Site icon Vistara News

India vs Bharat: ಯಾವ ರಾಷ್ಟ್ರಗಳು ತಮ್ಮ ಹೆಸರು ಬದಲಿಸಿಕೊಂಡಿವೆ? ಪರ್ಷಿಯಾ ಇರಾನ್ ಆಗಿದ್ದು ಹೇಗೆ?

India vs Bharat

ನವದೆಹಲಿ: ದೇಶದಲ್ಲೀಗ ಇಂಡಿಯಾ ವರ್ಸಸ್ ಭಾರತ್ (India vs Bharat) ಎಂಬ ಚರ್ಚೆ ಜೋರಾಗಿದೆ. ಜಿ20 ವಿಶ್ವ ನಾಯಕರಿಗೆ ನೀಡಲಾದ ಆಮಂತ್ರಣ ಪತ್ರಿಕೆಗಳಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ (President of Bharat) ಎಂದು ಪ್ರಕಟಗೊಂಡ ಬಳಿಕ, ದೇಶದ ಹೆಸರು ಬದಲಾವಣೆಯ ಕುರಿತಾದ ಚರ್ಚೆಗಳು ಸಿಕ್ಕಾಪಟ್ಟೆಯಾಗುತ್ತಿವೆ. ಈ ಮಧ್ಯೆ, ಸೆಪ್ಟೆಂಬರ್ 18ರಿಂದ ಐದು ದಿನಗಳ ಕಾಲ ನಡೆಯಲಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ (Parliament Special Session) ಭಾರತದ ಸಂವಿಧಾನದಲ್ಲಿ ಬಳಕೆಯಾಗಿರುವ ಇಂಡಿಯಾ (India) ಪದಗಳ ಬದಲಿಗೆ ಭಾರತ್ (Bharat) ಎಂದು ಸೇರಿಸುವ ಕುರಿತು ವಿಧೇಯಕ ಮಂಡನೆಯಾಗಲಿದೆ (Bill) ಎಂದು ಹೇಳಲಾಗುತ್ತಿದೆ. ಹಾಗಾಗಿ, ಇಂಡಿಯಾ ವರ್ಸಸ್ ಭಾರತ್ ಎಂಬ ಚರ್ಚೆ ಜೋರಾಗಿದೆ. ಆದರೆ, ಭಾರತ ಮಾತ್ರವೇ ತನ್ನ ಹೆಸರು ಬದಲಿಸುತ್ತಿದೆಯೇ? ಹಾಗೇನೂ ಇಲ್ಲ. ಇತ್ತೀಚಿನ ಕೆಲವು ವರ್ಷಗಳಲ್ಲಿ ಹಲವು ಸರ್ಕಾರಗಳು ತಮ್ಮ ದೇಶಗಳ ಹೆಸರನ್ನು ಮರುನಾಮಕರಣ ಮಾಡಿವೆ. ಯಾವೆಲ್ಲ ದೇಶಗಳ ಹೆಸರು ಬದಲಾಗಿದೆ ನೋಡೋಣ ಬನ್ನಿ.

ಯಾವ ದೇಶಗಳ ಹೆಸರು ಬದಲಾವಣೆ?

ಬರ್ಮಾದಿಂದ ಮ್ಯಾನ್ಮಾರ್. ಭಾರತದ ನರೆಯ ರಾಷ್ಟ್ರವನ್ನು ಬರ್ಮನ್ ಜನರು ಹೆಚ್ಚಿರುವ ಕಾರಣಕ್ಕೆ ಬರ್ಮಾ ಎಂದು ಕರೆಯಲಾಗುತ್ತಿತ್ತು. ಸೇನಾಡಳಿತದ ದಬ್ಬಾಳಿಕೆ ಒಳಗಾಗಿದ್ದ ಈ ರಾಷ್ಟ್ರದ ಬರ್ಮಾ ಎಂಬ ಹೆಸರನ್ನು 1989ರಲ್ಲಿ ಸಡನ್ ಆಗಿ ಬರ್ಮಾದಿಂದ ಮ್ಯಾನ್ಮಾರ್ ಎಂದು ಬದಲಿಸಲಾಯಿತು.

ಶ್ರೀಲಂಕಾ ಆದ ಸಿಲೋನ್. ಭಾರತದ ದಕ್ಷಿಣಕ್ಕಿರುವ ದ್ವೀಪ ರಾಷ್ಟ್ರದ ಮೊದಲ ಹೆಸರು ಸಿಲೋನ್ ಎಂದಿತ್ತು. 2011ರಲ್ಲಿ ಶ್ರೀಲಂಕಾ ಸರ್ಕಾರ ಸಂಪೂರ್ಣವಾಗಿ ವಸಾಹತುಶಾಹಿಯ ಸಿಲೋನ್ ಹೆಸರನ್ನು ಎಲ್ಲ ಸರ್ಕಾರಿ ದಾಖಲೆ ಪತ್ರಗಳಿಂದ ಅಳಿಸಿ ಹಾಕಿತು. 1972ರಲ್ಲಿ ಸಿಲೋನ್ ಹೆಸರನ್ನು ಶ್ರೀಲಂಕಾ ಎಂದು ಬದಲಿಸಲಾಯಿತು.

ಕಾಂಬೋಡಿಯಾ ಆದ ಕಂಪೂಚಿಯಾ. ಹಾಗೆ ನೋಡಿದರೆ, ಕಾಂಬೋಡಿಯಾ ಹೆಸರು ಎಂದಿಗೂ ಬದಲಾವಣೆಯಾಗಿರಲಿಲ್ಲ. ಕಾಂಬೋಡಿಯಾ ಹೆಸರನ್ನು ಕಂಪೂಚಿಯಾದಿಂದಲೇ ಪಡೆಯಲಾಗಿದೆ. ಇದು ಇಂಗ್ಲಿಷ್‌ನ ಭಾಷಾಂತರವಾಗಿದೆ. ಕಮ್ಯುನಿಸ್ಟ್ ಸರ್ಕಾರವು ಕಂಪೂಚಿಯಾ ಎಂದು ಅಧಿಕೃತವಾಗಿ ಕರೆಯುತ್ತಿತ್ತು. ಆದರೆ, ಎಡಪಕ್ಷಗಳ ಸರ್ಕಾರವು ಪತನವಾದ ನಂತರ ಕಾಂಬೋಡಿಯಾ ಎಂದು ಕರೆಯಲು ಶುರು ಮಾಡಲಾಯಿತು.

ಸ್ವಾಜಿಲ್ಯಾಂಡ್ ಆದ ಎಸ್ವಟಿನಿ. ಕಿಂಗ್ ಮೂರನೇ ಮಸ್ವಿಟಿ ಅವರು ಸ್ವಾಜಿಲ್ಯಾಂಡ್ ಹೆಸರನ್ನು 2018ರಲ್ಲಿ ಎಸ್ವಟಿನಿ ಎಂದು ಮರುನಾಮಕರಣ ಮಾಡದರು. ಸ್ವಿಜರ್ಲೆಂಡ್ ಮತ್ತು ಸ್ವಾಜಿಲ್ಯಾಂಡ್‌ ನಡುವೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ಹೆಸರು ಬದಲಾಯಿಸಲಾಯಿತು.

ರಿಪಬ್ಲಿಕ್ ಆಫ್ ನಾರ್ತ್ ಮ್ಯಾಸಿಡೋನಿಯಾ. 2019ರಲ್ಲಿ ರಿಪಬ್ಲಿಕ್ ಆಫ್ ಮ್ಯಾಸಿಡೋನಿಯಾ ಹೆಸರನ್ನು ರಿಪಬ್ಲಿಕ್ ಆಫ್ ನಾರ್ತ್ ಮ್ಯಾಸಿಡೋನಿಯಾ ಎಂದು ಮರುನಾಮಕರಣ ಮಾಡಲಾಯಿತು. ಆದರೆ, ಅಲ್ಲಿನ ನಾಗರಿಕರನ್ನು ಮ್ಯಾಸಿಡೋನಿಯನ್ಸ್ ಎಂದು ಕರೆಯಬೇಕು ಹೊರತು ನಾರ್ತ್ ಮ್ಯಾಸಿಡೋನಿಯನ್ಸ್ ಎಂಬ ಕಟ್ಟಪ್ಪಣೆ ಕೂಡ ಮಾಡಲಾಯಿತು.

ಇರಾನ್ ಆಗಿ ಬದಲಾದ ಪರ್ಷಿಯಾ. ಈಗಿನ ಇರಾನ್ ಮೂಲ ಹೆಸರು ಪರ್ಷಿಯಾ. ರೆಝಾ ಶಾ ಅವರು ರಾಜನಾದಾಗ 1935ರಲ್ಲಿ ಈ ಹೆಸರು ಬದಲಿಸಲಾಯಿತು. ಇಷ್ಟಾಗಿಯೂ ಸಾಂಸ್ಕೃತಿಕವಾಗಿಯೂ ಈಗಲೂ ಪರ್ಷಿಯನ್ ಎಂದು ಉಲ್ಲೇಖಿಸಲಾಗುತ್ತದೆ. ಆಹಾರ, ಕಲೆ ಮತ್ತು ಸಾಹಿತ್ಯದಲ್ಲಿ ಪರ್ಷಿಯನ್ ಹಾಸು ಹೊಕ್ಕಾಗಿದೆ.

ಈ ಸುದ್ದಿಯನ್ನೂ ಓದಿ: India vs Bharat: ‘ಭಾರತ್’ ಹೆಸರಿನಲ್ಲೇ ಇಂದಿರಾ ಗಾಂಧಿ ಪ್ರಮಾಣ! ಕಾಂಗ್ರೆಸ್‌ಗೆ ಟಾಂಗ್ ನೀಡಿದ ಅಸ್ಸಾಮ್ ಸಿಎಂ

ಟರ್ಕಿಗೆ Turkiye (ತುರ್ಕಿಯೆ) ಎಂದು ಮರು ನಾಮಕರಣ. 2022ರಲ್ಲಿ ಟರ್ಕಿ ಸರ್ಕಾರವು ತಮ್ಮ ರಾಷ್ಟ್ರದ ಹೆಸರನ್ನು ಟರ್ಕಿ ಎಂಬುದರ ಬದಲಿಗೆ Turkiye (ತುರ್ಕಿಯೆ) ಎಂದು ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿತು.

ನೆದರ್ಲೆಂಡ್ ಆದ ಹಾಲೆಂಡ್. ತನ್ನ ಜಾಗತಿಕ ಇಮೇಜ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಡಚ್ ಸರ್ಕಾರವು ಹಾಲೆಂಡ್ ದೇಶಕ್ಕೆ ನೆದರ್ಲೆಂಡ್ ಎಂದು ಮರುನಾಮಕರಣ ಮಾಡಿತು.

ಜೆಕಿಯಾ ಆದ ಜೆಕ್ ರಿಪಬ್ಲಿಕ್. ಈ ವರ್ಷದ ಆರಂಭದಲ್ಲಿ ಜೆಕ್ ಗಣರಾಜ್ಯದ ಹೆಸರನ್ನು ಜೆಕಿಯಾ ಎಂದು ಮರುನಾಮಕರಣ ಮಾಡಲಾಯಿತು. ಕಂಪನಿಗಳಿಗೆ ಮತ್ತು ಕ್ರೀಡಾ ತಂಡಗಳಿಗೆ ದೇಶದ ಹೆಸರನ್ನು ಸುಲಭವಾಗಿ ಬಳಸಲು ಅನುಕೂಲವಾಗಲಿ ಎಂದು ಅಲ್ಲಿನ ಸರ್ಕಾರವು ದೇಶದ ಹೆಸರನ್ನು ಬದಲಿಸಿತು. 2016ರಿಂದ ಈ ಹೆಸರು ಬದಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version