ನವದೆಹಲಿ: ಇಂಡಿಯನ್-ಅಮೆರಿಕನ್ ಪ್ರೊಫೆಸರ್ ಪವಿತ್ರಾ ಪ್ರಭಾಕರ್ (Pavithra Prabhakar) ಅವರಿಗೆ ಪ್ರತಿಷ್ಠಿತ ಅಮೆಜಾನ್ ರಿಸರ್ಚ್ ಪುರಸ್ಕಾರ ಸಂದಿದೆ. ಮಷಿನ್ ಲರ್ನಿಂಗ್ ಬೆಳವಣಿಗೆಯ ಕುರಿತು ನಡೆಸಿದ ಅಧ್ಯಯನಕ್ಕೆ ಈ ಪುರಸ್ಕಾರ ನೀಡಲಾಗಿದೆ. ಬಳಕೆದಾರರ ಋಣಾತ್ಮಕ ಅನುಭವವನ್ನು ಕಡಿಮೆ ಮಾಡುವ ಟೂಲ್ ವಿನ್ಯಾಸಗೊಳಿಸಿರುವುದು ಅವರ ಹೆಗ್ಗಳಿಕೆ. ಈ ಅಂಶವೇ ಅವರಿಗೆ ಅಮೆಜಾನ್ ರಿಸರ್ಚ್ ಅವಾರ್ಡ್‌ಗೆ ಆಯ್ಕೆಯಾಗುವಂತೆ ಮಾಡಿದೆ.
ಪವಿತ್ರಾ ಪ್ರಭಾಕರ್ ಅವರು ಸದ್ಯ ನ್ಯಾಷನಲ್ ಸೈನ್ಸ್ ಫೌಂಡೇಷನ್‌ನಲ್ಲಿ ಪ್ರೋಗ್ರಾಮಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಷಿನ್ ಲರ್ನಿಂಗ್-ಆಧಾರಿತ ಸಾಫ್ಟ್‌ವೇರ್ ಸಿಸ್ಟಮ್‌ಗಳ ಬಳಕೆದಾರರ ಅನುಭವಕ್ಕೆ ಅಡ್ಡಿಪಡಿಸುವ ಬದಲಾವಣೆಗಳನ್ನು ಕಡಿಮೆ ಮಾಡಲು ಟೂಲ್ ಬಳಸಿಕೊಳ್ಳಲಾಗುತ್ತದೆ.
ಪ್ರಭಾಕರ್ ಅವರು ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಗಳಿಸಿದ್ದಾರೆ. ಅನ್ವಯಿಕ ಗಣಿತದಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದಾರೆ. ಇಲಿನಾಯ್ಸ್ ವಿಶ್ವವಿದ್ಯಾಲಯ ಅಧ್ಯಯನ ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಯ ಸೆಂಟರ್ ಫಾರ್ ಮ್ಯಾಥ್‌ಮೆಟಿಕ್ಸ್ ಆಫ್ ಇನ್ಫಾರ್ಮೇಶನ್‌ನಿಂದ ಫೆಲೋಶಿಫ್ ಪಡೆದುಕೊಂಡಿದ್ದಾರೆ. ಹಲವು ಪ್ರಶಸ್ತಿಗಳು, ಎಕ್ಸ್‌ಲೆನ್ಸ್ ಅವಾರ್ಡ್‌ಗಳು ಅವರಿಗೆ ಸಂದಿವೆ.
ಇದನ್ನೂ ಓದಿ | Pramila Jayapal | ಭಾರತಕ್ಕೆ ವಾಪಸ್ ಹೋಗಿ! ಇಂಡಿಯನ್ ಅಮೆರಿಕನ್ ಮಹಿಳಾ ಸಂಸದೆಗೆ ಧಮ್ಕಿ!