Site icon Vistara News

BJP Executive Meeting | ಸುವರ್ಣಯುಗವನ್ನು ಬರಮಾಡಿಕೊಳ್ಳುತ್ತಿದೆ ಭಾರತ; ಪ್ರಧಾನಿ ಮೋದಿ ಹರುಷ

modi

ನವ ದೆಹಲಿ : ಭಾರತ ಸುವರ್ಣ ಯುಗದ ಹೊಸ್ತಿಲಲ್ಲಿದ್ದು, ನಾವೆಲ್ಲರೂ ಒಳ್ಳೆಯ ದಿನಗಳ ಸ್ವಾಗತಕ್ಕೆ ಸಜ್ಜಾಗಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ನಡೆದ (BJP Executive Meeting) ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಅವರು ಸಭೆಯಲ್ಲಿ ನಡೆದ ಚರ್ಚೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಾ ಪ್ರಧಾನಿ ಮೋದಿ ನೀಡಿದ ಭರವಸೆಗಳನ್ನು ವಿವರಿಸಿದರು.

ಭಾರತವು ಸಮೃದ್ಧಿಯ ದಿನಗಳನ್ನು ನೋಡುವ ಕಾಲ ಬಂದಿದೆ. ನಾವೆಲ್ಲರೂ ಅಭಿವೃದ್ದಿಯ ರಥವನ್ನು ಎಳೆಯಲು ಕಟಿಬದ್ಧರಾಗಬೇಕಾಗಿದೆ. ಮುಂದಿನ ಕೆಲವು ಅವಧಿಯಲ್ಲಿ ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಉಳಿಯುವುದಿಲ್ಲ. ಒಂದು ಸಾಮಾಜಿಕ ಅಭಿಯಾನದಂತೆ ಮುಂದುವರಿಯಲಿದೆ. ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗಾಗಿ ಟೊಂಕ ಕಟ್ಟಿನಿಲ್ಲಲಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ ಎಂದು ಫಡ್ನವಿಸ್​ ಅವರು ತಿಳಿಸಿದರು.

ಯುವಜನಾಂಗ ಅದರಲ್ಲೂ 18ರಿಂದ 25 ವರ್ಷದವರಿಗೆ ಹಿಂದಿನ ಸರಕಾರಗಳು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಅರಿವಿಲ್ಲ. ಭ್ರಷ್ಟಾಚಾರವೆಂಬ ಪಿಡುಗಿನಲ್ಲಿ ದೇಶದ ನಾಗರಿಕರು ನರಳುವಂತೆ ಮಾಡಿರುವ ಇತಿಹಾಸ ಅವರಿಗೆ ಗೊತ್ತಿಲ್ಲ. ಹೀಗಾಗಿ ಆ ವಯೋಮಾನದವರಿಗೆ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ ಎಂದು ಫಡ್ನವಿಸ್​ ನುಡಿದರು.

ಇದನ್ನೂ ಓದಿ |BJP Executive Meeting | ಲೋಕಸಭೆ ಎಲೆಕ್ಷನ್‌ಗೆ 400 ದಿನಗಳಷ್ಟೇ ಉಳಿದಿರೋದು, ಮತದಾರರನ್ನು ತಲುಪಿ ಎಂದ ಪ್ರಧಾನಿ ಮೋದಿ

Exit mobile version