ನವದೆಹಲಿ: ಪ್ರತಿಪಕ್ಷಗಳು (Opposition Parties) ತಮ್ಮ ಕೂಟಕ್ಕೆ ಇಂಡಿಯಾ (India Bloc) ಎಂದು ನಾಮಕರಣ ಮಾಡಿದ ಬೆನ್ನಲ್ಲೇ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Assam CM Himanta Biswa Sharma) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಇಂಡಿಯಾ (India) ಬದಲಿಗೆ ಭಾರತ್ (Bharat) ಎಂದು ಬದಲಿಸಿದ್ದರು. ಅವರೀಗ ಇಂಡಿಯಾ ವರ್ಸಸ್ ಭಾರತ್ ಚರ್ಚೆಗೆ ಸೇರ್ಪಡೆಯಾಗಿದ್ದು, ಕಾಂಗ್ರೆಸ್‌ನ (Congress Party) ಅಗ್ರ ನಾಯಕಿಯಾಗಿದ್ದ ಇಂದಿರಾ ಗಾಂಧಿ (Indira Gandhi) ಅವರು ಭಾರತ್ ಕಾ ಪ್ರಧಾನ ಮಂತ್ರಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ. ಇಂದಿರಾ ಗಾಂಧಿ ಅವರು ಭಾರತ್ ಕಾ ಪ್ರಧಾನ್ ಮಂತ್ರಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರೆ ಹೊರತು ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ ಎಂದಲ್ಲ ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಹಿಮಂತ್ ಬಿಸ್ವಾ ಶರ್ಮಾ ಅವರು, ಕೆಲವು ದಿನಗಳ ಹಿಂದೆ ಅಮಿತ್ ಶಾ ಅವರು ಸಂಸತ್ತಿನಲ್ಲಿ ಭಾರತೀಯ ನ್ಯಾಯ ಸಂಹಿತಾ ವಿಧೇಯಕವನ್ನು ಮಂಡಿಸಿದ್ದಾರೆ. ಆಗ ಯಾರೂ ಭಾರತ ಪದಕ್ಕೆ ವಿರೋಧಿಸಲಿಲ್ಲ. ಭಾರತ್ ಮತ್ತು ಇಂಡಿಯಾ ಅಂತರ್ ಸಂಪರ್ಕಹೊಂದಿರುವ ಪದಗಳಾಗಿವೆ. 2016ರಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿರ್ಧಾರವಾಗಿದೆ ಎಂದು ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ನನಗೆ ನೆನಪಿರುವಂತೆ ಡಾ. ಮನಮೋಹನ್ ಸಿಂಗ್ ಅವರೂ ಭಾರತ್ ಕಾ ಪ್ರಧಾನ ಮಂತ್ರಿ ಎಂದು ಪ್ರಮಾಣ ವಚನ ಸ್ವೀಕರಿಸಿದ್ದರು. ದೇವೇಗೌಡ ಅವರು ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದರು. ಈ ಕುರಿತು ನಾನು ಗೂಗಲ್‌ನಲ್ಲಿ ಸರ್ಚ್ ಮಾಡಿದೆ ಆದರೆ ಮಾಹಿತಿ ಸಿಗಲಿಲ್ಲ. ನನಗೆ ನೆನಪಿರುವ ಹಾಗೆ ಇದು ಸತ್ಯ. ಹಾಗೆಯೇ ನನಗೆ ಗೊತ್ತಿರುವ ಪ್ರಕಾರ, ಇಂದಿರಾ ಗಾಂಧಿ ಅವರು ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ ಬದಲಿಗೆ ಭಾರತ್ ಕಾ ಪ್ರಧಾನ್ ಮಂತ್ರಿ ಎಂದೇ ಪ್ರಮಾಣ ವಚನ ಸ್ವೀಕರಿಸಿದ್ದರು. ಹಾಗಾಗಿ, ಈ ಚರ್ಚೆಯ ವಿಷಯವೇ ಅಲ್ಲ ಎಂದು ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: India vs Bharat: ಭಾರತವು ಅಧಿಕೃತವಾಗಿ ‘ಇಂಡಿಯಾ’ ಕೈ ಬಿಟ್ಟರೆ, ಪಾಕಿಸ್ತಾನದ ಪಾಲು!
ಇದೇ ವೇಳೆ, ಭಾರತದ ಸೆಂಟ್ರಲ್ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ಇಂಡಿಯಾ ಹೆಸರು ಬದಲಿಸಬೇಕು ಎಂದು ಹಿಮಂತ್ ಬಿಸ್ವಾ ಶರ್ಮಾ ಹೇಳಿದರು. ದೇಶದ ಕೇಂದ್ರೀಯ ಬ್ಯಾಂಕ್ ಎನಿಸಿಕೊಂಡಿರುವ ರಿಸರ್ವ್ ಬ್ಯಾಂಕ್ ಇಂಡಿಯಾವನ್ನು ರಿಸರ್ವ್ ಬ್ಯಾಂಕ್ ಆಫ್ ಭಾರತ್ ಎಂದು ಮರುನಾಮಕರಣ ಮಾಡಬೇಕು. ಇದು ನವೋದಯದ ಹಂತ. ಅಸ್ಸಾಂ ಹಲವಾರು ಹಳೆಯ ಪರಂಪರೆಗಳನ್ನು ಬದಲಾಯಿಸಿದೆ ಮತ್ತು ಕೇಂದ್ರದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.