಕೆಯಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Aero india 2023 : ರಕ್ಷಣಾ ಇಲಾಖೆಯಿಂದ 32 ಕಂಪನಿಗಳ ಜತೆ ಒಪ್ಪಂದ

“2021-22ನೇ ಹಣಕಾಸು ವರ್ಷದಲ್ಲಿ ರಫ್ತು ಮೌಲ್ಯ 12,815 ಕೋಟಿ ರೂ. ಇತ್ತು. ರಫ್ತಿನ ಪ್ರಮಾಣ 2020-21ನೇ ಸಾಲಿನಲ್ಲಿ 8,435 ಕೋಟಿ ರೂ. ಇತ್ತು. ವರ್ಷದಿಂದ ವರ್ಷಕ್ಕೆ ರಫ್ತಿನ ಪ್ರಮಾಣವು ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರವು ಆತ್ಮನಿರ್ಭರತೆ ಸಾಧಿಸುವ ದಿಸೆಯಲ್ಲಿ ಹೆಚ್ಚಿನ ಉತ್ತೇಜ ನೀಡುತ್ತಿರುವುದೇ ಇದಕ್ಕೆ ಕಾರಣ” ಎಂದು ಮಾಹಿತಿ ನೀಡಿದರು.

Exit mobile version