ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೂರದರ್ಶಿತ್ವ ನಾಯಕದಲ್ಲಿ (Leadership) ಭಾರತವು (India) ಕಳೆದ 9 ವರ್ಷದಲ್ಲಿ ಜಾಗತಿಕ ಪ್ರಮುಖ ರಾಷ್ಟ್ರವಾಗಿ ಪರಿವರ್ತಿತವಾಗಿದೆ (Global Leader) ಎಂದು ಬ್ರಿಟನ್‌ನ ಸಾಮಾನ್ಯ ಸಭೆ ಅಭಿಪ್ರಾಯಪಟ್ಟಿದೆ. ಅನೇಕ ಸಂಸದರು, ರಾಜಕೀಯ ನಾಯಕರು, ಭಾರತವು ಮೋದಿ ನಾಯಕತ್ವದಲ್ಲಿ ಎಲ್ಲ ವಲಯಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ (remarkable achievements) ಎಂದು ಹೇಳಿದರು. ಈ ಚರ್ಚೆಯ ವೇಳೆ, ಬ್ರಿಟಿನ್ ಸಂಸತ್ ಸದಸ್ಯರು, ಪ್ರಮುಖ ವ್ಯಾಪಾರಿ ಗಣ್ಯರು, ಶಿಕ್ಷಣ ತಜ್ಞರು, ಭಾರತೀಯ ಸಮುದಾಯದ ನಾಯಕರು ಹಾಗೂ ಚಂಡೀಗಢ ಉಪ ಕುಲಪತಿಯೂ ಆಗಿರುವ ಭಾರತೀಯ ಅಲ್ಪಸಂಖ್ಯಾತರ ಫೌಂಡೇಷನ್‌ನ ಸಂಚಾಲಕ ಸತ್ನಾಮ್ ಸಿಂಗ್ ಸಂಧು ಅವರೂ ಹಾಜರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 9 ವರ್ಷದಲ್ಲಿ ಭಾರತವು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಈ ಬೆಳವಣಿಗೆಯು ಭಾರತವನ್ನು ಜಾಗತಿಕವಾಗಿ ಪ್ರಮುಖ ರಾಷ್ಟ್ರವನ್ನಾಗಿ ಮಾಡಿದೆ ಎಂದು ಅಭಿಪ್ರಾಯಪಡಲಾಯಿತು.
ಡಿಸೆಂಬರ್ 14, ಗುರುವಾರ ಬ್ರಿಟನ್‌ನ ಲಂಡನ್‌ನಲ್ಲಿರುವ ಹೌಸ್ ಆಫ್ ಕಾಮನ್ಸ್‌ನಲ್ಲಿ ಭಾರತೀಯ ಅಲ್ಪಸಂಖ್ಯಾತರ ಪ್ರತಿಷ್ಠಾನ (ಐಎಂಎಫ್) ಆಯೋಜಿಸಿದ್ದ ಸದ್ಭಾವನಾ ಕಾರ್ಯಕ್ರಮ ‘ನಮಸ್ತೆ ಲಂಡನ್’ ಸಂದರ್ಭದಲ್ಲಿ ಪ್ರಮುಖ ನಾಯಕರು ಮಾತನಾಡಿ, ಭಾರತದ ಪ್ರಗತಿ ಹಾಗೂ ನರೇಂದ್ರ ಮೋದಿ ಅವರ ನಾಯಕತ್ವವನ್ನು ಹೊಗಳಿದರು.
ಈ ಸಂದರ್ಭದಲ್ಲಿ ಬ್ರಿಟನ್‌ನಲ್ಲಿರುವ ಭಾರತೀಯ ಸಮುದಾಯದ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಆರ್ಥಿಕ ಬೆಳವಣಿಗೆಯ ಲಾಂಛನವಾಗಿ, ಜಾಗತಿಕ ಪರಿಹಾರ ಒದಗಿಸುವವರಾಗಿ ಮತ್ತು ವಿಶ್ವ ವೇದಿಕೆಯಲ್ಲಿ ಪೂರ್ವಭಾವಿ ಶಾಂತಿ ತಯಾರಕರಾಗುವತ್ತ ಭಾರತವು ತನ್ನ ಕ್ರಿಯಾತ್ಮಕ ಪಥವನ್ನು ಮುಂದುವರೆಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ, ನಮಸ್ತೆ ಲಂಡನ್ ಕಾರ್ಯಕ್ರಮದಲ್ಲಿ, ಭಾರತದ ಪ್ರಗತಿ ಮತ್ತು ಅಭಿವೃದ್ಧಿಗೆ ತಮ್ಮ ಬೆಂಬಲವನ್ನು ಪ್ರತಿಜ್ಞೆ ಮಾಡುವ ‘ಲಂಡನ್ ರೆಸಲ್ಯೂಶನ್’ ನಿರ್ಣಯವನ್ನು ಅಂಗೀಕರಿಸಿದರು ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಪ್ರಧಾನಿ ಮೋದಿಯವರ ಕನಸಿನಲ್ಲಿ ಸಕ್ರಿಯವಾಗಿ ಕೊಡುಗೆ ನೀಡುವ ಭರವಸೆಯನ್ನು ನೀಡಿದರು.
ಈ ಸುದ್ದಿಯನ್ನೂ ಓದಿ: PM Modi : ಕಾಂಗ್ರೆಸ್ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ವಸೂಲಿ ಮಾಡುತ್ತೇವೆ; ಮೋದಿಯ ಹೊಸ ಟ್ವೀಟ್ನಲ್ಲೇನಿದೆ?