ನವದೆಹಲಿ: ಭಾರತವು ಶೀಘ್ರವೇ ವಿಶ್ವಗುರು ರಾಷ್ಟ್ರವಾಗಲಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಹೇಳಿದ್ದಾರೆ. ಭಾರತ ಮಾತ್ರವೇ ಎಲ್ಲರೂ ಒಂದೇ ಎಂದು ಹೇಳುತ್ತದೆ. ಹಾಗಾಗಿಯೇ, ಜಗತ್ತಿನ ಮೂಲೆ ಮೂಲೆಯಲ್ಲಿನ ಸಂಪ್ರಾದಯಗಳು ಇಲ್ಲಿ ಸುರಕ್ಷಿತವಾಗಿವೆ. ಇಡೀ ಜಗತ್ತೇ ಹೇಳುತ್ತಿದೆ; ಭಾರತವು ಸೂಪರ್ ಪವರ್ ರಾಷ್ಟ್ರವಾಗುತ್ತಿದೆ ಎಂದು. ಹಾಗಾಗಿ ಭಾರತವು ವಿಶ್ವ ಗುರು ರಾಷ್ಟ್ರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸನಾತನ ಸಂಸ್ಕೃತಿಯು ಎಲ್ಲರನ್ನೂ ಒಂದುಗೂಡಿಸುತ್ತದೆ. ಕೇವಲ ಭಾರತ ಮಾತ್ರವೇ ಎಲ್ಲರೂ ಒಂದು ಎಂದು ಹೇಳುತ್ತದೆ. ಈ ಕಾರಣಕ್ಕಾಗಿಯೇ, ಜಗತ್ತಿನ ಎಲ್ಲ ಮೂಲೆಗಳ ಸಂಪ್ರದಾಯಗಳು ಭಾರತದಲ್ಲಿ ತಮ್ಮಷ್ಟಕ್ಕೆ ತಾವು ಸುರಕ್ಷಿತ ಎಂದು ಭಾವಿಸುತ್ತವೆ. ನಮ್ಮ ಹಿಂದೂ ಸನಾತನ ಧರ್ಮವು ವಿಶ್ವ ಕಲ್ಯಾಣವನ್ನು ಬಯಸುತ್ತದೆ ಎಂದು ಮೋಹನ್ ಭಾಗವತ್ ಅವರು ಹೇಳಿದರು.
ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಆಯೋಜಿಸಲಾಗಿದ್ದ ಆದ್ಯ ಜಗದ್ಗುರು ರಾಮಚಂದ್ರಚಾರ್ಯ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರು ಮಾತನಾಡುತ್ತಿದ್ದರು. ಭಾರತವು ವಿಶ್ವ ಗುರು ಎನಿಸಿಕೊಳ್ಳಲಿದೆ. ಇಡೀ ಜಗತ್ತೇ ಭಾರತವು ಸೂಪರ್ ಪವರ್ ರಾಷ್ಟ್ರ ಎಂದು ಹೇಳುತ್ತಿದೆ ಎಂದರು.
ಯಾವು ತಾರತಮ್ಯ ನೀತಿಯನ್ನು ಅನುಸರಿಸದಂತೆ ಹೇಳಿದ ಮೋಹನ್ ಭಾಗವತ್ ಅವರು, ಯಾವುದೇ ಧರ್ಮವು ತಾರತಾಮ್ಯಕ್ಕೆ ಬೆಂಬಲ ನೀಡುವುದಿಲ್ಲ. ದೇವರು ಕೂಡ ತನ್ನ ಯಾವುದೇ ಅವತಾರದಲ್ಲಿ ಜಾತಿ ತಾರತಮ್ಯವನ್ನು ಬೆಂಬಲಿಸಿಲ್ಲ. ನಮ್ಮ ಶಾಸ್ತ್ರಗಳು ಕೂಡ ಇದನ್ನೇ ಹೇಳುತ್ತವೆ ಎಂದು ಭಾಗವತ್ ಹೇಳಿದರು.
ಇದನ್ನೂ ಓದಿ: Mohan Bhagwat Remark: ಪಂಡಿತ ಎಂದರೆ ವಿದ್ವಾಂಸ, ಮೋಹನ್ ಭಾಗವತ್ ಹೇಳಿಕೆಗೆ ಸ್ಪಷ್ಟನೆ ನೀಡಿದ ಆರೆಸ್ಸೆಸ್
ಸನಾತನ ಧರ್ಮಕ್ಕೆ ಅನುಗುಣವಾಗಿ ನಿಮ್ಮ ಜೀವನವನ್ನು ಬದುಕಿ. ನಾವೆಲ್ಲರೂ ಧರ್ಮದ ದಾರಿಯಲ್ಲಿ ನಡೆದಾಗ ಮಾತ್ರವೇ ಶಾಮದೇವಚಾರ್ಯ ಅವರಂಥ ಸಂತರು ಬೋಧಿಸಿದ ತತ್ವಗಳನ್ನು ಪಾಲಿಸಲು ಸಾಧ್ಯವಾಗಲಿದೆ ಎಂದು ಭಾಗವತ್ ಅಭಿಪ್ರಾಯಪಟ್ಟರು.