Site icon Vistara News

PM Narendra Modi: ನನ್ನ 3ನೇ ಅವಧಿಯಲ್ಲಿ ಭಾರತ ಜಗತ್ತಿನ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಲಿದೆ! ಇದು ಮೋದಿ ‘ಗ್ಯಾರಂಟಿ’

PM Narendra Modi

ನವದೆಹಲಿ: ನನ್ನ ಮೂರನೇ ಅವಧಿಯಲ್ಲಿ ಭಾರತದ ಆರ್ಥಿಕತೆಯು (Indian Economy) ಜಗತ್ತಿನ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು. ದಿಲ್ಲಿಯಲ್ಲಿ ಮರುನಿರ್ಮಾಣ ಮಾಡಲಾದ ಪ್ರಗತಿ ಮೈದಾನ್ (Bharat Mandapam) ಉದ್ಘಾಟನೆ ವೇಳೆ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದ ಪಶ್ಚಿಮದಿಂದ ಪೂರ್ವ, ಉತ್ತರದಿಂದ ದಕ್ಷಿಣದವರೆಗೂ ಅಭಿವೃದ್ಧಿಯಾಗುತ್ತಿದೆ. ಜಗತ್ತಿನ ಅತಿ ಎತ್ತರದ ರೈಲು ಸೇತುವೆ, ಉದ್ದದ ಸುರಂಗ ಮಾರ್ಗ, ಅತಿ ಹೆಚ್ಚು ರಸ್ತೆ, ಅತಿ ದೊಡ್ಡ ಸ್ಟೇಡಿಯಂ, ಜಗತ್ತಿನ ಅತಿ ಎತ್ತರದ ಮೂರ್ತಿ ಎಲ್ಲವೂ ಈಗ ಭಾರತದಲ್ಲಿದೆ. ದೇಶದ ಆಕಾಂಕ್ಷೆಗಳಿಗೆ ಅನುಗುಣವಾಗಿ ಆರ್ಥಿಕತೆಯ ಬೆಳವಣಿಗೆ ಇರುತ್ತದೆ ಎಂದು ಹೇಳಿದರು.

ನನ್ನ ಮೊದಲ ಅವಧಿಯಲ್ಲಿ ಭಾರತವು ಅಗ್ರ 10 ಆರ್ಥಿಕತೆ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. ನನ್ನ ಎರಡನೇ ಅವಧಿಯಲ್ಲಿ ಅದೀಗ 5ನೇ ಸ್ಥಾನಕಕೆ ಜಿಗಿದಿದೆ. ಈ ಹಿಂದಿನ ಟ್ರ್ಯಾಕ್ ರೆಕಾರ್ಡ್‌ಗಳ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ. ನನ್ನ ಮೂರನೇ ಅವಧಿಯಲ್ಲಿ ಭಾರತವು ಮೂರು ಅಗ್ರ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು. ಇದು ಮೋದಿಯ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಭಾರತ್ ಮಂಟಪ ಎಂದು ಮರುನಾಮಕರಣಗೊಂಡಿರುವ ಇಂಟರ್‌ನ್ಯಾಷನಲ್ ಎಕ್ಸಿಬಿಷನ್- ಕನ್ವೆನ್ಷನ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು, ರಾಜಕೀಯ ಭಾಷಣವನ್ನೇ ಮಾಡಿದರು. ಈ ವೇಳೆ ಮೋದಿ ತಮ್ಮ ಅಧಿಕಾರವಧಿಯ 9 ವರ್ಷಗಳ ಸಾಧನೆಯನ್ನು 60 ವರ್ಷಗಳ ಹಿಂದಿನ ಸರ್ಕಾರಗಳ ಸಾಧನೆಗಳೊಂದಿಗೆ ತುಲನೆ ಮಾಡಿ, ಮುಂಬರುವ ಲೋಕಸಭೆ ಚುನಾವಣೆಗೆ ಕಹಳೆ ಮೊಳಗಿಸಿದರು.

ಈ ಸುದ್ದಿಯನ್ನೂ ಓದಿ: INDIA Alliance: ಸಂವಿಧಾನ, ಸಂಸತ್ತು ಕುರಿತು ಮೋದಿಗೆ ಯಾಕಿಷ್ಟು ದ್ವೇಷ? ಪ್ರಧಾನಿ ‘ಇಂಡಿಯಾ’ ಟೀಕೆಗೆ ತಿರುಗೇಟು

ಕಳೆದ 60 ವರ್ಷಗಳಲ್ಲಿ ಹಿಂದಿನ ಸರ್ಕಾರಗಳು ಕೇವಲ 29 ಸಾವಿರ ರೈಲು ಮಾರ್ಗಗಳನ್ನು ವಿದ್ಯುದ್ದೀಕರಣ ಮಾಡುವಲ್ಲಿ ಯಶಸ್ವಿಯಾಗಿದ್ದವು. ಆದರೆ ನನ್ನ ಸರ್ಕಾರವು ಕಳೆದ ಒಂಬತ್ತು ವರ್ಷಗಳಲ್ಲಿ ಸಾಧಿಸಿದ 40,000 ಕಿಮೀ ರೈಲು ಮಾರ್ಗ ವಿದ್ಯುದ್ದೀಕರಣ ಮಾಡಿದೆ. ಈಗ ನಾವು ಪ್ರತಿ ತಿಂಗಳು 6 ಕಿಮೀ ಮೆಟ್ರೋ ಮಾರ್ಗವನ್ನು ಪೂರ್ಣಗೊಳಿಸುತ್ತಿದ್ದೇವೆ. 4 ಲಕ್ಷ ಕಿ.ಮೀ ಗ್ರಾಮ ರಸ್ತೆಗಳು ನಿರ್ಮಾಣ, 2014ರಲ್ಲಿ ದೆಹಲಿ ವಿಮಾನ ನಿಲ್ದಾಣದ ಸಾಮರ್ಥ್ಯ ವರ್ಷಕ್ಕೆ 5 ಕೋಟಿಯಷ್ಟಿತ್ತು. ಈಗ 7.5 ಕೋಟಿಯಾಗಿದೆ, ವಿಮಾನ ನಿಲ್ದಾಣಗಳ ಸಂಖ್ಯೆ 150ಕ್ಕೆ ತಲುಪಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಧನೆಯನ್ನು ಬಣ್ಣಿಸಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version