ನವದೆಹಲಿ: ಭಯೋತ್ಪಾದನೆ ನಿಗ್ರಹ(tackle terrorism), ಮಾದಕ ವಸ್ತು ಕಳ್ಳ ಸಾಗಣೆ (drug trafficking) ತಡೆ ಹಾಗೂ ಸೈಬರ್ ದಾಳಿಗಳ ಬೆದರಿಕೆ (Cyber Attack) ಎದುರಿಸಲು ಭಾರತವು (India) ಮಧ್ಯ ಏಷ್ಯಾದ ಐದು ರಾಷ್ಟ್ರಗಳಿಗೆ ನೆರವು ನೀಡಲಿದೆ (Asian Countries) ಎಂದು ಎನ್‌ಎಸ್‌ಎ ಅಜಿತ್ ದೋವಲ್ (NSA Ajit Doval) ಹೇಳಿದ್ದಾರೆ. ಭಾರತೀಯ ಮತ್ತು ಕೇಂದ್ರ ಏಷ್ಯಾ ಭದ್ರತಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿರುವ ಅಜಿತ್ ದೋವಲ್ ಅವರು, ಆಯಕಟ್ಟಿನ ಪ್ರದೇಶದೊಂದಿಗೆ ಸಹಕಾರ ಮತ್ತು ಸಂಪರ್ಕವನ್ನು ಹೆಚ್ಚಿಸುವ ಕ್ರಮದ ಭಾಗವಾಗಿ ಸೈಬರ್ ಬೆದರಿಕೆಗಳ ವಿರುದ್ದ ರಕ್ಷಣಾ ವ್ಯವಸ್ಥೆ ನಿರ್ಮಾಣ ಮತ್ತು ಮಾದಕವಸ್ತು ಕಳ್ಳ ಸಾಗಣೆ ಹಾಗೂ ಭಯೋತ್ಪಾದನೆ ನಿಗ್ರಹ ಕುರಿತು ಮಧ್ಯ ಏಷ್ಯಾದ ಐದು ರಾಷ್ಟ್ರಗಳಿಗೆ ಭಾರತ ನೆರವು ನೀಡಲಿದೆ ಎಂದು ಪ್ರಕಟಿಸಿದರು.
ಕಜಖಸ್ತಾನ್ ಆತಿಥ್ಯ ವಹಿಸಿರುವ ಭಾರತೀಯ ಮತ್ತು ಕೇಂದ್ರ ಏಷ್ಯಾ ಭದ್ರತಾ ಅಧಿಕಾರಿಗಳ ಎರಡನೇ ಸಭೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರು, ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳು ಸಾಮಾನ್ಯ ಭದ್ರತಾ ಸವಾಲುಗಳನ್ನು ಎದುರಿಸುತ್ತಿವೆ. ಕೆಲವರು ನೆರೆ ಹೊರೆ ರಾಷ್ಟ್ರಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆಂದು ಪಾಕಿಸ್ತಾನದ ಹೆಸರು ಹೇಳದೇ ತಿವಿದರು.
ಜಗತ್ತು ದೊಡ್ಡ ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಸಭೆ ಆಯೋಜಿಸಲಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಇತ್ಯರ್ಥಗೊಳಿಸಲು ಮಾತುಕತೆಯೊಂದೇ ಉತ್ತರ ಎಂದು ದೋವಲ್ ಒತ್ತಿ ಒತ್ತಿ ಹೇಳಿದರು. ರಾಜತಾಂತ್ರಿಕತೆಯು ಎಲ್ಲಾ ಸಂಘರ್ಷ ಪರಿಹಾರ ಉಪಕ್ರಮಗಳ ಕೇಂದ್ರವಾಗಿರಬೇಕು ಮತ್ತು ಭಾರತವು ಎಲ್ಲಾ ಮಧ್ಯ ಏಷ್ಯಾದ ರಾಜ್ಯಗಳೊಂದಿಗೆ ಅರ್ಥಪೂರ್ಣ ಮತ್ತು ಸುಸ್ಥಿರತೆಗಾಗಿ ಬೆಂಗಾವಲಾಗಿ ನಿಂತಿರುತ್ತದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: NSA Ajit Doval: ಅಜಿತ್ ದೋವಲ್ ಲಂಡನ್ ಭೇಟಿ: ಖಲಿಸ್ತಾನ್, ಬಿಬಿಸಿ, ಭಯೋತ್ಪಾದನೆ ವಿಚಾರದಿಂದಾಗಿ ಈ ಬಾರಿ ಮಾತುಕತೆ ಕಠಿಣ
ಭಯೋತ್ಪಾದನೆಯು ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಅಂತಾರಾಷ್ಟ್ರೀಯ ಅಂತರರಾಷ್ಟ್ರೀಯ ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆಗಳಲ್ಲಿ ಒಂದಾಗಿದೆ. ಇಂಥವುಗಳಿಗೆ ಯಾವುದೇ ರೀತಿಯ ಪ್ರೇರಣೆ ಅಥವಾ ಕಾರಣವನ್ನು ಲೆಕ್ಕಿಸದೆ ಅಂತಹ ಎಲ್ಲಾ ಕೃತ್ಯಗಳನ್ನು ನಾವು ಖಂಡಿಸಬೇಕಿದೆ. ಮಾದಕವಸ್ತು ಕಳ್ಳಸಾಗಣೆಯನ್ನು ಭಯೋತ್ಪಾದಕ ಗುಂಪುಗಳು ಮತ್ತು ಸಂಘಟಿತ ಕ್ರಿಮಿನಲ್ ಗ್ಯಾಂಗ್‌ಗಳು ಹೆಚ್ಚಾಗಿ ನಿಯಂತ್ರಿಸುವ ಗಂಭೀರ ಬೆದರಿಕೆಯಾಗಿದೆ ಮತ್ತು ಈ ಸಮಸ್ಯೆಯನ್ನು ನಿಭಾಯಿಸಲು ನಿಕಟ ಸಮನ್ವಯದ ಅಗತ್ಯ ಈಗ ಹೆಚ್ಚಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳ ಸಾಗಣೆ ನಿಗ್ರಹಕ್ಕಾಗಿ ಪೂರ್ಣ ಪ್ರಮಾಣದ ವ್ಯವಸ್ಥೆಯ ನೆರವು ನೀಡುವ ವಾಗ್ದಾನ ನೀಡಿದರು.
ಸೈಬರ್ ಬೆದರಿಕೆಗಳ ವಿರುದ್ಧ ರಕ್ಷಣೆ ಮತ್ತು ಸುರಕ್ಷಿತ ಸೈಬರ್ ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡಲು ಭಾರತವು ಮಧ್ಯ ಏಷ್ಯಾದ ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ. ಸಾಮರ್ಥ್ಯ ವೃದ್ಧಿ ಮತ್ತು ಅನುಭವಗಳ ಹಂಚಿಕೆಯು ಈ ಪ್ರದೇಶದಲ್ಲಿ ಸಹಕಾರವನ್ನು ಬಲಪಡಿಸಲು ಮೂಲಾಧಾರವಾಗಿರುವುದರಿಂದ ಕಾರ್ಯತಂತ್ರದ ಸೈಬರ್ ಅನುಭವಕ್ಕಾಗಿ ಮಧ್ಯ ಏಷ್ಯಾದ ರಾಷ್ಟ್ರಗಳ ಸೈಬರ್ ಭದ್ರತಾ ಸಂಸ್ಥೆಗಳ ಮುಖ್ಯಸ್ಥರನ್ನು ಭಾರತಕ್ಕೆ ಆಹ್ವಾನಿಸುತ್ತಿದ್ದೇವೆ ಎಂದು ಹೇಳಿದರು.