Site icon Vistara News

India Pakistan Exchange List | ಅಣ್ವಸ್ತ್ರ, ಕೈದಿಗಳ ಕುರಿತು ಪರಸ್ಪರ ಮಾಹಿತಿ ಹಂಚಿಕೊಂಡ ಭಾರತ-ಪಾಕಿಸ್ತಾನ

India Pakistan Exchange List

ನವದೆಹಲಿ: ಭಾರತ ಹಾಗೂ ಪಾಕಿಸ್ತಾನವು ಒಪ್ಪಂದದಂತೆ ಪರಸ್ಪರ ಅಣ್ವಸ್ತ್ರ ಘಟಕಗಳು, ಬಂಧಿತ ನಾಗರಿಕರು ಹಾಗೂ ಮೀನುಗಾರರ ಪಟ್ಟಿಯನ್ನು (India Pakistan Exchange List) ಹಂಚಿಕೊಂಡಿವೆ. “ಅಣ್ವಸ್ತ್ರ ಘಟಕಗಳು, ಅಣ್ವಸ್ತ್ರ ಸೇರಿ ಹಲವು ಮಾಹಿತಿಯುಳ್ಳ ಪಟ್ಟಿಯನ್ನು ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್‌ನಲ್ಲಿ ಹಂಚಿಕೊಳ್ಳಲಾಗಿದೆ” ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತಿಳಿಸಿದೆ. ಹಾಗೆಯೇ, ಭಾರತ ಕೂಡ ಮಾಹಿತಿ ಹಂಚಿಕೊಂಡಿರುವುದನ್ನು ತಿಳಿಸಿದೆ.

ಭಾರತ ನೀಡಿದ ಮಾಹಿತಿ ಪ್ರಕಾರ, ದೇಶದ ಜೈಲಿನಲ್ಲಿ ಪಾಕಿಸ್ತಾನದ 339 ನಾಗರಿಕರು ಹಾಗೂ ಮೀನುಗಾರರು ಇದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಪಾಕಿಸ್ತಾನವು ಭಾರತದ 51 ನಾಗರಿಕರು ಹಾಗೂ 654 ಮೀನುಗಾರರು ಜೈಲಿನಲ್ಲಿದ್ದಾರೆ ಎಂದು ತಿಳಿಸಿದೆ. ಆಕಸ್ಮಿಕವಾಗಿ ಗಡಿ ದಾಟಿದವರು, ಸಾಗರ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿದ ಮೀನುಗಾರರನ್ನು ಎರಡೂ ರಾಷ್ಟ್ರಗಳು ಬಂಧಿಸಿವೆ. ಅವರ ಪಟ್ಟಿಯನ್ನು ಪರಸ್ಪರ ಹಂಚಿಕೊಂಡಿವೆ.

ಕೈದಿಗಳನ್ನಾಗಿ ಮಾಡಿರುವ 51 ನಾಗರಿಕರು ಹಾಗೂ 654 ಮೀನುಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೂಡ ಭಾರತ ಒತ್ತಾಯಿಸಿದೆ. ಕಳೆದ ಮೂರು ವರ್ಷಗಳಿಂದ ಭಾರತ ಹಾಗೂ ಪಾಕಿಸ್ತಾನವು ಒಪ್ಪಂದ ಮಾಡಿಕೊಂಡಂತೆ ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತಿವೆ.

ಇದನ್ನೂ ಓದಿ | Pakistan Hindu | ಅಲ್ಪಸಂಖ್ಯಾತ ಹಿಂದುಗಳ ಸುರಕ್ಷತೆ ಕೈಗೊಳ್ಳಿ: ಪಾಕಿಸ್ತಾನಕ್ಕೆ ಭಾರತ ತಾಕೀತು

Exit mobile version