Site icon Vistara News

ಅಣ್ವಸ್ತ್ರ ಹೊತ್ತೊಯ್ಯೋ ಪೃಥ್ವಿ 2 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ, ಇಲ್ಲಿದೆ ಸಾಮರ್ಥ್ಯದ ವಿವರ

Prithvi-2

ಭುವನೇಶ್ವರ್‌ : ಒಡಿಶಾದ ಚಾಂದಿಪುರದಲ್ಲಿ ನಿನ್ನೆ (ಬುಧವಾರ) ಸಂಜೆ 7.30 ರ ಸುಮಾರಿಗೆ ಪೃಥ್ವಿ 2 ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಇದು 250 ಕಿಲೋ ಮೀಟರ್​ಗೂ ಹೆಚ್ಚು ಸ್ಟ್ರೈಕ್ ರೇಂಜ್ (ದೂರ ಹಾರುವ ಸಾಮರ್ಥ್ಯ) ಹೊಂದಿದ್ದು, 500 ರಿಂದ 1000 ಕೆಜಿ ತೂಕವಿರುವ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲಾದ್ದಾಗಿದೆ. ಒಂದು ವೇಳೆ ಶತ್ರುಗಳು ಅಟ್ಯಾಕ್​ ಮಾಡಿದರೂ ಸುಲಭವಾಗಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನು ಓದಿ | ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-4 ಕ್ಷಿಪಣಿ ಉಡಾವಣೆ

ಈ ಕ್ಷಿಪಣಿಯನ್ನು ಡಿಆರ್​ಡಿಒ ಅಭಿವೃದ್ದಿ ಪಡಿಸಿದ್ದು, ಈಗಾಗಲೇ ಸ್ಟ್ರಾಟೆಜಿಕ್ ಪೋರ್ಸನ್ ಕಮಾಂಡ್​ನ ಭಾಗವಾಗಿದೆ. ಈ ಮೊದಲು 2018ರ ಫೆಬ್ರವರಿ 21ರ ರಾತ್ರಿ ಪೃಥ್ವಿ 2 ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿತ್ತು. ಮತ್ತೆ 2019ರ ನವೆಂಬರ್​ನಲ್ಲಿ ಕ್ಷಿಪಣಿಯನ್ನು ಮತ್ತೊಮ್ಮೆ ಪರೀಕ್ಷಿಸಲಾಯಿತು.

Exit mobile version