Site icon Vistara News

2025ರ ವೇಳೆಗೆ ಬಾಹ್ಯಾಕಾಶ, ಸಮುದ್ರದ ಆಳಕ್ಕೆ ಮಾನವ ಸಹಿತ ಮಿಷನ್;‌ ಕೇಂದ್ರ ಸಚಿವ ಮಹತ್ವದ ಘೋಷಣೆ

Dr Jitendra Singh

India To Send 1st Human in Space and Deep Sea by 2025: Union Minister Dr Jitendra Singh

ನವದೆಹಲಿ: 2023ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಚಂದ್ರಯಾನ-3 (Chandrayaan 3) ಮಿಷನ್‌ಅನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ ಬಳಿಕ ಭಾರತದ ಬಾಹ್ಯಾಕಾಶ ವಿಜ್ಞಾನಿಗಳ ಆತ್ಮವಿಶ್ವಾಸವು ನೂರ್ಮಡಿಯಾಗಿದೆ. ಕೇಂದ್ರ ಸರ್ಕಾರವೂ (Central Government) ಬಾಹ್ಯಾಕಾಶ ಯೋಜನೆಗಳಿಗೆ ಉತ್ತೇಜನ ನೀಡುತ್ತಿದೆ. ಇದರ ಬೆನ್ನಲ್ಲೇ, “2025ರ ವೇಳೆಗೆ ಭಾರತವು ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಹಾಗೂ ಸಮುದ್ರದ ಆಳಕ್ಕೆ ಮಾನವ ಸಹಿತ ಮಿಷನ್‌ ( Human Space Mission ) ಕಳುಹಿಸಲಾಗುತ್ತದೆ” ಎಂಬುದಾಗಿ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್‌ (Dr. Jitendra Singh) ತಿಳಿಸಿದ್ದಾರೆ.

ಭಾರತ್‌ 24 ನ್ಯೂಸ್‌ ನೆಟ್‌ವರ್ಕ್‌ ಜತೆಗಿನ ವಿಶೇಷ ಸಂವಾದದಲ್ಲಿ ಈ ಕುರಿತು ಅವರು ಮಾಹಿತಿ ನೀಡಿದ್ದಾರೆ. “ಬಾಹ್ಯಾಕಾಶ ಕ್ಷೇತ್ರವು ರಾಕೆಟ್‌ ಹಾಗೂ ಉಪಗ್ರಹಗಳ ಉಡಾವಣೆಗಷ್ಟೇ ಸೀಮಿತವಾಗಿದೆ. ಆದರೆ, ಬಾಹ್ಯಾಕಾಶ ಕ್ಷೇತ್ರದಿಂದ ಕೃಷಿ, ಮೂಲ ಸೌಕರ್ಯ, ಸಂವಹನ, ಆರೋಗ್ಯ ಸೇರಿ ಹಲವು ಕ್ಷೇತ್ರಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಭೂಮಿ ದಾಖಲೆ ನಿರ್ವಹಣೆ, ಹೊಸ ಭೌಗೋಳಿಕ ನೀತಿ, ಹೊಸ ಬಾಹ್ಯಾಕಾಶ ನೀತಿ, ಮಣ್ಣಿನ ಆರೋಗ್ಯ ಕಾರ್ಡ್‌, ಲ್ಯಾಂಡ್‌ ಮ್ಯಾಪಿಂಗ್‌ ಸೇರಿ ಮುಂತಾದ ವಲಯಗಳಿಗೆ ಅನುಕೂಲವಾಗಲಿದೆ” ಎಂಬುದಾಗಿ ಅವರು ತಿಳಿಸಿದರು.

“ಭಾರತದ ಬಾಹ್ಯಾಕಾಶ ಕ್ಷೇತ್ರವು ಗಣನೀಯವಾಗಿ ಏಳಿಗೆ ಹೊಂದುತ್ತಿದೆ. 2022ರಲ್ಲಿ ದೇಶದಲ್ಲಿ ಬಾಹ್ಯಾಕಾಶಕ್ಕೆ ಸಂಬಂದಿಸಿದ ಒಂದೇ ಒಂದು ನವೋದ್ಯಮ ಇತ್ತು. ಬಾಹ್ಯಾಕಾಶದಲ್ಲೂ ಖಾಸಗಿ ಸಹಭಾಗಿತ್ವಕ್ಕೆ 2024ರಲ್ಲಿ ಅವಕಾಶ ನೀಡಿದ ಬಳಿಕ ನಾವೀಗ 200 ನವೋದ್ಯಮಗಳನ್ನು ಹೊಂದಿದ್ದೇವೆ. ಇವುಗಳಲ್ಲೇ ಕೆಲವು ಸ್ಟಾರ್ಟಪ್‌ಗಳು ಜಾಗತಿಕ ಮಟ್ಟದ ಸಾಮರ್ಥ್ಯ ಹೊಂದಿವೆ. ಅಷ್ಟೇ ಅಲ್ಲ, ಖಾಸಗಿ ವಲಯದಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ 1 ಸಾವಿರ ಕೋಟಿ ರೂ. ಹೂಡಿಕೆ ಹರಿದು ಬಂದಿದೆ” ಎಂಬುದಾಗಿ ಡಾ.ಜಿತೇಂದ್ರ ಸಿಂಗ್‌ ತಿಳಿಸಿದರು.

ಈಶಾನ್ಯ ರಾಜ್ಯಗಳ ಅಭಿವೃದ್ಧಿ ಬಗ್ಗೆ ಮಾತನಾಡಿದ ಅವರು ಹತ್ತಾರು ವಿಷಯಗಳನ್ನು ಪ್ರಸ್ತಾಪಿಸಿದರು. “ಈಶಾನ್ಯ ರಾಜ್ಯಗಳಲ್ಲಿ ಕಳೆದ 10 ವರ್ಷಗಳಲ್ಲಿ ಭಾರಿ ಅಭಿವೃದ್ಧಿಯಾಗಿದೆ. ಎಲ್ಲ ಹವಾಮಾನದಲ್ಲೂ ಸುಗಮವಾಗಿ ಸಂಚಾರಕ್ಕೆ ಅನುಕೂಲವಾಗುವ ರಸ್ತೆಗಳ ಅಭಿವೃದ್ಧಿ, ಹೆದ್ದಾರಿಗಳ ಮೂಲಕ ಉತ್ತಮ ಸಂಪರ್ಕ, ನಗರ ಪ್ರದೇಶಗಳಿಂದ ದೂರವಿರುವ ಪಟ್ಟಣ, ಗ್ರಾಮಗಳಿಗೂ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಇದು ಈಶಾನ್ಯ ರಾಜ್ಯಗಳ ಮಟ್ಟಿಗೆ ಅತ್ಯುತ್ತಮ ಬೆಳವಣಿಗೆ” ಎಂದು ಹೇಳಿದರು.

ಇದನ್ನೂ ಓದಿ: Aditya L1: ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದ ಆದಿತ್ಯ ಎಲ್‌ 1; ಇಸ್ರೋಗೆ ಭಾರಿ ಮುನ್ನಡೆ

Exit mobile version