Site icon Vistara News

President Draupadi Murmu | 25 ವರ್ಷದಲ್ಲಿ ವಿಶ್ವ ಗುರು ಆಗಲಿದೆ ಭಾರತ: ರಾಷ್ಟ್ರಪತಿ ಮುರ್ಮು ವಿಶ್ವಾಸ

Druapadi Murmu

ವಿಶಾಖಪಟ್ಟಣಂ: ಭಾರತವು ತನ್ನ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸಿಕೊಳ್ಳುವ ಹೊತ್ತಿಗೆ ವಿಶ್ವ ಗುರು ಆಗಲಿದೆ. ಆ ಮೂಲಕ ಪ್ರಾಚೀನ ಭಾರತದ ಗೌರವ ಮರಳಿ ಪಡೆಯಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಹೇಳಿದರು. ಇಲ್ಲಿನ ರಾಮಕೃಷ್ಣ ಬೀಚ್‌ನಲ್ಲಿ ಆಯೋಜಿಸಲಾಗಿದ್ದ ನೌಕಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತವನ್ನು ಶ್ರೇಷ್ಠ ರಾಷ್ಟ್ರ ಎಂದು ಗುರುತಿಸಲಾಗುತ್ತದೆ. ಯಾಕೆಂದರೆ, ಅಂಥ ಶಕ್ತಿ ಭಾರತದಲ್ಲಿ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಗೀತ, ಕ್ರೀಡೆ, ಸಂಸ್ಕೃತಿ, ಸೇನೆ ಸೇರಿದಂತೆ ಎಲ್ಲದರಲ್ಲೂ ಭಾರತೀಯ ಶಕ್ತಿವಂತರಾಗಿದ್ದಾರೆ. ಪ್ರತಿಯೊಬ್ಬರು ಭಾರತವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲು ಕೆಲಸ ಮಾಡುತ್ತಿದ್ದಾರೆ. ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವನ್ನು ಆಚರಿಸಿಕೊಳ್ಳುವ ಹೊತ್ತಿಗೆ ವಿಶ್ವ ಗುರುವಾಗಲಿದೆ ಎಂಬ ವಿಶ್ವಾಸವು ನನಗೆ ಇದೆ ಎಂದು ದ್ರೌಪದಿ ಮುರ್ಮು ಅವರು ಹೇಳಿದರು.

ಭಾರತವು ಮೂರು ಕಡೆ ಸಮುದ್ರ ಮತ್ತು ಮತ್ತೊಂದು ಕಡೆ ಎತ್ತರದ ಪ್ರರ್ವತ ಶ್ರೇಣೆಯನ್ನು ಹೊಂದಿದೆ. ಹಾಗಾಗಿ ಇದೊಂದು ಅಂತರ್ಗತವಾಗಿಯೇ ಕಡಲ ರಾಷ್ಟ್ರವಾಗಿದೆ. ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಸಾಗರಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಭಾರತದ ಸಾಗರಗಳ ಗಡಿ ಸುರಕ್ಷತೆಯನ್ನು ಭಾರತೀಯ ನೌಕಾ ಪಡೆ ನಿರ್ವಹಿಸುತ್ತಿದೆ ಎಂದು ಅವರು ಇದೇ ವೇಳೆ ಹೇಳಿದರು.

ಇದನ್ನೂ ಓದಿ | ಕಲಿತ ಶಾಲೆ, ಉಳಿದುಕೊಂಡಿದ್ದ ಹಾಸ್ಟೆಲ್‌ಗೆ ಭೇಟಿ ನೀಡಿ, ಭಾವುಕರಾಗಿ ಕಣ್ಣೀರು ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Exit mobile version