ಭುವನೇಶ್ವರ: ಭಾರತದ ಕ್ಷಿಪಣಿ ವ್ಯವಸ್ಥೆಗೆ ಹೆಚ್ಚಿನ ಬಲವನ್ನು ತುಂಬುವ, ದೇಶದ ಸೇನೆಗೂ ಭಾರಿ ಪ್ರಮಾಣದಲ್ಲಿ ಸಹಕಾರಿಯಾಗುವ, ಯಾವುದೇ ತುರ್ತು ಸಂದರ್ಭದಲ್ಲಿ ಪ್ರತ್ಯುತ್ತರ ನೀಡುವಾಗ ನಿರ್ಣಾಯಕ ಪಾತ್ರ ನಿರ್ವಹಿಸುವ ಹೈ-ಸ್ಪೀಡ್ ಎಕ್ಸ್‌ಪೆಂಡೇಬಲ್ ಏರಿಯಲ್ ಟಾರ್ಗೆಟ್ (HEAT) ಆದ ‘ಅಭ್ಯಾಸ್’ ಪ್ರಯೋಗಾರ್ಥ ಪರೀಕ್ಷೆಯು (Abhyas Trial) ಯಶಸ್ವಿಯಾಗಿದೆ. ಒಡಿಶಾದ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ (ITR) ಗುರುವಾರ (ಜೂನ್ 27) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯು ಸಂಸ್ಥೆಯು (DRDO) ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.
ಅಭ್ಯಾಸ್ ಹೆಸರಿನ ಗುರಿಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದು, ಆರು ಗುರಿಗಳನ್ನು ಪರೀಕ್ಷೆ ಮಾಡಲಾಗಿದೆ. ಎಲ್ಲ ಪರೀಕ್ಷೆಗಳು ಕೂಡ ಯಶಸ್ವಿಯಾಗಿವೆ ಎಂಬುದಾಗಿ ಡಿಆರ್‌ಡಿಒ ತಿಳಿಸಿದೆ. ಅದರಲ್ಲೂ, ಕೇವಲ 30 ನಿಮಿಷಗಳಲ್ಲಿ ಸತತವಾಗಿ ಎರಡು ಗುರಿಗಳನ್ನು ಪರೀಕ್ಷೆ ಮಾಡಲಾಗಿದೆ. ಪ್ರಯೋಗದ ಸಮಯದಲ್ಲಿ ಬೂಸ್ಟರ್‌ನ ಸುರಕ್ಷಿತ ಬಿಡುಗಡೆ, ಲಾಂಚರ್ ಕ್ಲಿಯರೆನ್ಸ್ ಹಾಗೂ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇದೇ ಎಂಬುದನ್ನು ಡಿಆರ್‌ಡಿಒ ವಿಜ್ಞಾನಿಗಳು ಪರೀಕ್ಷೆ ವೇಳೆ ದೃಢಪಡಿಸಿಕೊಂಡರು.
High Speed Expendable Aerial Target ‘ABHYAS’ successfully completes developmental trials with improved booster configurationhttps://t.co/enMd5izREz pic.twitter.com/eWnsu3XOwT
— DRDO (@DRDO_India) June 27, 2024
ಕ್ಷಿಪಣಿಗಳಿಗೆ ಹೇಗೆ ಇವು ಸಹಕಾರಿ?
ಅಭ್ಯಾಸ್ ಗುರಿಗಳು ದೇಶದ ಕ್ಷಿಪಣಿ ವ್ಯವಸ್ಥೆಯನ್ನು ಬಲಪಡಿಸಲು, ಕ್ಷಿಪಣಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ. ಕ್ಷಿಪಣಿಗಳ ಪರೀಕ್ಷೆ ಹಾಗೂ ಅಭ್ಯಾಸಗಳ ವೇಳೆ ಗುರಿಗಳನ್ನು ಬಳಸಿ, ಅವುಗಳ ಸಮರ್ಥ ಕಾರ್ಯನಿರ್ವಹಣೆಯನ್ನು ಒರೆಗೆ ಹಚ್ಚುತ್ತವೆ. ಆಟೋ ಪೈಲಟ್ ಮೂಲಕ ಹಾರಾಡುವ, ಲ್ಯಾಪ್ ಆಧಾರಿತವಾಗಿ ಭೂಮಿಯಿಂದಲೇ ನಿಯಂತ್ರಣ ಮಾಡಬಹುದಾದ, ರೇಡಾರ್ ಗ್ರಹಿಕೆಗೆ ಸಿಗದಿರುವುದು ಸೇರಿ ಹಲವು ಅತ್ಯಾಧುನಿಕ ಸಾಮರ್ಥ್ಯವನ್ನು ಇವು ಹೊಂದಿವೆ.
ಡಿಆರ್‌ಡಿಒ ಯಶಸ್ವಿಯಾಗಿ ಪರೀಕ್ಷೆ ಮಾಡುತ್ತಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಭಿನಂದನೆ ಸಲ್ಲಿಸಿದರು. ಡಿಆರ್‌ಡಿಒ ವಿಜ್ಞಾನಿಗಳು, ಸಶಸ್ತ್ರ ಪಡೆಗಳ ಪ್ರಯತ್ನಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಭ್ಯಾಸ್ ಗುರಿಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನಲ್ಲಿರುವ ಡಿಆರ್‌ಡಿಒದ ಏರೋನಾಟಿಕಲ್ ಡೆವಲಪ್‌ಎಸ್ಟಾಬ್ಲಿಶ್‌ಮೆಂಟ್ ಇವುಗಳ ವಿನ್ಯಾಸ ಮಾಡಿದೆ. ಪ್ರೊಡಕ್ಷನ್ ಏಜೆನ್ಸೀಸ್-ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್, ಲಾರ್ಸೆನ್ & ಟರ್ಬೊ ಇವುಗಳನ್ನು ಅಭಿವೃದ್ಧಿಪಡಿಸಿವೆ.
ಇದನ್ನೂ ಓದಿ: SMART Missile: ನೌಕೆಗಳನ್ನು ಧ್ವಂಸ ಮಾಡುವ ಸ್ಮಾರ್ಟ್ ಕ್ಷಿಪಣಿ ಪರೀಕ್ಷೆ ಯಶಸ್ವಿ; ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ