Site icon Vistara News

Ukraine Conflict | ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತ, ಆದರೆ ಏಕೆ?

Modi Putin

ನ್ಯೂಯಾರ್ಕ್:‌ ಭಾರತ ಹಾಗೂ ರಷ್ಯಾ ನಡುವಿನ ಸ್ನೇಹ ಇಂದು-ನಿನ್ನೆಯದ್ದಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ಹಾಗಾಗಿಯೇ, ಭಾರತ ಎಂತಹುದ್ದೇ ಸಂಕಷ್ಟಕ್ಕೆ ಸಿಲುಕಲಿ, ಭಾರತಕ್ಕೆ ಯಾವುದೇ ಅತ್ಯಾಧುನಿಕ ಶಸ್ತ್ರಾಸ್ತ್ರ ಬೇಕಾಗಲಿ, ಕೊರಳ ಗೆಳೆಯನಂತೆ ರಷ್ಯಾ ನಮ್ಮ ಬೆನ್ನಿಗೆ ನಿಲ್ಲುತ್ತದೆ. ಆದರೆ, ಇಂತಹ ಆತ್ಮೀಯ ರಷ್ಯಾ ವಿರುದ್ಧ ಭಾರತವು ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಮತ ಚಲಾಯಿಸಿದೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿ ಆರು ತಿಂಗಳಾಗಿರುವ ಹಾಗೂ ಉಕ್ರೇನ್‌ನ ೩೧ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅದಕ್ಕೆ ಬೆಂಬಲ ಸೂಚಿಸುವ ದಿಸೆಯಲ್ಲಿ ಬುಧವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ (UNSC) ನಡೆದಿದೆ. ಈ ವೇಳೆ ಭಾರತವೂ ಕಾರ್ಯವಿಧಾನದ ಮತ (Procedural Vote) ಆಗಿ ರಷ್ಯಾ ವಿರುದ್ಧ ಮತ ಚಲಾಯಿಸಿದೆ.

ಕಳೆದ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಮಾಡಿದ್ದು, ಇದುವರೆಗೂ ಸಾವಿರಾರು ಜನರನ್ನು ಹತ್ಯೆಗೈದಿದೆ. ಹಾಗಾಗಿ, ವಿಶ್ವಸಂಸ್ಥೆಯು ಹಲವು ಬಾರಿ ರಷ್ಯಾ ವಿರುದ್ಧ ಹರಿಹಾಯ್ದಿದೆ. ಹಾಗೆಯೇ, ರಷ್ಯಾ ವಿರುದ್ಧ ನಿರ್ಣಯ ತೆಗೆದುಕೊಂಡಿದೆ. ಇಂತಹ ನಿರ್ಣಯಗಳ ಪರವಾಗಿ ಅಥವಾ ರಷ್ಯಾ ವಿರುದ್ಧ ಮತ ಚಲಾಯಿಸುವುದರಿಂದ ಭಾರತ ದೂರ ಉಳಿದಿತ್ತು. ಅಲ್ಲದೆ, ಜಗತ್ತಿನ ಎಚ್ಚರಿಕೆಯನ್ನು ಕಡೆಗಣಿಸಿ ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಂಡಿತ್ತು.

ಇದನ್ನೂ ಓದಿ | ರಷ್ಯಾ ಮತ್ತು ಉಕ್ರೇನ್‌ ಕದನ ವಿರಾಮಕ್ಕೆ ಸದ್ದಿಲ್ಲದೆ ಭಾರತದ ಪ್ರಯತ್ನ: ಮಾಸ್ಕೋದಲ್ಲಿ ದೋವಲ್‌

Exit mobile version