Site icon Vistara News

DRDO Missile: ಖಂಡಾಂತರ ಕ್ಷಿಪಣಿ ನಿಗ್ರಹ ಮಿಸೈಲ್‌ ಪರೀಕ್ಷೆ ಯಶಸ್ವಿ, ಮತ್ತೊಂದು ಮೈಲುಗಲ್ಲು

India successfully tests sea-based ballistic missile interceptor, joins elite club

India successfully tests sea-based ballistic missile interceptor, joins elite club

ಭುವನೇಶ್ವರ: ರಕ್ಷಣಾ ಸಂಶೋಧಣೆ ಹಾಗೂ ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯು ಶನಿವಾರ ಮೈಲುಗಲ್ಲು ಸ್ಥಾಪಿಸಿದೆ. ಖಂಡಾಂತರ ಕ್ಷಿಪಣಿಗಳನ್ನು ನಿಗ್ರಹಿಸುವ ಸಾಮರ್ಥ್ಯದ, ಮೊದಲ ಸೀ ಬೇಸ್ಡ್‌ ಎಂಡೋ-ಅಟ್ಮೊಸ್ಫೆರಿಕ್‌ ಇಂಟರ್‌ಸೆಪ್ಟರ್‌ (Sea-based Endo-atmospheric Interceptor) ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ (DRDO Missile) ಕೈಗೊಂಡಿದೆ. ಆ ಮೂಲಕ ನೌಕಾ ಖಂಡಾಂತರ ಕ್ಷಿಪಣಿ ರಕ್ಷಣೆ (Naval Ballistic Missile Defence-BMD) ವ್ಯವಸ್ಥೆ ಹೊಂದಿರುವ ದೇಶಗಳ ಸಾಲಿಗೆ ಭಾರತವೂ ಸೇರಿದೆ.

ಒಡಿಶಾದ ಬಂಗಾಳ ಕೊಲ್ಲಿಯಲ್ಲಿ ಪ್ರಯೋಗಾರ್ಥವಾಗಿ ಖಂಡಾಂತರ ನಿಗ್ರಹ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇದು ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಅದರಲ್ಲೂ, ಸಾಗರ ಪ್ರದೇಶದಲ್ಲಿ ವೈರಿ ರಾಷ್ಟ್ರಗಳ ಖಂಡಾಂತರ ಕ್ಷಿಪಣಿಗಳನ್ನು ನಿಗ್ರಹಿಸುವುದು ಸೇರಿ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ವೈರಿಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಹೆಚ್ಚಾಗಿದೆ.

ಇದನ್ನೂ ಓದಿ: ISRO: ಇಸ್ರೋದಿಂದ ರಿಯೂಸೆಬಲ್ ಲಾಂಚ್ ವೆಹಿಕಲ್‌ನ ಅಟಾನಮಸ್‍ ಲ್ಯಾಂಡಿಂಗ್ ಪರೀಕ್ಷೆ ಸಕ್ಸೆಸ್!

ಡಿಆರ್‌ಡಿಒ ಯಶಸ್ಸು ಸಾಧಿಸುತ್ತಲೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅಭಿನಂದನೆ ಸಲ್ಲಿಸಿದರು. ಇನ್ನು ಡಿಆರ್‌ಡಿಒ ಮುಖ್ಯಸ್ಥ ಸಮೀರ್‌ ವಿ ಕಾಮತ್‌ ಕೂಡ ಸಂತಸ ವ್ಯಕ್ತಪಡಿಸಿದರು. “ಖಂಡಾಂತರ ಕ್ಷಿಪಣಿ ನಿಗ್ರಹ ಮಿಸೈಲ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ. ಇದು ಮತ್ತೊಂದು ಮೈಲುಗಲ್ಲು” ಎಂದು ಹೇಳಿದರು. ದೇಶೀಯವಾಗಿಯೇ ಕ್ಷಿಪಣಿಯ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿದ ಕಾರಣ ಕ್ಷಿಪಣಿಯ ಪರೀಕ್ಷೆಯು ಉತ್ಸಾಹ ಹೆಚ್ಚಿಸಿದೆ ಎಂದು ತಿಳಿದುಬಂದಿದೆ.

2 ಉಪಗ್ರಹ ಉಡಾವಣೆ ಮಾಡಿದ ಇಸ್ರೊ

ಡಿಆರ್‌ಡಿಒ ಮೈಲಿಗಲ್ಲು ಸಾಧಿಸಿದ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ವಾಣಿಜ್ಯಿಕ ಮಿಷನ್‌ ಅಡಿಯಲ್ಲಿ ಸಿಂಗಾಪುರದ ಎರಡು ಉಪಗ್ರಹಗಳನ್ನು ಕಕ್ಷೆ ಸೇರಿಸಿದೆ. ಪಿಎಸ್‌ಎಲ್‌ವಿ ಸಿ 55 ರಾಕೆಟ್‌ ಮೂಲಕ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಎರಡೂ ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆ ಸೇರಿದ್ದು, ಪಿಎಸ್‌ಎಲ್‌ವಿಯ 57ನೇ ಯಶಸ್ವಿ ಮಿಷನ್‌ ಇದಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಪಗ್ರಹಗಳು ನಭಕ್ಕೆ ಹಾರಿವೆ.

Exit mobile version